More

    ಸಂವಿಧಾನ ಜಾಗೃತಿ ಜಾಥಾ ಯಶಸ್ವಿಗೊಳಿಸಿ

    ಬಸವಕಲ್ಯಾಣ: ಸಂವಿಧಾನ ದಿನ ನಿಮಿತ್ತ ನಡೆಯಲಿರುವ ಸಂವಿಧಾನ ಜಾಗೃತಿ ಜಾಥಾ ತಾಲೂಕಿನಲ್ಲಿ ಯಶಸ್ವಿಯಾಗಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಹಾಯಕ ಆಯುಕ್ತ ಪ್ರಕಾಶ ಕುದರಿ ಹೇಳಿದರು.

    ಬಿಕೆಡಿಬಿ ಪಂಕ್ಷನ್ ಹಾಲ್‌ನಲ್ಲಿ ಸೋಮವಾರ ಪೂರ್ವಭಾವಿ ಸಭೆ ನಡೆಸಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ಶ್ರೇಷ್ಠ ಸಂವಿಧಾನ ಕೊಟ್ಟಿದ್ದರಿಂದ ಸಮಾಜದಲ್ಲಿ ಶಾಂತಿ, ಸಾಮರಸ್ಯ, ಸಹೋದರತ್ವದಿಂದ ಎಲ್ಲರೂ ಬಾಳುತ್ತಿದ್ದೇವೆ. ಸದೃಢ ಭಾರತಕ್ಕಾಗಿ ಸಂವಿಧಾನದ ಕುರಿತು ಪ್ರತಿಯೊಬ್ಬರಲ್ಲಿ ಅರಿವು ಮೂಡಿಸುವುದೇ ಜಾಥಾ ಉದ್ದೇಶ. ತಾಲೂಕಿನಲ್ಲಿ ಫೆ.೧೫ರಿಂದ ನಡೆಯಲಿರುವ ಕಾರ್ಯಕ್ರಮದ ವ್ಯವಸ್ಥೆಯಲ್ಲಿ ಸಣ್ಣ-ಪುಟ್ಟ ಲೋಪದೋಷ ಕಂಡರೂ ಸಂಬಂಧಿತರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

    ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಹಾದೇವ ಬಾಬಳಗಿ ಮಾತನಾಡಿ, ತಾಲೂಕಿನಲ್ಲಿ ಆಯಾ ಗ್ರಾಮ ಪಂಚಾಯಿತಿಯಿಂದ ಡಂಗೂರ ಸಾರಬೇಕು. ಧ್ವನಿವರ್ಧಕ ಅಳವಡಿಸಬೇಕು. ಜಾಥಾಕ್ಕೆ ಗೌರವಪೂರ್ವಕವಾಗಿ ಸ್ವಾಗತ ಕೋರಬೇಕು. ಬೀದಿ ನಾಟಕ, ಚರ್ಚೆ, ಉಪನ್ಯಾಸ ಏರ್ಪಡಿಸುವಂತೆ ಪಿಡಿಒಗಳಿಗೆ ಸೂಚಿಸಿದರು.

    ಹುಲಸೂರು ತಹಸೀಲ್ದಾರ್ ಶಿವಾನಂದ ಮೇತ್ರೆ ಮಾತನಾಡಿ, ಕಾರ್ಯಕ್ರಮದ ಯಶಸ್ಸಿಗೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಸದಸ್ಯರ ಜತೆಗೆ ಸಾರ್ವಜನಿಕರ ಸಹಭಾಗಿತ್ವ ಅವಶ್ಯಕವಾಗಿದೆ ಎಂದರು.

    ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದಿಲೀಪಕುಮಾರ ಉತ್ತಮ ಪ್ರಾಸ್ತಾವಿಕ ಮಾತನಾಡಿದರು. ಜಿಪಂ ಮಾಜಿ ಉಪಾಧ್ಯಕ್ಷೆ ಲತಾ ಹಾರಕೂಡೆ, ದಲಿತ ಪ್ಯಾಂಥರ್ ತಾಲೂಕು ಅಧ್ಯಕ್ಷ ರವಿ ಗಾಯಕವಾಡ, ಬಿಎಸ್‌ಐ ತಾಲೂಕು ಉಪಾಧ್ಯಕ್ಷ ಮನೋಹರ ಮೈಸೆ, ಡಿಎಸ್‌ಎಸ್ ತಾಲೂಕು ಸಂಚಾಲಕ ಮಹಾದೇವ ಗಾಯಕವಾಡ, ವಕೀಲ ಮನೋಜಕುಮಾರ ಮುಡಬಿಕರ್ ಮಾತನಾಡಿ, ಕಾರ್ಯಕ್ರಮದ ಅರ್ಥಪೂರ್ಣವಾಗಿ ನಡೆಯಲು ಅನುಸರಿಸಬೇಕಾದ ಕ್ರಮಗಳ ಕುರಿತು ಸಲಹೆ ನೀಡಿದರು.

    ತಹಸೀಲ್ದಾರ್ ಶಾಂತಗೌಡ ಬಿರಾದಾರ, ಪೌರಾಯುಕ್ತ ಮನೋಜಕುಮಾರ ಕಾಂಬಳೆ, ಪ್ರಮುಖರಾದ ನರಸಿಂಗರಾವ ಕಾಂಬಳೆ, ವಾಮನ್ ಮೈಸಲಗೆ, ಪ್ರಹ್ಲಾದ ಮೋರೆ, ಮಲ್ಲಿಕಾರ್ಜುನ ಮಾಲೆ, ದಶರಥ ಬಟಗೇರಾ ಇತರರಿದ್ದರು. ವಾರ್ಡನ್ ಭೀಮಣ್ಣ ವಂದಿಸಿದರು. ಶರಣು ಪವಾಡಶೆಟ್ಟಿ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts