More

    ಮಿಜೋರಾಂನ ಅತ್ಯಂತ ಕಿರಿಯ ಶಾಸಕಿ ವನ್ನೆಹ್‌ಸಂಗಿ – ಈಕೆ ಜನಪ್ರಿಯತೆಗೆ ಕಾರಣವಿಲ್ಲಿದೆ..

    ಶಿಲ್ಲಾಂಗ್‌: ಮಿಜೋರಾಂ ವಿಧಾನಸಭೆಗೆ ಚುನಾಯಿತರಾದ ಮೂವರು ಮಹಿಳೆಯರಲ್ಲಿ ಒಬ್ಬರಾದ ಬ್ಯಾರಿಲ್ ವನ್ನೆಹ್‌ಸಂಗಿ ಅತ್ಯಂತ ಕಿರಿಯ ವಯಸ್ಸಿನ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಇದನ್ನೂ ಓದಿ: ವಿಶ್ವದ ಅತ್ಯಂತ ಪ್ರಭಾವಿ ಮಹಿಳೆಯರು ಇವರೇ..ಫೋರ್ಬ್ಸ್‌ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ ಸೇರಿ 4 ಭಾರತೀಯರು – ಮೊದಲ ಸ್ಥಾನದಲ್ಲಿ ಉರ್ಸುಲಾ 
    ಜೋರಾಮ್ ಪೀಪಲ್ಸ್ ಮೂವ್ಮೆಂಟ್ (ಜಡ್​ಪಿಎಂ) ಗೆ ಸೇರಿದ ವನ್ನೆಹ್‌ಸಂಗಿ 32 ವರ್ಷ ವಯಸ್ಸಿಗೇ ಗೆದ್ದು ಗಮನ ಸೆಳೆದಿದ್ದಾರೆ. ಐಜ್ವಾಲ್ ಸೌತ್-III ಕ್ಷೇತ್ರದಿಂದ 1,414 ಮತಗಳ ಅಂತರದಿಂದ ಅವರು ಗೆಲುವು ಸಾಧಿಸಿದ್ದಾರೆ.

    ಬ್ಯಾರಿಲ್ ವನ್ನೆಹ್‌ಸಂಗಿ ಮಾಜಿ ಟಿವಿ ನಿರೂಪಕಿ. ರೇಡಿಯೋ ಜಾಕಿ ಮೂಲಕ ಪ್ರಖ್ಯಾತಿ ಪಡೆದ ಅವರು 252ಕೆ ಗಿಂತಲೂ ಹೆಚ್ಚು ಅನುಯಾಯಿಗಳೊಂದಿಗೆ ಇನ್​ಸ್ಟಾಗ್ರಾಂನಲ್ಲಿ ಜನಪ್ರಿಯರಾಗಿದ್ದಾರೆ.

    ಮಿಜೋರಾಂನ 40 ಸ್ಥಾನಗಳ ಪೈಕಿ 27ನ್ನು ಗೆದ್ದು ಅಧಿಕಾರಕ್ಕೆ ಬಂದಿರುವ ಜಡ್​ಪಿಎಂ ಪಕ್ಷದಿಂದ ಇವರು ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಗೆದ್ದ ನಂತರ ಮಾತನಾಡಿದ ಅವರು, ಲಿಂಗ ಸಮಾನತೆಯ ಬಗ್ಗೆ ಒತ್ತಿ ಹೇಳಿದರು. ಮಹಿಳೆಯರು ಕೀಳರಿಮೆ ತೊರೆದು ಉತ್ಸಾಹದ ಬದುಕು ಅನುಸರಿಸುವಂತೆ ಒತ್ತಾಯಿಸಿದರು.

    “ನಾವು ಇಷ್ಟಪಟ್ಟು ಮುಂದುವರಿಯಬೇಕೆಂದು ಪಣತೊಟ್ಟರೆ ಲಿಂಗತ್ವ ನಮ್ಮನ್ನು ತಡೆಯುವುದಿಲ್ಲ ಎಂದು ನಾನು ಅಲ್ಲಿರುವ ಎಲ್ಲಾ ಮಹಿಳೆಯರಿಗೆ ಹೇಳಲು ಬಯಸುತ್ತೇನೆ ಎಂದು ಅವರು ತಿಳಿಸಿದರು.

    ವನ್ನೆಹ್‌ಸಂಗಿ ಶಿಲ್ಲಾಂಗ್‌ನ ನಾರ್ತ್ ಈಸ್ಟರ್ನ್ ಹಿಲ್ ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ಈ ಹಿಂದೆ ಐಜ್ವಾಲ್ ಮುನ್ಸಿಪಲ್ ಕಾರ್ಪೊರೇಟರ್ ಆಗಿದ್ದರು.
    ಮಿಜೋರಾಂ ಚುನಾವಣೆಗೆ ಸ್ಪರ್ಧಿಸಿದ್ದ 174 ಅಭ್ಯರ್ಥಿಗಳ ಪೈಕಿ 18 ಸ್ಥಾನಗಳಲ್ಲಿ 16 ಮಹಿಳೆಯರು ಸ್ಪರ್ಧಿಸಿದ್ದು, ಮೂವರು ಆಯ್ಕೆಯಾಗಿದ್ದಾರೆ.

    ಎಂಎಂ ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆ ಪ್ರಕರಣ; ವಿಚಾರಣೆಗಾಗಿ ವಿಶೇಷ ಕೋರ್ಟ್ ನ್ಯಾಯಾಲಯ ಸ್ಥಾಪನೆ ಸಿಎಂ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts