More

    23 ವರ್ಷಗಳ ಕಾಲ ನಾಪತ್ತೆಯಾಗಿದ್ದ ತಂದೆ; ಸತ್ತು ಹೋಗಿದ್ದರೆಂದು ಭಾವಿಸಿದ್ದ ಮಕ್ಕಳಿಗೆ ಕೊನೆಗೂ ಸಿಕ್ಕ ಅಪ್ಪ!

    ಬೆಂಗಳೂರು: ಹತ್ತು ಸಾವಿರಕ್ಕೂ ಅಧಿಕ ಜನರು ಸಾವಿಗೀಡಾದ ಬೃಹತ್ ದುರಂತದಲ್ಲಿ ಬಚಾವಾದ ಅದೃಷ್ಟವಂತನೊಬ್ಬ ಕೊನೆಗೂ 23 ವರ್ಷಗಳ ಬಳಿಕ ತನ್ನ ಕುಟುಂಬಸ್ಥರನ್ನು ಸೇರಿಕೊಂಡಿದ್ದಾನೆ. ಒಡಿಶಾದ ಪುರಿಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.

    1999ರಲ್ಲಿ ಒಡಿಶಾದ ಕರಾವಳಿ ತೀರದಲ್ಲಿ ಚಂಡಮಾರುತಕ್ಕೆ ಸಿಲುಕಿ 10 ಸಾವಿರಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರು. ಈ ಮಾರುತದ ಸುಳಿಗೆ ಸಿಲುಕಿದ್ದ ಕೀರ್ತನ್​ಚಂದ್ ಬರಾಲ್ ಎಂಬಾತ ಆಂಧ್ರಪ್ರದೇಶದ ವಿಶಾಖಪಟ್ಟಣ ತೀರಕ್ಕೆ ಹೋಗಿ ಬಿದ್ದಿದ್ದ. ಭಾಗಶಃ ನೆನಪಿನ ಶಕ್ತಿ ಕಳೆದುಕೊಂಡಿದ್ದ ಈತ ಬಂದರು ಪಟ್ಟಣದ ಪಾದಚಾರಿ ಮಾರ್ಗದಲ್ಲಿ ಆಸರೆ ಪಡೆದಿದ್ದ.

    ಆಗ ಅಲ್ಲಿನ ಕಾರ್ಪೋರೇಟರ್ ಆಗಿದ್ದ ಎ.ಜೆ. ಸ್ಟಾಲಿನ್​ ಈತನಿಗೆ ದಿನವೂ ಆಹಾರ ಒದಗಿಸುತ್ತಿದ್ದರು. ಸ್ಟಾಲಿನ್ ಕಾರಿನ ಹಾರ್ನ್​ ಧ್ವನಿ ಕೇಳಿಸುತ್ತಿದ್ದಂತೆ ಬರುತ್ತಿದ್ದ ಈತ ಆತನಿಂದ ಆಹಾರದ ಪೊಟ್ಟಣ ಪಡೆದು ಮತ್ತೆ ಪಾದಚಾರಿ ಮಾರ್ಗದ ಬಳಿಯಲ್ಲಿ ಹೋಗಿ ನೆಲೆಸಿರುತ್ತಿದ್ದ. ಹೀಗೆ ವರ್ಷಗಟ್ಟಲೆ ನಡೆದಿತ್ತು.

    ಆದರೆ 2012ರ ಒಂದು ದಿನ ಮಧ್ಯಾಹ್ನ ಸ್ಟಾಲಿನ್ ಕಾರಿನಲ್ಲಿ ಬಂದಿದ್ದರೂ ಈತ ಕಾರಿನ ಬಳಿಗೆ ಬಂದಿರಲಿಲ್ಲ. ಅಚ್ಚರಿಗೊಂಡ ಸ್ಟಾಲಿನ್ ಈತ ನೆಲೆಸಿರುತ್ತಿದ್ದ ಸ್ಥಳಕ್ಕೆ ಹೋಗಿ ನೋಡಿದ್ದಾಗ ಚಲಿಸಲು ಆಗದೆ ಅನಾರೋಗ್ಯಕ್ಕೀಡಾಗಿರುವುದು ಕಂಡುಬಂದಿತ್ತು.

    ಸಾಮಾಜಿಕ ಸೇವಾ ಸಂಸ್ಥೆಯೊಂದರ ಜತೆ ಸಂಪರ್ಕಿಸಿದ ಸ್ಟಾಲಿನ್​, ಈತನ ಕುರಿತು ಕಾಳಜಿ ವಹಿಸುವಂತೆ ತಿಳಿಸಿದ್ದರು. ಬಹಳಷ್ಟು ಸಮಯದ ಚಿಕಿತ್ಸೆ ಬಳಿಕ ಆರೋಗ್ಯದಲ್ಲಿ ಸುಧಾರಣೆ ಕಂಡರೂ ನೆನಪಿಸ ಶಕ್ತಿ ಸುಧಾರಿಸಿರಲಿಲ್ಲ. ಆದರೆ ಈತ ಆಗಾಗ ಶ್ರೀಕಾಕುಲಂ ಎಂಬ ಪದ ಉದ್ಗರಿಸುತ್ತಿದ್ದ. ಆಂಧ್ರಪ್ರದೇಶದಲ್ಲಿರುವ ಈ ಸ್ಥಳಕ್ಕೆ ಬಳಿಕ ಈತನನ್ನು ಸ್ಥಳಾಂತರಿಸಲಾಯಿತು.

    ಅಲ್ಲಿಂದ ನಂತರ ನಿರಂತರ ಪತ್ತೆ ಕಾರ್ಯದ ಬಳಿಕ ಈತ ಪುರಿಯ ಬಮನಾಲದ ಪಟಿಗ್ರಾಮದ ಬರಾಲ್ ಕುಟುಂಬಕ್ಕೆ ಸೇರಿದ್ದವನೆಂಬದು ತಿಳಿಯಿತು. ಕೊನೆಗೂ ಬರಾಲ್​ ಮನೆ ಪತ್ತೆ ಹಚ್ಚಿ ಅವನನ್ನು ಕುಟುಂಬಸ್ಥರೊಂದಿಗೆ ಸೇರುವಂತೆ ಮಾಡಲಾಗಿದೆ. ಬರಾಲ್​​ಗೆ ಮೂರು ಮಕ್ಕಳಿದ್ದು, ಒಬ್ಬ ದೃಷ್ಟಿ ಕಳೆದುಕೊಂಡಿದ್ದ. ಮಕ್ಕಳು ತಮ್ಮ ತಂದೆ ಸತ್ತು ಹೋಗಿದ್ದರು ಎಂದು ಭಾವಿಸಿದ್ದರು. ಕೊನೆಗೂ ತಂದೆಯನ್ನು ಜೀವಂತ ಕಂಡ ಮಕ್ಕಳು ಗದ್ಗದಿತರಾದರು.

    ಸೊಸೆ ಹಿಂಸೆ ಕೊಡುತ್ತಿದ್ದಾಳೆ, ಏನ್ ಮಾಡ್ಬೇಕು ಸಾಹೇಬ್ರೇ?: ಜಿಲ್ಲಾಧಿಕಾರಿ ಬಳಿ ಅಳಲು ತೋಡಿಕೊಂಡ ಅತ್ತೆ..

    ಆಸ್ಟ್ರೇಲಿಯನ್‌ ಸಿನಿಮಾಗೆ ಕನ್ನಡಿಗನ ಸಂಗೀತ; ಮೊದಲ ಪ್ರಯತ್ನದಲ್ಲೇ ಶ್ರೇಷ್ಠ ಸಂಗೀತ ಪ್ರಶಸ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts