More

    ಮೂರು ವರ್ಷಗಳ ಬಳಿಕ ಸೆರೆಯಾದ ಬಾಂಗ್ಲಾ ಪ್ರಜೆ: ನಕಲಿ ಪಾಸ್​ಪೋರ್ಟ್​, ಆಧಾರ್, ಪಾನ್​ ಕಾರ್ಡ್​ ಪತ್ತೆ

    ಬೆಂಗಳೂರು: ದಲ್ಲಾಳಿಗಳ ಸಹಾಯದಿಂದ ಆಧಾರ್​, ಪಾನ್​ ಪಾರ್ಡ್​ ಮತ್ತು ಭಾರತೀಯ ಪಾಸ್​ಪೋರ್ಟ್​ ಮಾಡಿಸಿಕೊಂಡಿದ್ದ ಬಾಂಗ್ಲಾದೇಶದ ಪ್ರಜೆ ಮೂರು ವರ್ಷಗಳ ಬಳಿಕ ಇಮಿಗ್ರೇಷನ್​ ಅಧಿಕಾರಿಗಳಿಗೆ ಸೆರೆ ಸಿಕ್ಕಿದ್ದಾನೆ. ಬಾಂಗ್ಲಾದೇಶ ಮೂಲದ ಸಕೀಲ್​ ಅಹ್ಮದ್​ (28) ಬಂಧಿತ.

    10ನೇ ತರಗತಿ ವ್ಯಾಸಂಗ ಮಾಡಿರುವ ಸಕೀಲ್​, ಬಾಂಗ್ಲಾದ ಏಜೆಂಟ್​ ಹುಸೇನ್​ ಎಂಬಾತನ ಸಂಪರ್ಕ ಮಾಡಿ 1.10 ಲಕ್ಷ ರೂ. ಕೊಟ್ಟು ಭಾರತೀಯ ಏಜೆಂಟ್​ ಸಂಪರ್ಕ ಮಾಡಿ ಆಧಾರ್​, ಪಾನ್​ ಕಾರ್ಡ್​​ ಮತ್ತು ಭಾರತೀಯ ಪಾಸ್​ ಪೋರ್ಟ್​ ಪಡೆಯುತ್ತಾನೆ. ಆನಂತರ 2019ರಲ್ಲಿ ಪಶ್ಚಿಮ ಬಂಗಾಳದ ಅಕೋರಾ ಗಡಿಭಾಗದಲ್ಲಿ ಸಾಫೀಕ್​ ಎಂಬಾತ ಸಹಾಯದಿಂದ ಭಾರತಕ್ಕೆ ಬಂದು ಚೆನ್ನೈ ತಲುಪುತ್ತಾನೆ. ಅಲ್ಲಿ ಕ್ಯಾಂಟೀನ್​ನಲ್ಲಿ ಕೆಲಸಕ್ಕೆ ಸೇರಿದ್ದು, ಕೆಲಸ ಮಾಡಿಕೊಂಡು ಭಾರತೀಯ ಪ್ರಜೆ ಎಂದು ಮತ್ತಷ್ಟು ದಾಖಲೆಗಳನ್ನು ಸಿದ್ದಪಡಿಸಿಕೊಂಡು ವೀಸಾ ಪಡೆದು ಏಪ್ರಿಲ್​ನಲ್ಲಿ ಮಲೇಷ್ಯಾಗೆ ಪ್ರಯಾಣ ಬೆಳೆಸಿದ್ದ.

    ಮಲೇಷ್ಯಾದ ಇಮಿಗ್ರೇಷನ್​ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿ ಕೊನೆಗೆ ಬಾಂಗ್ಲಾ ಪ್ರಜೆ ಎಂಬುದು ಗೊತ್ತಾಗಿ ಭಾರತಕ್ಕೆ ಗಡಿಪಾರು ಮಾಡಿದ್ದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಾಂಗ್ಲಾ ಪ್ರಜೆಯನ್ನು ಇಮಿಗ್ರೇಷನ್​ ಅಧಿಕಾರಿಗಳು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ರಸ್ತೆಗಿಳಿದು 100 ಕಾರಣ ಹೇಳಿ ವಾದ ಮಾಡ್ಬೇಡಿ: ನಮ್ಗೂ ಆಯ್ಕೆ ಇದ್ದಿದ್ರೆ ಒಳಗೇ ಇರ್ತಿದ್ವಿ ಅಂದ ಪೊಲೀಸ್ರು ಕೊಟ್ಟ ಆ ಒಂದು ಕಾರಣ ಇಲ್ಲಿದೆ..👇

    ‘ಆಕ್ಸಿಜನ್ ಲೆವೆಲ್ 74, ಯಾವ ಆಸ್ಪತ್ರೆಯಲ್ಲೂ ಕರೆ ಸ್ವೀಕರಿಸ್ತಿಲ್ಲ.. ಪ್ಲೀಸ್ ಹೆಲ್ಪ್​ ಮಾಡಿ’: ಭಾರತದಲ್ಲಿರುವ ತಂದೆಗಾಗಿ ಅಮೆರಿಕದಲ್ಲಿರುವ ಪುತ್ರಿಯ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts