More

    ಕಲ್ಯಾಣದಲ್ಲಿ ಸಿಡಿದೆದ್ದ ದಲಿತ ಕ್ರಿಯಾ ಸಮಿತಿ

    ಬಸವಕಲ್ಯಾಣ: ಕಲಬುರಗಿ ಹೊರವಲಯದ ಕೋಟನೂರ(ಡಿ)ದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಅವಮಾನಿಸಿರುವುದನ್ನು ಖಂಡಿಸಿ ಮತ್ತು ಕಿಡಿಗೇಡಿಗಳನ್ನು ದೇಶದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿ ದಲಿತ ಹೋರಾಟ ಕ್ರಿಯಾ ಸಮಿತಿಯಿಂದ ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

    ಗಾಂಧಿ ವೃತ್ತದಿಂದ ಮುಖ್ಯ ರಸ್ತೆ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಿದ ಬಳಿಕ ದಲಿತ ಸಂಘಟನೆಗಳ ಪ್ರಮುಖರು ರಸ್ತೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಅಕ್ರೋಶ ವ್ಯಕ್ತಪಡಿಸಿದರು.

    ರವೀಂದ್ರ ಗುರೂಜಿ ಬೌದ್ಧಾಚಾರ್ಯ ಮಾತನಾಡಿ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಅವಮಾನಿಸಿದ ಕಿಡಿಗೇಡಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

    ವಂಚಿತ ಬಹುಜನ ಅಘಾಡಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಾಜೇಶ್ವರಿ ವರದಾನ ಮಾತನಾಡಿ, ಬಾಬಾಸಾಹೇಬ್ ಪುತ್ಥಳಿಗಾದ ಅಪಮಾನ ಇಡೀ ದೇಶಕ್ಕೆ ಮಾಡಿದಂತ ಅವಮಾನ. ಎಲ್ಲರೂ ಒಗ್ಗಟ್ಟಾಗಿ ಖಂಡಿಸಲೇಬೇಕು ಎಂದರು.

    ಪೂಜ್ಯ ಮಿಲಿಂದ ಗುರೂಜಿ, ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ಪಿಂಟು ಕಾಂಬಳೆ, ದಲಿತ ರಕ್ಷಣಾ ವೇದಿಕೆ ಅಧ್ಯಕ್ಷ ಸಿಕಂದರ ಶಿಂಧೆ, ವಾಯ್ಸ್ ಆಫ್ ಅಂಬೇಡ್ಕರ್ ಸಂಘಟನೆ ರಾಜ್ಯಾಧ್ಯಕ್ಷ ಸುರೇಶ ಮೋರೆ, ತಾಪಂ ಮಾಜಿ ಉಪಾಧ್ಯಕ್ಷ ದಿಲೀಪ ಶಿಂಧೆ, ಪ್ರಮುಖರಾದ ಮನೋಹರ ಮೈಸೆ, ಗೌತಮ ಜಾಂತೆ, ಬಾಬಾ ಚೌಧರಿ, ವೈಶಾಲಿ ಮೋರೆ, ಆಕಾಶ ಖಂಡಾಳೆ, ಅಜೀತ್ ಸೂರ್ಯವಂಶಿ ಇತರರು ಘಟನೆಯನ್ನು ಖಂಡಿಸಿದರು.

    ಪೂಜ್ಯ ಧಮ್ಮಪಾಲ ಗುರೂಜಿ, ದಲಿತಪರ ಸಂಘಟನೆಗಳ ಪ್ರಮುಖರಾದ ನಾಗನಾಥ ವಾಡೇಕರ್, ವಾಮನ್ ಮೈಸಲಗೆ, ಶ್ರೀಕಾಂತ ಕಾಂಬಳೆ, ಮಹಾದೇವ ಗಾಯಕವಾಡ, ಗಜೇಂದ್ರ ಮಾಳಗೆ, ದತ್ತಾತ್ರೇಯ ಸೂರ್ಯವಂಶಿ, ಸಂದೀಪ ಮುಕಿಂದೆ, ಅಮೀತ್ ಯಮ್ಹಾನ್, ಶಂಕರ ಫುಲೆ, ದೀಪಕ ಗಾಯಕವಾಡ, ಪವನ್ ಗಾಯಕವಾಡ, ಯುವರಾಜ ಭೆಂಡೆ, ರಾಜು ಸೂರ್ಯವಂಶಿ, ವಿಜಯಕುಮಾರ ಡಾಂಗೆ, ಅಶೋಕ ಮುದಾಳೆ, ಇಕ್ರಾಮೋದ್ದಿನ್ ಖಾದಿವಾಲೆ, ರವೀಂದ್ರ ಕೊಳಕುರ, ಶಿವಕುಮಾರ ಶಟಗಾರ, ಶಿವಕುಮಾರ ಬಿರಾದಾರ, ರಾಮ ಗಾಯಕವಾಡ, ಭೀಮಶಾ ಫುಲೆ, ಬಾಲಾಜಿ ಕಾಂಬಳೆ, ಕಿಶೋರ ಭುತಾಳೆ ಪಾಲ್ಗೊಂಡಿದ್ದರು.

    ಸಿಎಂಗೆ ಬರೆದ ಮನವಿ ಪತ್ರವನ್ನು ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಶಾಂತಗೌಡ ಬಿರಾದಾರ ಅವರಿಗೆ ಸಲ್ಲಿಸಲಾಯಿತು.

    ಕೋಟನೂರದಲ್ಲಿ ಡಾ.ಅಂಬೇಡ್ಕರ್ ಪುತ್ಥಳಿಗೆ ಅವಮಾನ ಇಡೀ ಮಾನವ ಕುಲಕ್ಕೆ ನೋವು ತರುವಂಥದ್ದು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಬಂಧಿಸಿದ್ದು, ಉಳಿದವರನ್ನೂ ಬಂಧಿಸಿ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು. ಇಂಥ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು.
    | ಶರಣು ಸಲಗರ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts