More

    ಕೆರೆ ಒತ್ತÄವರಿಗೆ ತಡೆ

    ಹೊಳೆಹೊನ್ನೂರು: ಪಟ್ಟಣಕ್ಕೆ ಹೊಂದಿಕೊAಡಿರುವ ಕೊಪ್ಪ ದೊಡ್ಡಕೆರೆ ಜಾಗವನ್ನು ಕೆರೆಬೀರನಹಳ್ಳಿ ಗ್ರಾಮ ಸಮೀಪ ಅಕ್ರಮವಾಗಿ ಒತ್ತುವರಿ ಮಾಡುತ್ತಿರುವುದನ್ನು ಅಚ್ಚುಕಟ್ಟು ಪ್ರದೇಶದ ರೈತರು ಭಾನುವಾರ ತಡೆದು ಪೊಲೀಸರಿಗೆ ದೂರು ನೀಡಿದ್ದಾರೆ.
    ಹೊಳೆಹೊನ್ನೂರು ೧ನೇ ಹೋಬಳಿ ವ್ಯಾಪ್ತಿಗೆ ಒಳಪಡುವ ಕೊಪ್ಪ ಗ್ರಾಮದ ಸರ್ವೇ ನಂ.೫೨ರಲ್ಲಿ ಒಟ್ಟು ೨೨೦.೧೯ ಎಕರೆ ವಿಸ್ತಾರದಲ್ಲಿ ಕೊಪ್ಪ ದೊಡ್ಡಕೆರೆ ಇದೆ. ಈ ಕೆರೆ ನೀರು ಸಾವಿರಾರು ಎಕರೆ ಜಮೀನುಗಳ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಕಳೆದ ಬಾರಿ ಮಳೆಗಾಲದಲ್ಲಿ ವಾಡಿಕೆ ಮಳೆಗಿಂತ ಕಡಿಮೆ ಮಳೆ ಆಗಿದ್ದರಿಂದ ಕೆರೆಯಲ್ಲಿ ಸಾಕಷ್ಟು ನೀರು ಸಂಗ್ರಹ ಆಗಿರಲಿಲ್ಲ. ಅಲ್ಲದೆ ಭದ್ರಾ ಜಲಾಶಯದ ನಾಲೆಯ ಹೆಚ್ಚುವರಿ ನೀರೂ ಬಂದು ಸೇರುತ್ತದೆ. ಆದರೆ ಈ ಬಾರಿ ನಾಲೆಗೆ ಹರಿಸಿದ ನೀರು ಕಡಿಮೆ ಆಗಿದ್ದರಿಂದ ಕೆರೆ ನೀರು ಕಡಿಮೆ ಆಗಿದೆ. ಅಲ್ಲದೆ ಸಂಗ್ರಹ ಆಗಿದ್ದ ನೀರು ಕೂಡ ರೈತರು ತಮ್ಮ ತೋಟದ ಬೆಳೆಯನ್ನು ಉಳಿಸಿಕೊಳ್ಳಲು ಪಂಪ್‌ಸೆಟ್ ಮೂಲಕ ಸಾಕಷ್ಟು ನೀರು ಹೀರಿಕೊಂಡಿದ್ದಾರೆ. ಈ ಎಲ್ಲ್ಲ ಕಾರಣದಿಂದಾಗಿ ಕೆರೆಯಲ್ಲಿ ನೀರು ತೀರಾ ಕ್ಷೀಣಿಸಿತ್ತು.
    ಇದೇ ಸಮಯ ಬಳಸಿಕೊಂಡ ಕೆರೆ ಮೇಲ್ಭಾಗದ ಅಂಚಿನಲ್ಲಿದ್ದ ಕೆಲ ರೈತರು ಕೆರೆ ಹೂಳು ಮತ್ತು ಮಣ್ಣನ್ನು ತಮ್ಮ ಜಮೀನಿಗೆ ಸಾಗಿಸಿಕೊಂಡು ಕೈಲಾದಷ್ಟು ಒತ್ತುವರಿ ಮಾಡಿಕೊಂಡಿದ್ದಾರೆ. ಈ ರೀತಿ ಅನೇಕ ದಿನದಿಂದ ಸಣ್ಣದಾಗಿ ಕೆರೆ ಒತ್ತುವರಿ ಕಾರ್ಯ ನಡೆದಿದೆ.
    ಇದನ್ನು ನೋಡಿದ ಅಕ್ಕಪಕ್ಕದ ಇನ್ನೂ ಕೆಲ ರೈತರು ದುರಾಸೆಯಿಂದಾಗಿ ದೊಡ್ಡ ಹಿಟಾಚಿ, ಜೆಸಿಬಿ ಯಂತ್ರಗಳನ್ನು ಬಳಸಿ ರಾತ್ರಿ ಇಡೀ ಸ್ಪಽðಗಳಂತೆ ಒತ್ತುವರಿ ಕೆಲಸ ಮಾಡಿಕೊಂಡಿದ್ದಾರೆ. ಈ ವಿಷಯ ಭಾನುವಾರ ಕೆರೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೋಗಿ ಒತ್ತುವರಿ ಕಾರ್ಯವನ್ನು ತಡೆದಿದ್ದಾರೆ. ಈ ಬಗ್ಗೆ ಸಂಬAಽಸಿದ ಅಽಕಾರಿಗಳಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಗಮಿಸಿ ಸ್ಥಳದಲ್ಲಿದ್ದ ಹಿಟಾಚಿ, ಜೆಸಿಬಿ ಹಾಗೂ ಟ್ರಾ÷್ಯಕ್ಟರ್‌ಗಳನ್ನು ದಸ್ತಗಿರಿ ಮಾಡಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts