More

    ಜಾತ್ರೆಗೆ ಸಿದ್ಧವಾಗುತ್ತಿದೆ ಬೆತ್ತದ ರಥ

    ಸುಬ್ರಹ್ಮಣ್ಯ: ಕುಕ್ಕೆ ಕ್ಷೇತ್ರದ ಜಾತ್ರೆಯ ಚಂಪಾಷಷ್ಠಿ ಬೆತ್ತದ ರಥ ನಿರ್ಮಾಣದಲ್ಲಿ ಮೂಲನಿವಾಸಿಗಳಾದ ಮಲೆಕುಡಿಯರು ಹಗಲಿರುಳೆನ್ನದೆ ತೊಡಗಿದ್ದಾರೆ.

    ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಸಂದರ್ಭ ಎಳೆಯುವ ರಥಗಳಿಗೆ ಗೂಟ ಮುಹೂರ್ತ, ವೀಳ್ಯ ನೆರವೇರಿತ್ತು. ದೇವಳದ ಪಾಟಾಳಿಯವರ ನಿರ್ದೇಶನದಂತೆ, ಗುರಿಕಾರರ ನೇತೃತ್ವದಲ್ಲಿ ದೇವಳದಿಂದ ಪಡಿಯಕ್ಕಿ ಪಡೆದು ಮಲೆಕುಡಿಯ ಜನಾಂಗದವರು ಕಾಡಿಗೆ ತೆರಳಿ 4 ದಿನ ಕಾಡಿನಲ್ಲಿ ರಥಕಟ್ಟುವ ಬೆತ್ತದ ಹಗ್ಗ ಸಂಗ್ರಹಿಸಿ ಐದನೇ ದಿನ ಕ್ಷೇತ್ರಕ್ಕೆ ಆಗಮಿಸಿ ರಥ ನಿರ್ಮಾಣ ಕಾರ್ಯ ಆರಂಭಿಸಿದ್ದರು. ಸುಮಾರು 10

    ಮಂದಿ ಹಿರಿಯರು ಹಾಗೂ 52ಕ್ಕೂ ಅಧಿಕ ಮಂದಿ ಯುವಕರು ರಥ ಕಟ್ಟುವಲ್ಲಿ ತೊಡಗಿಸಿಕೊಂಡಿದ್ದಾರೆ.
    ಬ್ರಹ್ಮರಥಕ್ಕೆ ಸುಮಾರು 200 ತುಂಡು ಬಿದಿರನ್ನು ಬಳಸಲಾಗುತ್ತದೆ. ಮೇಲಿಂದ ಕೆಳಗೆ 100ಕ್ಕೂ ಅಧಿಕ ಅರುಗಳನ್ನು ಅಳವಡಿಸಲಾಗುವುದು. ಸುಮಾರು 7000 ಪತಾಕೆಗಳಿಂದ ಶೃಂಗರಿಸಲಾಗುತ್ತದೆ. ಬಳಿಕ ಫಲವಸ್ತುಗಳು, ಹೂ, ಬಾಳೆ, ಮಾವಿನ ಎಲೆಗಳನ್ನು ರಥದ ಸುತ್ತ ಕಟ್ಟುತ್ತಾರೆ. 6 ಅಡಿ ಉದ್ದದ 12 ಬೆತ್ತವನ್ನು ಬ್ರಹ್ಮರಥ ಎಳೆಯಲು ಬಳಸುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts