More

    ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಹೇಗೆ?- ಜಾರಿಗೆ 15 ಸೂತ್ರಗಳನ್ನು ಮುಂದಿಟ್ಟಿದ್ದಾರೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು

    ಬೆಂಗಳೂರು: ನಗರದಲ್ಲಿ ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿಗೆ ತರುವ ಉದ್ದೇಶದಿಂದ ಎಲ್ಲ ಪೊಲೀಸರಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು 15 ಸೂಚನೆಗಳನ್ನು ಆದೇಶಿಸಿದ್ದಾರೆ. ಅವುಗಳ ವಿವರ ಇಂತಿದೆ

    1. ಹಾಲು, ನ್ಯೂಸ್ ಪೇಪರ್, ತರಕಾರಿ ವ್ಯಾಪಾರಿಗಳಿಗೆ ಯಾವುದೇ ತೊಂದರೆ ಕೊಡಬಾರದು. ಎಟಿಎಂ ಬೂತ್ ಗೆ ಹಣ ತುಂಬವರಿಗೂ ಪಾಸ್ ಇಲ್ಲದಿದ್ದರೂ ಸಂಚಾರಕ್ಕೆ ಅವಕಾಶ ಕೊಡಬೇಕು.
    2. ದಿನಸಿ, ತರಕಾರಿ ಅಂಗಡಿ ಸೇರಿ ದಿನ ಬಳಕೆ ವಸ್ತುಗಳ ಅಂಗಡಿ ಮುಂಭಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಂಗಡಿ ಮುಂಭಾಗ ರಂಗೋಲಿ, ಬಳಪದಲ್ಲಿ ಮಾಕ್೯ ಮಾಡಿಸಬಾರದು. ಪೇಯಿಂಟ್ ನಲ್ಲಿ ಕಡ್ಡಾಯವಾಗಿ ಮಾಕ್೯ ಮಾಡಿಸುವ ಕೆಲಸ ಮಾಡಬೇಕು.
    3. ಪಿಆರ್ ವಿಭಾಗ ತೆರೆದು ಠಾಣೆಗೆ ಬರುವ ಜನರಿಗೆ ಉತ್ತಮ ಸೇವೆ ನೀಡಬೇಕು. ಠಾಣೆ ಮಟ್ಟದಲ್ಲಿ ಬಗೆಹರಿಯದಿದ್ದರೇ ಎಸಿಪಿ ಗಮನಕ್ಕೆ ತರಬೇಕು.
    4. ಎಲ್ಲ‌ರಸ್ತೆ ಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಅನಗತ್ಯ ವಾಹನಗಳ ಸಂಚಾರವನ್ನು ನಿರ್ಬಂಧಿಸಬೇಕು.
    5. ಸೋಮವಾರದಿಂದ ಜಪ್ತಿ ಮಾಡಿರುವ ವಾಹನಗಳನ್ನು ಲಾಕ್ ಡೌನ್ ಮುಗಿಯುವವರೆಗೂ ಬಿಡಬಾರದು. ಜತೆಗೆ ಕೇಸ್ ಸಹ ದಾಖಲಿಸಬೇಕು.
    6. ಪಾಸ್ ಪರಿಶೀಲನೆ ಮಾಡಬೇಕು. ಬೇಡದೆ ಇದ್ದರವರಿಗೆ ಡಿಸಿಪಿ. ಎಸಿಪಿ, ಇನ್ಸ್‌ಪೆಕ್ಟರ್ ಗಮನ ಕೊಡಬೇಕು. ದಿನಸಿ, ಹಾಲು ತರಕಾರಿ ಸರಬರಾಜು ಮಾಡುವರಿಗೆ ಆದ್ಯತೆ ಕೊಡಬೇಕು. ಚೆಕ್ ಪಾಯಿಂಟ್ ಗಳಲ್ಲಿ ಪಾಸ್ ಪರಿಶೀಲನೆ ಮಾಡಬೇಕು.
    7. ಸಂಚಾರ, ಸಿವಿಲ್ ಜೊತೆ ಜೊತೆ ಯಲ್ಲಿ ಕೆಲಸ ಮಾಡಬೇಕು. ವಾಹನ ಜಪ್ತಿ ಮಾಡುವಾಗ ವಿಡಿಯೋ ರೆಕಾರ್ಡ್ ಮಾಡಿಕೊಳ್ಳಬೇಕು.
    8. ನೋ ಲಾಠಿ ಕರ್ತವ್ಯಕ್ಕೆ ಉತ್ತಮ ಅಭಿಪ್ರಾಯ ಬಂದಿದೆ. ನೋ ಲಾಠಿ ಮುಂದುವರೆಯಲಿ.
    9. ಪೇಯಿಂಗ್ ಗೆಸ್ಟ್ ಗಳಲ್ಲಿ ಸಮಸ್ಯೆ ಮುಂದುವರೆದಿದ್ದೆ. ಆಯಾ ಠಾಣಾ ಪಿಐ ಗಳು ಪಿಜಿ ಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಬೇಕು. ಅಲ್ಲಿ ‌ಉಳಿದುಕೊಂಡಿರುವರಿಗೆ ಊಟದ ವ್ಯವಸ್ಥೆ ಅಲ್ಲಿಯೇ ಮಾಡಬೇಕು. ಹೆಚ್ವಿನ ಬಾಡಿಗೆ ಕೇಳದಂತೆ ಸೂಚನೆ ಕೊಡಬೇಕು. ಅದೇ ರೀತಿ ತಿಂಗಳ ಕೊನೆ ಬಂದಿದೆ. ಮನೆ ಮಾಲೀಕರು ಬಾಡಿಗೆ ಕೇಳದಂತೆ ಸೂಚನೆ ಕೊಡಿ. ಸರ್ಕಾರ ಈ ಬಗ್ಗೆ ಆದೇಶ ಮಾಡಿದೆ.
    10. ಸಂಚಾರ ವಿಭಾಗದಲ್ಲಿ ಜಾರಿಗೆ ಇರುವಂತೆ ಸಿವಿಲ್ ಪೊಲೀಸರಿಗೂ ಮೂರು ಪಾಳಿಯಲ್ಲಿ ಕರ್ತವ್ಯ ನಿಯೋಜಿಸಬೇಕು. ಇದರ ಜವಾಬ್ದಾರಿ ಆಯಾ ಠಾಣೆ ಇನ್ಸ್‌ಪೆಕ್ಟರ್, ಡಿಸಿಪಿ, ಎಸಿಪಿಗೆ ವಹಿಸಿಕೊಳ್ಳಬೇಕು.
    11. ಕಿಮೋ ತೆರಪಿ, ಡಯಾಲಿಸ್ ಸೇರಿ ಮೆಡಿಕಲ್ ತುರ್ತು ಸೇವೆಗೆ ಹೊಯ್ಸಳ ಬಳಸಿಕೊಳ್ಳಿ. ಕರೆ ಬಂದ ಕೂಡಲೇ ರೋಗಿಯನ್ನು ಹತ್ತಿರದ ಆಸ್ಪತ್ರೆ ಗೆ ಅಥವಾ ಬೇರೊಂದು ವಾಹನ ವ್ಯವಸ್ಥೆ ಮಾಡಿ ವಾಪಸ್ ನಿಗದಿತ ಜಾಗಕ್ಕೆ ಹೊಯ್ಸಳ ಬಂದು ನಿಲ್ಲಬೇಕು.
    12. ವಾಯು ವಿಹಾರ ನಿಲ್ಲಿಸಬೇಕು. ಟೆರೆಸ್, ಮನೆ ಆವರಣದಲ್ಲಿ ವಾಕಿಂಗ್ ಮಾಡುವಂತೆ ಸೂಚನೆ ಕೊಡಬೇಕು. ಗುಂಪು ಗುಂಪಾಗಿ ಓಡಾಡುವುದು ಬೇಡ ಎಂದು ಹೇಳಬೇಕು. ಈ ಬಗ್ಗೆ ಮೈ ಕ್ ನಲ್ಲಿ ಸೂಚನೆ ಕೊಟ್ಟು ಕಳುಹಿಸಬೇಕು.
    13. ಉತ್ತರ ಪ್ರದೇಶ, ಬಿಹಾರ, ಬೇರೆ ರಾಜ್ಯ, ಜಿಲ್ಲೆಯ ನಿವಾಸಿಗಳಿಗೆ ವಸತಿ, ಊಟದ ವ್ಯವಸ್ಥೆ ಮಾಡಬೇಕು. ಕಷ್ಟ ಎಂದು ಕೇಳಿಕೊಂಡು‌ ಬಂದಾಗ ಪರಿಹರಿಸಿ ಕಳುಹಿಸಬೇಕು.
    14. ದಾನಿಗಳು ಬಂದಾಗ ಅವರಿಂದ ಗೌರವದಿಂದ ಪಡೆದು ನಿರ್ಗತಿಕರಿಗೆ ವಿತರಣೆ ಮಾಡಿ ಕಳುಹಿಸಬೇಕು. ಪೋಟೋ ತೆಗೆದು ಪಬ್ಲಿಕ್ ಸಿಟಿ ಕೊಡಲು ಅವಕಾಶ ಕೊಡಬಾರದು.
    15. ಎಲ್ಲ ಸಿಬ್ಬಂದಿ ತಾಳ್ಮೆಯಿಂದ ಇರಬೇಕು. ಅವರ ಕುಟುಂಬ ಸದಸ್ಯರಿಗೆ ಸ್ಯಾನಿಟೈಸರ್, ಮಾಸ್ಕ್ ವಿತರಣೆ ಮಾಡಬೇಕು. ಬಿಬಿಎಂಪಿ ಅಧಿಕಾರಿಗಳನ್ನು ಭೇಟಿ ಮಾಡಿ ಠಾಣೆ, ಪೊಲೀಸ್ ‌ಕ್ವಾರ್ಟಸ್ ನಲ್ಲಿ ಕ್ರಿಮಿನಾಶಕ ಸಿಂಪಡಿಸುವ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಪೊಲೀಸ್ ಸಿಬ್ಬಂದಿ ಅನಾರೋಗ್ಯ ಕ್ಕೆ ಒಳಗಾಗಬಾರದು. ಜಾಗೃತಿ ವಹಿಸಬೇಕು ಎಂದು ಪೊಲೀಸರಿಗೆ ಭಾಸ್ಕರ್ ರಾವ್ ಸೂಚನೆ ನೀಡಿದ್ದಾರೆ.

    ಫಿಟ್​​ನೆಸ್​ ಗುಟ್ಟು ಬಿಚ್ಚಿಟ್ಟ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ನೀಡಿದ ಸಂದೇಶ ಹೀಗಿದೆ…; ನೀವೂ ಟ್ರೈ ಮಾಡಬಹುದು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts