More

    ಮತ್ತೆ ಅನುಭವ ಮಂಟಪವಾಗಲಿ ಪೀರ್​ಪಾಷಾ ಬಂಗಲೆ; ಅದಕ್ಕಾಗಿ ಜೂ. 12ರಂದು ಬಸವಕಲ್ಯಾಣ ಚಲೋ..

    ಬೀದರ್: ಕುತುಬ್​ ಮಿನಾರ್​ಗೆ ವಿಷ್ಣುಸ್ತಂಭ ಎಂದು ಮರು ನಾಮಕರಣ ಮಾಡಬೇಕು ಎಂಬುದು ಸೇರಿ ಇತಿಹಾಸದಲ್ಲಿನ ಹಲವಾರು ವಿಷಯಗಳನ್ನು ‘ಅನ್​ಡೂ’ ಮಾಡುವಂಥ ವಿಚಾರಗಳು ಮುನ್ನೆಲೆಗೆ ಬರುತ್ತಿದ್ದು, ಆ ನಿಟ್ಟಿನಲ್ಲಿ ಇದೀಗ ಅನುಭವ ಮಂಟಪ ಕೂಡ ಒಂದಾಗಿದೆ.

    ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಅನುಭವ ಮಂಟಪ ಇದ್ದ ಜಾಗದಲ್ಲಿ ಈಗ ‘ಪೀರ್ ಪಾಷಾ ಬಂಗಲೆ’ ಇದೆ. ಇತಿಹಾಸದ ಯಾವುದೋ ಒಂದು ಕಾಲಘಟ್ಟದಲ್ಲಿ ಅನುಭವ ಮಂಟಪವನ್ನು ಪೀರ್‌ಪಾಷಾ ಬಂಗಲೆಯಾಗಿ ಪರಿವರ್ತನೆ ಮಾಡಲಾಗಿದೆ. ಅದನ್ನು ಮತ್ತೆ ಅನುಭವ ಮಂಟಪ ಆಗಿಸಬೇಕೆಂಬ ಕೂಗೆದ್ದಿದ್ದು, ಅದಕ್ಕಾಗಿ ಜೂ. 12ರಂದು ಬಸವಕಲ್ಯಾಣ ಚಲೋ ನಡೆಯಲಿದೆ.

    ಹನ್ನೆರಡನೇ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆದ ಬಸವಾದಿ ಶರಣರ ಚಳವಳಿ, ಇಡೀ ಜಗತ್ತಿನಲ್ಲಿಯೇ ಒಂದು ವಿಶಿಷ್ಟ ಜನಾಂದೋಲನ. ಸ್ತ್ರೀಸ್ವಾತಂತ್ರೃ, ಸಮಾನತೆ, ಕಾಯಕತತ್ವ ಪ್ರತಿಪಾದನೆ ಮುಂತಾದ ಉದಾತ್ತ ಉದ್ದೇಶಗಳನ್ನು ಇಟ್ಟುಕೊಂಡು ನಡೆದ ಚಳವಳಿ ಅದು. ಸಮಕಾಲೀನ ಸಮಸ್ಯೆಗಳನ್ನು ಸಮಾಲೋಚಿಸುವುದಕ್ಕಾಗಿ ಆ ಕಾಲದಲ್ಲಿ ರೂಪುಗೊಂಡಿದ್ದೇ ಅನುಭವ ಮಂಟಪ. ಅದು ಜಗತ್ತಿನ ಮೊದಲ ಸಂಸತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಹಲವು ಸಂದರ್ಭಗಳಲ್ಲಿ ಅನುಭವ ಮಂಟಪದ ಮಹತ್ವವನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

    ಅಷ್ಟು ಮಹತ್ವವುಳ್ಳ ಅನುಭವ ಮಂಟಪ ಇದ್ದ ಜಾಗದಲ್ಲಿ ಈಗ ‘ಪೀರ್ ಪಾಷಾ ಬಂಗಲೆ’ ಇದೆ. ಇತಿಹಾಸದ ಯಾವುದೋ ಒಂದು ಕಾಲಘಟ್ಟದಲ್ಲಿ ಅನುಭವ ಮಂಟಪವನ್ನು ಪೀರ್‌ ಪಾಷಾ ಬಂಗಲೆಯಾಗಿ ಪರಿವರ್ತನೆ ಮಾಡಲಾಗಿದೆ. ಅದನ್ನು ಆ ರೀತಿ ಮಾರ್ಪಡಿಸಿದ್ದು ಯಾರು ಮತ್ತು ಯಾವಾಗ ಎಂಬುದು ಇತಿಹಾಸಕಾರರ ಸಂಶೋಧನೆಯಿಂದ ಹೊರಬರಬೇಕಾದ ಸತ್ಯ.

    ಆದರೆ ಅಲ್ಲಿ ಮೊದಲು ಅನುಭವ ಮಂಟಪ ಇತ್ತು ಎಂಬುದಕ್ಕೆ ಪೂರಕವಾದ ಸಾಕ್ಷ್ಯಗಳಂತೂ ಸಾಕಷ್ಟಿವೆ. ಪೀರ್‌ ಪಾಷಾ ಬಂಗ್ಲೆಯ ಕಲ್ಲು ಕಂಬಗಳು ಹಿಂದುಗಳ ಕೆತ್ತನೆಗಳನ್ನು ಒಳಗೊಂಡಿವೆ. ಅದರಲ್ಲಿ ಕೆಲವೆಡೆ ಹಿಂದು ದೇವ-ದೇವತೆಗಳ ವಿಗ್ರಹಗಳ ಕೆತ್ತನೆಗಳಿವೆ. ಈ ಹಿನ್ನೆಲೆಯಲ್ಲಿ ಪೀರ್‌ ಪಾಷಾ ಬಂಗಲೆಯನ್ನು ಮತ್ತೆ ಅನುಭವ ಮಂಟಪವಾಗಿಸಬೇಕು. ಇದಕ್ಕಾಗಿ ನಾಡಿನ ಸಂತರು, ಶರಣರು, ಹಿಂದು ಸಂಘಟನೆಗಳ ಕಾರ್ಯಕರ್ತರು ಆಂದೋಲನ ನಡೆಸಲು ಸಜ್ಜಾಗಿದ್ದಾರೆ. ಅದರ ಮೊದಲ ಹಂತವಾಗಿ ಜೂನ್ 12ರಂದು ‘ಬಸವಕಲ್ಯಾಣ ಚಲೋ’ ಕಾರ್ಯಕ್ರಮಕ್ಕೆ ಕರೆ ನೀಡಲಾಗಿದೆ.

    ರಾಜ್ಯದಲ್ಲಿ ಮತ್ತೊಂದು ಮದ್ವೆ ದಿಬ್ಬಣದ ವಾಹನ ಅಪಘಾತ; 20ಕ್ಕೂ ಅಧಿಕ ಜನರಿದ್ದ ಟೆಂಪೊ ಪಲ್ಟಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts