More

    ಬ್ಯಾಂಕ್​ ಷೇರು 1518 ರಿಂದ 2000 ರೂಪಾಯಿಗೆ ಏರಿಕೆ ಸಾಧ್ಯತೆ: ಖರೀದಿಗೆ 39 ತಜ್ಞರ ಸಲಹೆ

    ಮುಂಬೈ: ನೀವು ಕಡಿಮೆ ಸಮಯದಲ್ಲಿ ಉತ್ತಮ ಲಾಭವನ್ನು ನೀಡುವ ಸ್ಟಾಕ್‌ನಲ್ಲಿ ಹೂಡಿಕೆ ಮಾಡಲು ಬಯಸಿದರೆ, ಈ ಸಮಯದಲ್ಲಿ ಎಚ್​ಡಿಎಫ್​ಸಿ ಬ್ಯಾಂಕ್ ಷೇರುಗಳು ನಿಮಗೆ ಉತ್ತಮ ಆಯ್ಕೆಯಾಗಿವೆ. ತಜ್ಞರು ಕೂಡ ಈ ಷೇರನ್ನು ಖರೀದಿಸುವಂತೆ ಸಲಹೆ ನೀಡಿದ್ದಾರೆ. ದೇಶೀಯ ಬ್ರೋಕರೇಜ್ ಸಂಸ್ಥೆ ಪ್ರಭುದಾಸ್ ಲೀಲಾಧರ್ ಹಾಗೂ ಅನೇಕ ತಜ್ಞರು ಇದಕ್ಕಾಗಿ ಹೊಸ ಗುರಿ ಬೆಲೆಯನ್ನು ನಿಗದಿಪಡಿಸಿದ್ಧಾರೆ.

    ದೇಶೀಯ ಬ್ರೋಕರೇಜ್ ಸಂಸ್ಥೆ ಪ್ರಭುದಾಸ್ ಲಿಲ್ಲಾಧರ್ ಈ ಬ್ಯಾಂಕ್ ಷೇರುಗಳಿಗೆ ಹೊಸ ಗುರಿ ಬೆಲೆಯನ್ನು ನಿಗದಿಪಡಿಸಿದೆ. ಇದರ ಪ್ರಕಾರ, ಈ ಷೇರುಗಳ ಬೆಲೆ ರೂ 2000 ದಾಟಬಹುದು. ಪ್ರಸ್ತುತ HDFC ಬ್ಯಾಂಕ್ ಷೇರುಗಳ ಬೆಲೆ 1,518 ರೂ. ಇದೆ. ಮುಂದಿನ ದಿನಗಳಲ್ಲಿ ಈ ಷೇರು ಹೂಡಿಕೆದಾರರಿಗೆ ಶೇ. 30ಕ್ಕೂ ಹೆಚ್ಚು ಲಾಭ ನೀಡಬಹುದು.

    ಕೆಲ ಸಮಯದ ಹಿಂದೆ ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಕೂಡ ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳನ್ನು ಖರೀದಿಸಲು ಸಲಹೆ ನೀಡಿದೆ. ಷೇರಿಗೆ 1950 ರೂ. ಗುರಿ ಬೆಲೆಯನ್ನು ನಿಗದಿಪಡಿಸಿದೆ.

    ಹೆಚ್ಚಿನ ಮಾರುಕಟ್ಟೆ ವಿಶ್ಲೇಷಕರು ಈ ಷೇರುಗಳನ್ನು ಖರೀದಿಸಲು ಸಲಹೆ ನೀಡಿದ್ದಾರೆ. 39 ಷೇರು ಮಾರುಕಟ್ಟೆ ವಿಶ್ಲೇಷಕರು ಈ ಷೇರುಗಳ ಬಗ್ಗೆ ಸಲಹೆಗಳನ್ನು ನೀಡಿದ್ದಾರೆ. ಅದರಲ್ಲಿ 21 ವಿಶ್ಲೇಷಕರು ಅದಕ್ಕೆ ಸ್ಟ್ರಾಂಗ್ ಬೈ ರೇಟಿಂಗ್ ನೀಡಿದ್ದಾರೆ. ಅಲ್ಲದೆ 14 ವಿಶ್ಲೇಷಕರು ಖರೀದಿ ರೇಟಿಂಗ್ ನೀಡಿದ್ದಾರೆ. ಇದಲ್ಲದೆ, ಇತರೆ 4 ಮಂದಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರುಗಳನ್ನು ಹೊಂದಲು ಸಲಹೆ ನೀಡಿದ್ದಾರೆ.

    ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಕೆಲವು ಸಮಯದಿಂದ ನಕಾರಾತ್ಮಕ ಆದಾಯವನ್ನು ನೀಡುತ್ತಿವೆ. ಶುಕ್ರವಾರದ ಕೊನೆಯ ವಹಿವಾಟಿನ ದಿನದಂದು ಈ ಷೇರು 17.40 ರೂ. ಕಡಿಮೆಯಾಗಿದೆ. ಈ ಸ್ಟಾಕ್ ಕಳೆದ 5 ದಿನಗಳಲ್ಲಿ 1.18 ಶೇಕಡಾ ಋಣಾತ್ಮಕ ಆದಾಯವನ್ನು ನೀಡಿದೆ. ಒಂದು ತಿಂಗಳ ಅವಧಿಯಲ್ಲಿ ಈ ಷೇರು ಹೂಡಿಕೆದಾರರಿಗೆ ಶೇಕಡಾ 4ರಷ್ಟು ಕುಸಿದಿದೆ.

    ಕಳೆದ ಆರು ತಿಂಗಳ ಅವಧಿಯಲ್ಲಿ, ಈ ಷೇರು ಹೂಡಿಕೆದಾರರಿಗೆ 1.13 ಪ್ರತಿಶತದಷ್ಟು ಲಾಭ ನೀಡಿದೆ. ಈ ವರ್ಷದ ಆರಂಭದಿಂದ ಈ ಷೇರು ಹೂಡಿಕೆದಾರರಿಗೆ ಶೇ.10.63ರಷ್ಟು ಲಾಭ ನೀಡಿದೆ. ಒಂದು ವರ್ಷದ ಅವಧಿಯಲ್ಲಿ ಶೇ. 9.93ರಷ್ಟು ಋಣಾತ್ಮಕ ಆದಾಯ ನೀಡಿದೆ. ಈ ಸ್ಟಾಕ್ 5 ವರ್ಷಗಳಲ್ಲಿ 33.99 ರಷ್ಟು ಏರಿಕೆ ದಾಖಲಿಸಿದೆ.

     

    ಷೇರು ಸೂಚ್ಯಂಕ ಒಂದು ಲಕ್ಷದತ್ತ ಸಾಗುವ ಮೊದಲೇ ಖರೀದಿಸಬಹುದಾದ 10 ಪ್ರಮುಖ ಸ್ಟಾಕ್​ಗಳ ಪಟ್ಟಿ ಇಲ್ಲಿದೆ…

    3 ವರ್ಷಗಳಲ್ಲಿ 1 ಲಕ್ಷವಾಯ್ತು 2.92 ಕೋಟಿ: 3 ರೂಪಾಯಿಯ ಷೇರು ಹೂಡಿಕೆದಾರರ ಅದೃಷ್ಟವನ್ನೇ ಬದಲಾಯಿಸಿತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts