More

    ನೆಲ್ಲಿತಾಳಪುರದಲ್ಲಿ ಕಾಡಾನೆಗಳ ದಾಳಿಗೆ ಬಾಳೆ ನಾಶ

    ನಂಜನಗೂಡು: ತಾಲೂಕಿನ ನೆಲ್ಲಿತಾಳಪುರ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಬಾಳೆ ಹಾಗೂ ತೆಂಗಿನ ಗಿಡಗಳನ್ನು ನಾಶಪಡಿಸಿವೆ.

    ಮಂಗಳವಾರ ರಾತ್ರಿ ಗ್ರಾಮದ ರೈತ ಮನೋಹರ್ ಮತ್ತು ದಿನೇಶ್ ಎಂಬುವವರ ಜಮೀನಿಗೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಸುಮಾರು 6 ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಗಿಡಗಳನ್ನು ಧ್ವಂಸ ಮಾಡಿವೆ. ಜಮೀನಿನಲ್ಲಿ ಅಳವಡಿಸಿದ್ದ ಸೋಲಾರ್ ತಂತಿ ಬೇಲಿಯನ್ನೂ ಕಾಡಾನೆಗಳು ತುಳಿದು ಹಾಕಿದ್ದು, ತೋಟದ ಮನೆ ಮುಂಭಾಗದ ಗೇಟನ್ನು ಮುರಿದು ಹಾಕಿವೆ.

    ರೈತ ಮನೋಹರ್ ಮಾತನಾಡಿ, ಚಿಕ್ಕದೇವಮ್ಮನ ಬೆಟ್ಟದಿಂದ ಇಳಿದು ಬಂದಿರುವ ಕಾಡಾನೆಗಳ ಹಿಂಡು ಕಳೆದ ಒಂದು ವಾರದಿಂದಲೂ ಚಂದ್ರವಾಡಿ, ಲಂಕೆ, ರಾಜೂರು ಹಾಗೂ ನೆಲ್ಲಿತಾಳಪುರ ಇನ್ನಿತರ ಗ್ರಾಮಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಾವು ಸಾಲ- ಸೋಲ ಮಾಡಿ ಬೆಳೆ ಬೆಳೆಯುತ್ತಿದ್ದೇವೆ. ಒಂದು ಕಡೆ ಮಳೆ ಇಲ್ಲ, ಮತ್ತೊಂದೆಡೆ ಕೊಳವೆ ಬಾವಿಗಳಲ್ಲಿ ಸಮರ್ಪಕ ನೀರು ಸಹ ಲಭ್ಯವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಕಾಡಾನೆಗಳ ಉಪಟಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts