More

    ಸ್ತ್ರೀ ಶಿಕ್ಷಣಕ್ಕೆ ಆದ್ಯತೆ ನೀಡಿದ ಮಹಾತ್ಮಜ್ಯೋತಿಬಾ ಫುಲೆ

    ಬಸವನಬಾಗೇವಾಡಿ: ಎಲ್ಲರಿಗೂ ಶಿಕ್ಷಣ ದೊರೆಯಬೇಕೆಂಬ ಮಹಾದಾಸೆಯೊಂದಿಗೆ ಮಹಾತ್ಮ ಜ್ಯೋತಿಬಾ ಫುಲೆ ಅವರು ದೇಶದಲ್ಲಿ ಹೆಣ್ಣು ಮಕ್ಕಳಿಗಾಗಿ ಶಾಲೆಯನ್ನು ತೆರೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ವಿಜಯಪುರ ಸೌಹಾರ್ದ ಬ್ಯಾಂಕ್ ನಿರ್ದೇಶಕ ಜಂಟಿಗರಾಯ ಮಾಲಗಾರ ಹೇಳಿದರು.

    ಪಟ್ಟಣದ ನಾಗೂರ ರಸ್ತೆಯ ಬಸವಣ್ಣನ ಕಟ್ಟಿಬಳಿ ಮಹಾತ್ಮ ಜ್ಯೋತಿಬಾ ಫುಲೆ ಅವರ 197 ನೇ ಜಯಂತಿ ಅಂಗವಾಗಿ ತಾಲೂಕು ಮಾಳಿ ಸಮಾಜದಿಂದ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಫುಲೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

    ಸಮಾಜ ಸುಧಾರಣೆ, ಸಮಾನತೆ ಹಾಗೂ ದೀನ ದಲಿತರು, ಹಿಂದುಳಿದ ವರ್ಗದವರ ಏಳಿಗೆಗಾಗಿ ಹಗಳಿರುಳು ಶ್ರಮಿಸಿದರು. ಅವರ ಹೋರಾಟದ ಲದಿಂದ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಅನೇಕ ಸಮುದಾಯದ ವ್ಯಕ್ತಿಗಳು ಸದ್ಯ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ ಎಂದು ಹೇಳಿದರು.

    ಸಿದ್ದಣ್ಣ ಕಲ್ಲೂರ, ಅಪ್ಪುಶಾ ಮಾಲಗಾರ, ಸಂಗಪ್ಪ ಮಾಲಗಾರ, ಈರಣ್ಣ ಮಠಪತಿ, ಮಂಜು ಮಾಲಗಾರ, ಸಂಜು ಪವಾರ, ಪವಡೆಪ್ಪ ಮಾಲಗಾರ, ಸಂಗಪ್ಪ ತೋಟದ, ಮುತ್ತು ಮಾಲಗಾರ, ರಮೇಶ ಮಾಲಗಾರ, ರವಿ ಮಾಲಗಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts