More

    ಅವತ್ತು ಅವಮಾನ, ಇವತ್ತು ಅಭಿಮಾನ!

    ಬಂಟ್ವಾಳ: ಘಟನೆ 1: ಕಳೆದ ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದ ನೇತ್ರಾವತಿ ನದಿಗೆ ಯುವಕರ ತಂಡ ಹಳೇ ಸೇತುವೆ ಮೇಲೆ ನಿಂತು ಒಬ್ಬೊಬ್ಬರಾಗಿ ಧುಮುಕುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದು ಅಪಾಯಕಾರಿ. ಈ ರೀತಿ ಮಾಡಬಾರದು ಎಂದೆಲ್ಲ ಯುವಕರ ಈ ಸಾಹಸ ಪ್ರದರ್ಶನವನ್ನು ಸಾಕಷ್ಟು ಟೀಕೆಗೆ ಗುರಿ ಮಾಡಲಾಗಿತ್ತು.

    ಘಟನೆ 2: ಮೇ 24ರಂದು ನೇತ್ರಾವತಿ ನದಿಗೆ ಹಾರಿ ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿದಾಗ ಯುವಕರು ಸೇತುವೆ ಮೇಲಿಂದ ಹಾರಿ ಆತನ ಪ್ರಾಣ ರಕ್ಷಣೆಗೆ ಯತ್ನಿಸಿದ ದೃಶ್ಯಾವಳಿಯೂ ವೈರಲ್ ಆಗಿದೆ. ಇದಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಮೇಲಿನ ಘಟನೆಗಳೆರಡೂ ಪ್ರತ್ಯೇಕ. ಆದರೆ ಸೇತುವೆ ಮೇಲಿಂದ ಹಾರಿದ ಯುವಕರಲ್ಲಿ ಬಹುತೇಕರು ಅವರೇ. ಮೊದಲನೇ ಘಟನೆಯಲ್ಲಿ ಅವಮಾನ, ಎರಡನೇ ಘಟನೆಗೆ ಅಭಿಮಾನ, ಸನ್ಮಾನ. ಕಲ್ಲಡ್ಕ ಸಮೀಪದ ಕೊಳಕೀರು ನಿವಾಸಿ ನಿಶಾಂತ್ ಆರ್ಥಿಕ ಸಂಕಷ್ಟದಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.

    ಈದ್ ಉಲ್ ಫಿತ್ರ್ ಹಬ್ಬದ ಸಂಭ್ರಮಾಚರಣೆಯಲ್ಲಿದ್ದ ಯುವಕರು ಪ್ರಾಣದ ಹಂಗು ತೊರೆದು ನದಿಗೆ ಧುಮುಕಿದ್ದರು. ಹಬ್ಬದ ನಿಮಿತ್ತ ಸಹೋದರಿ ಮನೆಗೆ ಹೋಗಿ ಬರುತ್ತಿದ್ದ ಗೂಡಿನ ಬಳಿಯ ನಿವಾಸಿ ಅಫ್ರಿದ್ ಈ ದೃಶ್ಯ ಕಂಡು ತಕ್ಷಣ ಸ್ಥಳೀಯ ಯುವಕರಿಗೆ ಮಾಹಿತಿ ನೀಡಿದ್ದರು. ಮಹಮ್ಮದ್, ಝಾಹೀರ್, ಮುಕ್ತಾರ್, ಸಮೀರ್, ತೌಸೀಫ್ ಓಡಿ ಬಂದು ಸೇತುವೆಯಿಂದ ಧುಮುಕಿ ಯುವಕನನ್ನು ನದಿ ತೀರಕ್ಕೆ ಎಳೆ ತಂದರು. ಆರಿಫ್ ಕರೊನಾ ಆತಂಕವನ್ನು ಲೆಕ್ಕಿಸದೆ ಬಾಯಿಗೆ ಬಾಯಿ ಇಟ್ಟು ಕೃತಕ ಉಸಿರಾಟ ನೀಡಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಬಳಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ದುರದೃಷ್ಟದಿಂದ ಯುವಕನ ಜೀವ ಉಳಿಸಲಾಗಲಿಲ್ಲ.

    ಇದನ್ನೂ ಓದಿ  http://ಕೋಡೆಡ್ ಮೆಸೇಜ್ ಹೊತ್ತ ಪಾಕ್‌ನ ಗೂಢಚಾರಿ ಪಾರಿವಾಳ ವಶ!

    ಹಲವು ಕಾರ್ಯಾಚರಣೆ

    ಈ ತಂಡದ ರಕ್ಷಣಾ ಕಾರ್ಯಾಚರಣೆ ಇದೇ ಮೊದಲಲ್ಲ. ಈ ಹಿಂದೆ ಮೈಸೂರಿನ ಕುಟುಂಬ ನೇತ್ರಾವತಿ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದಾಗ ಮಹಿಳೆ, ನಾಯಿಯನ್ನು ಈ ತಂಡ ರಕ್ಷಿಸಿದೆ. ಕಾಫಿ ಡೇ ಮಾಲೀಕ ಸಿದ್ದಾರ್ಥ ಶೋಧದಲ್ಲಿಯೂ ಈ ತಂಡ ಕಾರ್ಯಾಚರಿಸಿದೆ.

    ನೇತ್ರಾವತಿ ನದಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಹಲವು ಮಂದಿಯನ್ನು ರಕ್ಷಿಸಿದ್ದೇವೆ. ಸ್ಥಳೀಯಾಡಳಿತವೂ ತುರ್ತು ಸಂದರ್ಭ ನಮ್ಮನ್ನೇ ಆಹ್ವಾನಿಸುತ್ತದೆ. ಆದರೆ ಸರ್ಕಾರದಿಂದ ಯಾವುದೇ ರಕ್ಷಣಾ ಸಾಮಗ್ರಿ ಸಿಕ್ಕಿಲ್ಲ.

    | ಮಹಮ್ಮದ್ ಈಜುಗಾರ

    ಕಾರ್ಮಿಕರ ಗುಡಿಸಲುಗಳಿಗೆ ದುಷ್ಕರ್ಮಿಗಳಿಂದ ಬೆಂಕಿ: ಎಸ್ಸೆಸ್ಸೆಲ್ಸಿ ಮಕ್ಕಳ ಪುಸ್ತಕಗಳೂ ಭಸ್ಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts