More

    ವೀರಶೈವ ಸಾಹಿತ್ಯದಲ್ಲಿ ಭಕ್ತಿಗೆ ಅದ್ಭುತ ಸ್ಥಾನ

    ಬಸವನಬಾಗೇವಾಡಿ: ತತ್ವಜಾನ, ಇತಿಹಾಸ, ಪರಂಪರೆ, ಸಂಸ್ಕೃತಿ ಹೊಂದಿರುವ ವೀರಶೈವ ಸಾಹಿತ್ಯದಲ್ಲಿ ಭಕ್ತಿಗೆ ಅದ್ಭುತವಾದ ಸ್ಥಾನವಿದೆ ಎಂದು ಕೆ.ಎಲ್.ಇ ಸಂಸ್ಥೆಯ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಜಯಶ್ರೀ ಹಿರೇಮಠ ಹೇಳಿದರು.
    ಸ್ಥಳೀಯ ಬಿ.ಎಲ್.ಡಿ.ಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಹಿಂದಿ ಮತ್ತು ಕನ್ನಡ ವಿಭಾಗ ಹಾಗೂ ವಿಜಯಪುರದ ದಿ.ಬಾಬುರಾವ ಶೆಟ್ಟಿ ಟ್ರಸ್ಟ್ ಸಹಯೋಗದಲ್ಲಿ ಮಂಗಳವಾರ ನಡೆದ ಅಂತಾರಾಷ್ಟ್ರೀಯಮಟ್ಟದ ವಿಚಾರ ಸಂಕಿರಣದಲ್ಲಿ ‘ವೀರಶೈವ ಸಾಹಿತ್ಯದಲ್ಲಿ ಭಕ್ತಿಯ ಪ್ರಸ್ತುತತೆ’ ಕುರಿತಾಗಿ ಮಾತನಾಡಿದರು.
    ಕನ್ನಡಕ್ಕೆ ವಚನ ಸಾಹಿತ್ಯ ಅಮೂಲ್ಯ ಕೊಡುಗೆ ನೀಡಿದ್ದು, ಜನರ ವಿಚಾರಳು ವಚನಗಳಲ್ಲಿವೆ. ಶರಣರು ಬುದ್ಧಿಯೊಳಗೆ ಅನುಭಾವ ತುಂಬಿ ವಚನಗಳನ್ನು ರಚಿಸಿದ್ದಾರೆ. ಆತ್ಮ ಪರಮಾತ್ಮನಲ್ಲಿ ಲೀನವಾಗುವುದೆ ಭಕ್ತಿ. ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಬೇಕು. ಲಿಂಗ ತಾರತಮ್ಯ ಮಾಡಬಾರದು. ದಾಸೋಹ ಭಾವದಿಂದ ಜೀವನ ನಡೆಸಬೇಕು ಎಂದು ಹೇಳಿದರು.
    ‘ಅಲಕ್ಷಿತ ವಚನಗಾರ್ತಿಯರಲ್ಲಿ ಭಕ್ತಿಯ ಪ್ರಸ್ತುತತೆ’ ಕುರಿತಾಗಿ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕಿ ಡಾ.ಮೈತ್ರೆಯಿಣಿ ಗದಿಗೆಪ್ಪಗೌಡರ ಮಾತನಾಡಿದರು. ಹಿರಿಯ ಸಾಹಿತಿ ಎಂ.ಎಂ. ಪಡಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿ ಇದ್ದರು.

    ವೀರಶೈವ ಸಾಹಿತ್ಯದಲ್ಲಿ ಭಕ್ತಿಗೆ ಅದ್ಭುತ ಸ್ಥಾನ
    ವೀರಶೈವ ಸಾಹಿತ್ಯದಲ್ಲಿ ಭಕ್ತಿಗೆ ಅದ್ಭುತ ಸ್ಥಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts