More

    ಪಾರಂಪರಿಕ ಪ್ರದೇಶ ಎನಿಸಿಕೊಳ್ಳಲಿದೆ ಬಸವನಗುಡಿ; ಪರಿಷೆ ಉದ್ಘಾಟಿಸಿದ ಸಿಎಂ ಭರವಸೆ

    ಬೆಂಗಳೂರು: ಐತಿಹಾಸಿಕ ಕಡಲೆಕಾಯಿ ಪರಿಷೆಯನ್ನು ಇಂದು ಉದ್ಘಾಟನೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬಸವನಗುಡಿಯನ್ನು ಪಾರಂಪರಿಕ ಪ್ರದೇಶವೆಂದು ಘೋಷಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

    ಬಸವನಗುಡಿ ಪರಿಷೆ ಎಂದರೆ ನಮ್ಮ ಎಲ್ಲರಿಗೂ ಅತ್ಯಂತ ಸಂತೋಷ ಸಡಗರ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟ ಈ ಕ್ಷೇತ್ರದ ಜನತೆಗೆ ನನ್ನ ನಮಸ್ಕಾರ. ಬಹಳ ದೊಡ್ಡ ಇತಿಹಾಸ ಪರಂಪರೆ ಇರುವಂತಹ ಕ್ಷೇತ್ರ ಬಸವನಗುಡಿ. ಈ ಭಾಗವನ್ನು ಪಾರಂಪರಿಕ ಪ್ರದೇಶ ಎಂದು ಘೋಷಿಸಲಾಗುವುದು ಎಂಬುದಾಗಿ ಅವರು ತಿಳಿಸಿದ್ದಾರೆ.

    ನಾನು ಶಾಲೆಯ ರಜೆಗಳಲ್ಲಿ ಮನೆಗೆ ಹೋದಾಗ ಹಸು-ಆಕಳುಗಳೊಂದಿಗೆ ಸಮಯ ಕಳೆಯುತ್ತಿದ್ದೆ. ಅಂತಹ ಬಸವಣ್ಣನಿಗೆ ಇವತ್ತು ಪೂಜೆ ಸಲ್ಲಿಸಿದ್ದೇನೆ. ನನಗೆ ಕಡಲೆಕಾಯಿ ಅಂದ್ರೆ ಬಹಳ ಇಷ್ಟ. ಕಡಲೆಕಾಯಿ ಇದ್ರೆ ಊಟವೇ ಬೇಡ ನನಗೆ, ಅಷ್ಟು ಇಷ್ಟ. ಹೊಲದಲ್ಲಿ ಹಸಿ ಕಡಲೆಕಾಯಿ ತಿಂದರೆ ಬಹಳ ಮಜವಾಗಿರುತ್ತೆ ಎಂದ ಸಿಎಂ, ಇಂದು ನನಗೆ ಇಷ್ಟವಾದ ಎರಡು ವಿಷಯವನ್ನು ಇಲ್ಲಿ ಅನುಭವಿಸಿದ್ದು ಖುಷಿ ತಂದಿದೆ ಎಂದು ಹೇಳಿದರು.

    ಇಲ್ಲಿರುವಂತಹ ಧಾರ್ಮಿಕ ಸಾಂಸ್ಕೃತಿಕವಾಗಿರುವ ಕೇಂದ್ರವಾಗಿರುವ ದೇವಸ್ಥಾನವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಶಾಸಕರು ಕೇಳಿದ್ದಾರೆ. ಅದಕ್ಕೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ಹಾಗೆಯೇ ಜಿಂಕೆ ಪಾರ್ಕ್​ನಿಂದ ಕೆಂಪಾಂಬುಧಿ ಕೆರೆಗೆ ರೋಪ್​ ವೇ ಮಾಡುವುದಾಗಿ ಹೇಳಿದ್ದಾರೆ. ಅದಕ್ಕೆ ಮುಂದಿನ ಬಜೆಟ್​ನಲ್ಲಿ ಅನುದಾನ ಮೀಸಲಿಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ.

    ಪಾರಂಪರಿಕ ಪ್ರದೇಶ ಎನಿಸಿಕೊಳ್ಳಲಿದೆ ಬಸವನಗುಡಿ; ಪರಿಷೆ ಉದ್ಘಾಟಿಸಿದ ಸಿಎಂ ಭರವಸೆ

    23 ವರ್ಷಗಳ ಕಾಲ ನಾಪತ್ತೆಯಾಗಿದ್ದ ತಂದೆ; ಸತ್ತು ಹೋಗಿದ್ದರೆಂದು ಭಾವಿಸಿದ್ದ ಮಕ್ಕಳಿಗೆ ಕೊನೆಗೂ ಸಿಕ್ಕ ಅಪ್ಪ!

    ಸೊಸೆ ಹಿಂಸೆ ಕೊಡುತ್ತಿದ್ದಾಳೆ, ಏನ್ ಮಾಡ್ಬೇಕು ಸಾಹೇಬ್ರೇ?: ಜಿಲ್ಲಾಧಿಕಾರಿ ಬಳಿ ಅಳಲು ತೋಡಿಕೊಂಡ ಅತ್ತೆ..

    ಬ್ರೂಸ್​ ಲೀ ಸತ್ತ 49 ವರ್ಷಗಳ ಬಳಿಕ ಬಯಲಾಯ್ತು ಸಾವಿನ ರಹಸ್ಯ!; ಸಮರಕಲೆ ಪ್ರವೀಣ ಸತ್ತಿದ್ದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts