ಬೆಂಗಳೂರು ಕಂಬಳ; ಹೆಚ್ಚು ಶಬ್ಧ ಮಾಡಬೇಡಿ..!

KAMBALA
Published on

ಬೆಂಗಳೂರು: ‘ಬೆಂಗಳೂರು ಕಂಬಳ’ ಉತ್ಸವ ವೇಳೆ ಜೋರು ಶಬ್ಧದ ಧ್ವನಿವರ್ಧಕಗಳ ಬಳಕೆಗೆ ಅವಕಾಶ ನೀಡದಂತೆ ಸದಾಶಿವನಗರ ಪೊಲೀಸರಿಗೆ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಮನವಿ ಮಾಡಿದೆ.

ಬೆಂಗಳೂರಿನಲ್ಲಿ ಮೊದಲ ಬಾರಿಗೆ ಎರಡು ದಿನಗಳ ಕಂಬಳ ನಡೆಯಲಿದ್ದು, ಸಕಲ ಸಿದ್ಧತೆಗಳು ನಡೆದಿವೆ. ಈ ಹಂತದಲ್ಲಿ ಶಬ್ಧ ಮಾಲಿನ್ಯ ತಡೆಗಟ್ಟುವಂತೆ ಪೊಲೀಸರಿಗೆ ಸದಾಶಿವನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಮೊರೆ ಹೋಗಿದೆ.

ಕಂಬಳದ ವೇಳೆ ಅಧಿಕ ಪ್ರಮಾಣದಲ್ಲಿ ಧ್ವನಿವರ್ಧಕ ಬಳಕೆಯಿಂದ ಹಿರಿಯ ನಾಗರಿಕರು ಮತ್ತು ಮಕ್ಕಳಿಗೆ ತೊಂದರೆ ಆಗಲಿದೆ. ಶಬ್ಧ ಮಾಲಿನ್ಯ ಮಾಡದಂತೆ ಆಯೋಜಕರಿಗೆ ಸೂಚಿಸಬೇಕು ಎಂದು ಸಂಘವು ಕೋರಿದೆ. ಅಂಚೆ ಮೂಲಕ ಮನವಿ ಸಲ್ಲಿಸಿದೆ. ಈ ಮನವಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net