More

    ಶಿಕ್ಷಣದಿಂದ ಸಮಾಜದ ಮುನ್ನೆಲೆಗೆ ಬರಲು ಸಾಧ್ಯ

    ದೇವದುರ್ಗ: ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದರೂ ಛಲವಾದಿ ಸಮುದಾಯಕ್ಕೆ ಐತಿಹಾಸಿಕ ಹಿನ್ನೆಲೆಯಿದೆ ಎಂದು ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಶಿವರಾಜ್ ಜಾನೇಕಲ್ ಹೇಳಿದರು.

    ಪಟ್ಟಣದಲ್ಲಿ ಪದಾಧಿಕಾರಿಗಳ ಆಯ್ಕೆ ಸಭೆ ಅಧ್ಯಕ್ಷತೆ ವಹಿಸಿ ಭಾನುವಾರ ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಭಾವನೆಯನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಣ ಪಡೆದು ಮುನ್ನೆಲೆಗೆ ಬರಬೇಕು. ಛಲವಾದಿ ಮಹಾಸಭಾ ಸಂಘಟನೆ ಮೂಲಕ ಶಿಕ್ಷಣದ ಜಾಗೃತಿ ಮೂಡಿಸಬೇಕಿದೆ ಎಂದರು.

    ರಾಜ್ಯ ಸಮಿತಿ ಸದಸ್ಯರಾದ ಕೆ.ಇ.ಕುಮಾರ, ದೇವೇಂದ್ರ ಕುಮಾರ ಶಿವಂಗಿ, ಪ್ರಮುಖರಾದ ಮಾರೆಪ್ಪ, ಬಾಬು, ಸಚ್ಚಿದಾನಂದ, ವಿನೋದ ಸಾಗರ್, ಬಿ.ಶ್ರೀನಿವಾಸ, ಮಲ್ಲೇಶಪ್ಪ ಹುನಗುಂದಬಾಡ, ಮರಲಿಂಗಪ್ಪ ಕೋಳೂರು, ತಮ್ಮಣ್ಣ ಬೊಮ್ಮನಾಳ, ನರಸಪ್ಪ ಚಿಂಚೊಡಿ, ಮಲ್ಲಿಕಾರ್ಜುನ ಮಸರಕಲ್, ಮರಿಲಿಂಗಪ್ಪ ಹೆಗ್ಗಡದಿನ್ನಿ, ಸಂಜಯ, ಬಾಬು ತೇಲ್ಕರ್, ರಾಘವೇಂದ್ರ ತುಪ್ಪದ್, ಬಸವರಾಜ ಭವಾ ಇತರರಿದ್ದರು.

    ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ: ಮಹಾಂತೇಶ ಭವಾನಿ(ಅಧ್ಯಕ್ಷ), ಧನಂಜಯ ಶಿವಂಗಿ(ಗೌರವಾಧ್ಯಕ್ಷ), ಮಂಜುನಾಥ ಹೇರುಂಡಿ (ಪ್ರಧಾನ ಕಾರ್ಯದರ್ಶಿ), ಬಸವರಾಜ ತೇಲ್ಕರ್ (ಖಜಾಂಚಿ), ದುರುಗಪ್ಪ ಬಡಿಗೇರ, ಆಂಜನೇಯ ಬಡಿಗೇರ್ (ಉಪಾಧ್ಯಕ್ಷರು), ಮಲ್ಲಯ್ಯ ಹೇಮನಾಳ(ಸಂಘಟನಾ ಕಾರ್ಯದರ್ಶಿ), ಅಯ್ಯಳಪ್ಪ ಕೊಪ್ಪರ, ಹೊನ್ನಪ್ಪ ಯರಮಸಾಳ ಸದಸ್ಯರಾಗಿ ಆಯ್ಕೆಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts