More

    ಇಲಿ ಮಾಂಸ ಮಾರಾಟ ನಿಲ್ಲಿಸಿದ್ದಕ್ಕೆ ಗೋಳಿಡುತ್ತಿದೆ ಚೀನಾ; ಭಾರತಕ್ಕೆ ಕರೊನಾ ಚಿಂತೆಯಾದರೆ ಚೀನಾಕ್ಕೆ ಇಲಿ ಚಿಂತೆ

    ವುಹಾನ್​: ಚೀನಾದಲ್ಲಿ ಕರೊನಾ ವೈರಸ್​ನ ಕಾಟ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಪ್ರಪಂಚದ ಬೇರೆ ದೇಶಗಳಲ್ಲಿ ಹೆಚ್ಚಾಗಿದೆ. ಕರೊನಾ ವೈರಸ್​ನ ಸೃಷ್ಟಿಕರ್ತ ದೇಶವಾಗಿರುವ ಚೀನಾದಲ್ಲಿ ಹಸಿ ಮಾಂಸಗಳ ಸೇವನೆಯಿಂದಲೇ ಈ ವೈರಸ್​ ಬಂದಿದೆ ಎಂದು ಊಹಿಸಲಾಗಿದ್ದು, ಕಾಡು ಪ್ರಾಣಿಗಳ ಮಾರಾಟ ಮತ್ತು ಸೇವನೆಯನ್ನು ಅಲ್ಲಿನ ಸರ್ಕಾರ ನಿಷೇಧಿಸಿದೆ. ಆದರೆ ಕಾಡು ಪ್ರಾಣಿಗಳ ಸಾಕಾಣಿಕೆ ಮತ್ತು ಅದನ್ನು ತಿಂದು ಬದುಕುವುದಕ್ಕೆ ಹೊಂದಿಕೊಂಡಿರುವ ಚೀನಾದ ಜನರು ಈ ನಿಷೇಧದಿಂದ ತೀರಾ ಚಿಂತಾಜನಕವಾಗಿದ್ದಾರೆ.

    ದಕ್ಷಿಣ ಚೀನಾದಲ್ಲಿ ಅತ್ಯಂತ ಪ್ರಸಿದ್ಧ ಆಹಾರದಲ್ಲಿ ಬಿದಿರು ಇಲಿಯ ಖಾದ್ಯಗಳೂ ಇವೆ. ಕೇವಲ ಬಿದಿರು ಮತ್ತು ಕಬ್ಬನ್ನು ತಿಂದು ಬದುಕುವ ಇಲಿಗಳನ್ನು ಇಲ್ಲಿನ ಜನರು ಸಾಕಿ, ಅದರಿಂದ ರುಚಿಕರ ಖಾದ್ಯಗಳನ್ನು ತಯಾರಿಸಿಕೊಂಡು ಸೇವಿಸುತ್ತಾರೆ. ಅತೀ ಕಡಿಮೆ ಬಂಡವಾಳದ ಈ ಬಿದಿರು ಇಲಿ ಸಾಕಾಣಿಕೆಯನ್ನು ಅಲ್ಲಿನ ಅನೇಕ ಬಡವರು ನಂಬಿಕೊಂಡಿದ್ದಾರೆ. 15ರಿಂದ 20 ಬಿದಿರು ಇಲಿಗಳನ್ನು ಸಾಕಿಕೊಂಡರೂ ಸಾಕು, ವರ್ಷ ಪೂರ್ತಿ ತಮ್ಮ ಜೀವನವನ್ನು ಸಾಗಿಸಬಹುದು ಎನ್ನುತ್ತಾರೆ ಅಲ್ಲಿನ ಜನರು.

    ಚೀನಾದಲ್ಲಿ ಕರೊನಾ ಬಂದ ಹಿನ್ನೆಲೆ ಅನೇಕ ಕಾಡು ಪ್ರಾಣಿಗಳನ್ನು ಗುರುತಿಸಲಾಗಿದ್ದು, ಅವುಗಳಿಂದಲೇ ವೈರಸ್​ ಬಂದಿರಬಹುದು ಎಂದು ಶಂಕಿಸಲಾಗಿದೆ. ಹಾಗಾಗಿ ಆ ಪ್ರಾಣಿಗಳ ಸಾಕಾಣಿಕೆಯನ್ನು ನಿಷೇಧ ಮಾಡಿಬಿಟ್ಟಿದೆ ಅಲ್ಲಿನ ಸರ್ಕಾರ. ಇದರಿಂದಾಗಿ ಅನೇಕ ಬಡವರ ಮೇಲೆ ಪರಿಣಾಮ ಬೀರಿದೆ. ಬಿದಿರು ಇಲಿಯ ಸಾಕಾಣಿಕೆಯನ್ನೇ ನಂಬಿಕೊಂಡಿರುವ ಬಡವರು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ.

    ಈ ಮೊದಲು ಸರ್ಕಾರ ಬಿದಿರು ಇಲಿ ಸಾಕಾಣಿಕೆಗೆ ಪ್ರೋತ್ಸಾಹ ನೀಡುತ್ತಿತ್ತು. ಬಡವರಿಗೆ ಸಾಕುವುದಕ್ಕೆ ಉಚಿತ ಇಲಿಗಳನ್ನು ನೀಡಿ ಸಹಕರಿಸುತ್ತಿತ್ತು. ಈಗಾಗಲೇ ದೇಶದಲ್ಲಿ 66 ಮಿಲಿಯನ್​ಗೂ ಹೆಚ್ಚು ಬಿದಿರು ಇಲಿಗಳಿವೆ. ಇದನ್ನು ಸಾಕುತ್ತಿರುವವರಲ್ಲಿ ಶೇ.20 ಜನರು ಬಡತನ ರೇಖೆಗಿಂತ ಕೆಳಗಿರುವವರಾಗಿದ್ದಾರೆ. ಹಾಗಿದ್ದಾಗ ಸರ್ಕಾರ ಇದನ್ನು ನಿಷೇಧ ಮಾಡಿರುವುದು ಜನರಿಗೆ ತೊಂದರೆಯಾಗಲಿದೆ. ಸರ್ಕಾರ ಅವರ ಅಳಲನ್ನು ಪರಿಗಣಿಸಿ ನಿಷೇಧವನ್ನು ತೆಗೆಯಬೇಕು ಎಂದು ಅನೇಕರು ಕೇಳಿಕೊಂಡಿದ್ದಾರೆ. (ಏಜೆನ್ಸೀಸ್​)

    ಮಾಂಸವನ್ನು ಹೀಗೆ ಮಾಡಿ ತಿನ್ನುವುದರಿಂದ ಕರೊನಾ ಹರಡುವುದಿಲ್ಲ; ಲವಂಗದಿಂದ ಸೋಂಕು ತಡೆಯೋದಕ್ಕೆ ಸಾಧ್ಯನಾ?

    ಕರೊನಾ ಭೀತಿ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆ ಒಳಗಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts