More

    ಬಾರಕೂರಿನಲ್ಲಿದೆ ತುಳು ಲಿಪಿ ತಾಳೆಗರಿ ಗ್ರಂಥ

    ಬ್ರಹ್ಮಾವರ: ತುಳು ಲಿಪಿ ಇಲ್ಲ ಅದೊಂದು ಆಡು ಭಾಷೆ ಮಾತ್ರ ಎನ್ನುವ ಹಲವರ ವಾದಕ್ಕೆ ತಾಳೆಗರಿಯಲ್ಲಿ ತುಳು ಲಿಪಿಯನ್ನು 250 ವರ್ಷದ ಹಿಂದೆ ತಮ್ಮ ಹಿರಿಯರು ಬರೆದುದನ್ನು ಸಂಗ್ರಹಿಸಿದ ಅಪೂರ್ವ ತಾಳೆಗರಿ ಬಾರಕೂರು ಬಳಿಯ ಬಂಡೀಮಠದ ತಮ್ಮಣ್ಣ ಅಡಿಗರಲ್ಲಿದೆ.
    ನಾಲ್ಕು ತಲೆಮಾರಿನ ಹಿಂದೆ ಬಂಡೀಮಠ ಸೀತಾರಾಮ ಅಡಿಗರು ವೇದ ವಿದ್ವಾಂಸರಾಗಿ ನಾಡಿನಾದ್ಯಂತ ಪ್ರಸಿದ್ಧರು. ಕಾಗದ, ಅಕ್ಷರಗಳು ಇಲ್ಲದ ಕಾಲದಲ್ಲಿ ತಾಳೆಗರಿಯಲ್ಲಿ ಅಂಡಲೆಕಾಯಿಯ ಶಾಯಿಯಲ್ಲಿ ಚೂಪಾದ ಸೂಜಿಯಂತ ವಸ್ತುವಿನಲ್ಲಿ ತಾಳೆಗರಿಯಲ್ಲಿ ವೇದದ ಹಲವಾರು ಮಂತ್ರಗಳನ್ನು ಮುಂದಿನ ತಲೆಮಾರಿಗೆ ಅನುಕೂಲವಾಗುವಂತೆ ಬರೆದಿಟ್ಟಿದ್ದಾರೆ. ಅವರ ಮಕ್ಕಳಾದ ದಿ.ರಾಮಚಂದ್ರ ಅಡಿಗ, ಶಂಕರನಾರಾಯಣ ಅಡಿಗ ಕೂಡ ತುಳು ಲಿಪಿಯಲ್ಲಿರುವುದನ್ನು ಓದಿ ಕಲಿತು ವೇದಗಳನ್ನು ಮಂತ್ರ ವಿದ್ಯೆಯನ್ನು ಮುಂದುವರಿಸಿದ್ದರು. ಒಂದೂವರೆ ಅಡಿಯಷ್ಟು ಉದ್ದ 4 ಇಂಚು ಅಗಲದಲ್ಲಿರುವ ತಾಳೆಗರಿಯಲ್ಲಿ 5 ಸಾಲಿನಲ್ಲಿ ಗೆರೆ ಹಾಕಿ ಬರೆದಂತೆ ಒಂದೇ ಒಂದು ಚಿತ್ತು ಇಲ್ಲದೆ ಬರೆಯಲಾಗಿದೆ. ಪ್ರಸ್ತುತ ಶಂಕರನಾರಾಯಣ ಅಡಿಗರ ಮಗ ತಮ್ಮಣ್ಣ ಅಡಿಗರು ಅದರಲ್ಲಿ ಇರುವ ತುಳು ಲಿಪಿಯನ್ನು ಓದಲು ಕಲಿತು ವೇದ ವಿದ್ಯೆ ಮುಂದುವರಿಸುತ್ತಿದ್ದಾರೆ. ಶಾರದಾ ಪೂಜೆಯಂದು ಅದಕ್ಕೆ ಪೂಜೆ ಸಲ್ಲಿಸಿ ಮತ್ತೆ ಯಥಾ ಸ್ಥಾನದಲ್ಲಿ ಜೋಪಾನ ಮಾಡಿ ಇರಿಸುತ್ತಾರೆ ತಮ್ಮಣ್ಣ ಅಡಿಗರು. 365 ದೇವಾಲಯಗಳ ನಗರ ಬಾರಕೂರು ತುಳುನಾಡ ರಾಜಧಾನಿಯಾಗಿತ್ತು ಎಂಬುದಕ್ಕೆ ತಾಳೆಗರಿಯ ತುಳು ಲಿಪಿ ಸಾಕ್ಷಿ ನೀಡುತ್ತಿದೆ. ತುಳು ಅಕಾಡೆಮಿಗಳು, ತುಳು ಭಾಷೆ ಬೆಳವಣಿಗೆ ಬಗ್ಗೆ ಶ್ರಮಿಸುವ ಸಂಘಟನೆಗಳು ಇಂಥ ಅಪೂರ್ವ ವಸ್ತು ವಿಷಯವನ್ನು ಅಧ್ಯಯನ ಮಾಡಿ ಭಾಷೆಗೆ ಒಂದು ಭದ್ರತೆ, ಸ್ಥಾನಮಾನ ಗೌರವ ನೀಡುವ ಕಾರ್ಯ ಆಗುವಂತಾಗಬೇಕು.

    ತಾಳೆಗರಿಯಲ್ಲಿ ಬರೆದ ತುಳು ಲಿಪಿಯನ್ನು ಜೋಪಾನ ಮಾಡಿ ಇರಿಸಿದ ಅವರ ಅಡಿಗರ ದೂರದರ್ಶಿತ್ವ ಮಾದರಿಯಾಗಿದೆ. ನಾವು ಅದನ್ನು ಅಧ್ಯಯನ ಮತ್ತು ಅದರಲ್ಲಿ ಇರುವ ವಸ್ತು ವಿಷಯವನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಕೆಲಸ ಮಾಡುತ್ತೇವೆ.
    ಡಾ.ಆಕಾಶ್‌ರಾಜ್, ತುಳು ಸಾಹಿತ್ಯ ಅಕಾಡೆಮಿ ಸದಸ್ಯರು 

    ಬಂಡೀಮಠ ಶಿವರಾಮ ಆಚಾರ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts