More

    ಬಡ ವೃದ್ಧೆಗೆ ಬಂಟ್ವಾಳ ಜೇಸಿ ಆಸರೆ, ಕುಸಿಯುವ ಹಂತದಲ್ಲಿದ್ದ ಮನೆ ದುರಸ್ತಿ

    ಬಂಟ್ವಾಳ: ವೃದ್ಧಾಪ್ಯದಲ್ಲಿ ಏಕಾಂಗಿಯಾಗಿ ಬದುಕುತ್ತಿದ್ದ ಎಲಿಯ ನಡುಗೋಡು ಗ್ರಾಮದ ಬದ್ಯಾರುವಿನ ಬಡ ವೃದ್ಧೆ ಸುಂದರಿ ಶೆಟ್ಟಿಗೆ ಬಂಟ್ವಾಳದ ಜೆಸಿಐ ಸಂಸ್ಥೆ ಆಸರೆಯಾಗಿದೆ.

    ಮಾರ್ಚ್ 8ರಂದು ಕುಕ್ಕಿಪ್ಪಾಡಿ ಗ್ರಾಪಂ ಸಭಾಂಗಣದಲ್ಲಿ ಜೆಸಿಐ ಬಂಟ್ವಾಳ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸುಂದರಿ ಶೆಟ್ಟಿಯ ಕರುಣಾಜನಕ ಬದುಕಿನ ಬಗ್ಗೆ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಹರಿಣಾಕ್ಷಿ ರೈ ಹಾಗೂ ಜ್ಞಾನವಿಕಾಸ ಸಮನ್ವಯಾಧಿಕಾರಿ ಸಪ್ನಾ ಜೈನ್ ಜೇಸಿ ಸದಸ್ಯರ ಗಮನ ಸೆಳೆದಿದ್ದರು. ತಕ್ಷಣ ಅವರ ಮನೆಗೆ ಜೇಸಿ ಸದಸ್ಯರು ಹೋಗಿ ಪರೀಶಿಲನೆ ನಡೆಸಿದ್ದಾರೆ. ಕುಸಿಯುವ ಹಂತದಲ್ಲಿದ್ದ ಮನೆಯನ್ನು ತಕ್ಷಣ ದುರಸ್ತಿಗೆ ತೀರ್ಮಾನಿಸಿದರು.

    ಭಾನುವಾರ 16 ಮಂದಿ ಜೇಸಿ ಹಾಗೂ ಜೇಸಿರೆಟ್ ಸದಸ್ಯರು ಶ್ರಮದಾನದ ಮೂಲಕ ಸುಂದರಿ ಶೆಟ್ಟಿಯವರ ಮನೆ ದುರಸ್ತಿಗೊಳಿಸಿದ್ದಾರೆ. ಮನೆಯ ಅಡುಗೆ ಕೋಣೆಯ ಛಾವಣಿಯನ್ನು ಸಂಪೂರ್ಣ ದುರಸ್ತಿಗೊಳಿಸಿದ್ದಾರೆ. ಶೌಚಗೃಹ ಪುನಃ ನಿರ್ಮಿಸಿದ್ದಾರೆ.

    ನೆಮ್ಮದಿ ತಂದ ನೆರವು: ಪತಿ ಇಹಲೋಕ ತ್ಯಜಿಸಿ 10 ವರ್ಷ ಕಳೆದಿದಿದೆ. ಬಾಳಿಗೆ ಬೆಳಕಾಗಿದ್ದ ಓರ್ವ ಮಗ ಹದಿನೆಂಟರ ಹರೆಯದಲ್ಲಿಯೇ ಅಸುನೀಗಿದ್ದಾನೆ. ಬದುಕಿನಲ್ಲಿ ಎಲ್ಲ ಕಳೆದುಕೊಂಡು ಇರುವ ಮನೆಯೂ ಕುಸಿದುಹೋಗುತ್ತದೆ ಎನ್ನುವ ಆತಂಕದಲ್ಲಿದ್ದ ಸುಂದರಿ ಶೆಟ್ಟಿಯವರಿಗೆ ಜೆಸಿಐ ಬಂಟ್ವಾಳದ ಸದಸ್ಯರ ನೆರವು ನೆಮ್ಮದಿ ಮೂಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts