More

    ಭಾಷಾ ಶ್ರೇಷ್ಠತೆ ಧೋರಣೆ ಬೇಡ

    ಬಣಕಲ್: ಒಂದು ಮಾಧ್ಯಮ ಶ್ರೇಷ್ಠ, ಮತ್ತೊಂದು ಕನಿಷ್ಠ ಎಂಬ ಧೋರಣೆ ಕೈಬಿಡದಿದ್ದರೆ ವಿದ್ಯಾರ್ಥಿ ಸಮೂಹ ಕರ್ನಾಟಕ ಸಾಂಸ್ಕೃತಿಕ ಜಗತ್ತಿನ ಸ್ವಾಭಿಮಾನಿ ಯುವ ನಾಯಕರಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಲೇಖಕ ಡಾ. ಸಂಪತ್ ಬೆಟ್ಟಗೆರೆ ಹೇಳಿದರು.
    ನಜರತ್ ಐಸಿಎಸ್‌ಇ ಇಂಗ್ಲಿಷ್ ಶಾಲೆಯಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
    ಇಂದಿನ ಶೈಕ್ಷಣಿಕ ವಾತಾವರಣ ಕನ್ನಡ ಮತ್ತು ಆಂಗ್ಲ ಮಾಧ್ಯಮ ಎಂದು ವಿದ್ಯಾರ್ಥಿಗಳನ್ನು ವಿಭಾಗ ಮಾಡುತ್ತಿರುವುದರಿಂದ ಕನ್ನಡ ನಾಡಿನ ಒಂದೇ ತಲೆಮಾರಿನ ವಿದ್ಯಾರ್ಥಿಗಳಲ್ಲಿ ಪರಸ್ಪರ ಕೀಳರಿಮೆ ತಂದೊಡ್ಡಿದೆ. ಇಂಗ್ಲಿಷ್ ಮಾಧ್ಯಮದ ಶಾಲೆಯವರೆಲ್ಲ ಕನ್ನಡ ವಿರೋಧಿ ನೀತಿ ಅನುಸರಿಸಿಲ್ಲ. ಕೇವಲ ಬೆರಣಿಕೆಯಷ್ಟು ಮಂದಿ ಮಾಡಿದ ತಪ್ಪಿಗೆ ಎಲ್ಲರನ್ನೂ ಒಂದೇ ದೃಷ್ಟಿಕೋನದಲ್ಲಿ ದೂಷಿಸುವುದು ಸರಿಯಲ್ಲ ಎಂದರು.
    ಪ್ರಾಚಾರ್ಯೆ ಸಿಸ್ಟರ್ ಹಿಲ್ಡಾ ಲೋಬೋ ಮಾತನಾಡಿ, ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡ ನಾಡು, ನುಡಿಯ ಭವ್ಯ ಪರಂಪರೆಯ ಮಹತ್ವ ಮಕ್ಕಳಿಗೆ ತಿಳಿಸಬೇಕಿದೆ ಎಂದು ಹೇಳಿದರು. ಕನ್ನಡ ಶಿಕ್ಷಕರಾದ ಕೆ.ಸಿ.ಸಾಂಚಿತಾ, ಸೆವರಿನ್ ಲೋಬೊ, ವರ್ಷಾ ಪೈ, ಕಚೇರಿ ಆಡಳಿತಾಧಿಕಾರಿ ಲವಕುಮಾರ್, ಶಿಕ್ಷಕಿಯರು, ವಿದ್ಯಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts