More

    ಈ ಬಾರಿ ಚಿನ್ನದ ಚೆಂಡು ವಿತರಣೆ ಇಲ್ಲ!

    ಪ್ಯಾರಿಸ್: ಕರೊನಾ ವೈರಸ್ ಹಾವಳಿಯಿಂದ ಫುಟ್‌ಬಾಲ್ ಜಗತ್ತು ಅಡಚಣೆ ಎದುರಿಸಿರುವ ಹಿನ್ನೆಲೆಯಲ್ಲಿ ಈ ವರ್ಷದ ಪ್ರತಿಷ್ಠಿತ ಬ್ಯಾಲನ್ ಡಿಓರ್ (ಚಿನ್ನದ ಚೆಂಡು) ಪ್ರಶಸ್ತಿ ಸಮಾರಂಭವನ್ನು ರದ್ದುಗೊಳಿಸಲಾಗಿದೆ. ಬ್ಯಾಲನ್ ಡಿಓರ್ ಸಂಘಟಕರಾಗಿರುವ ಫ್ರಾನ್ಸ್ ಫುಟ್‌ಬಾಲ್ ಸೋಮವಾರ ಈ ಬಗ್ಗೆ ಅಧಿಕೃತವಾಗಿ ಪ್ರಕಟಿಸಿದೆ.

    ವಿಶ್ವದ ಅತ್ಯುತ್ತಮ ಫುಟ್‌ಬಾಲ್ ಆಟಗಾರನಿಗೆ 1956ರಿಂದ ನೀಡುತ್ತ ಬರುತ್ತಿರುವ ಬ್ಯಾಲನ್ ಡಿಓರ್ ಟ್ರೋಫಿಯ ವಿತರಣೆ ಇದೇ ಮೊದಲ ಬಾರಿಗೆ ನಡೆಯುತ್ತಿಲ್ಲ. ‘2020ರ ಸಾಲಿನಲ್ಲಿ ಬ್ಯಾಲನ್ ಡಿಓರ್ ಪ್ರಶಸ್ತಿ ಇರುವುದಿಲ್ಲ. ಹಾಲಿ ಕಠಿಣ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಫ್ರಾನ್ಸ್ ಫುಟ್‌ಬಾಲ್ ಮ್ಯಾಗಝಿನ್‌ನ ಸಂಪಾದಕ ಪಾಸ್ಕಲ್ ಫೆರ‌್ರೆ ತಿಳಿಸಿದ್ದಾರೆ.

    ಇದನ್ನೂ ಓದಿ: VIDEO| ಆಸ್ಟ್ರೇಲಿಯಾದಲ್ಲಿ ಫುಟ್‌ಬಾಲ್ ಪಂದ್ಯಕ್ಕೆ ಕಾಂಗರೂ ಅಡಚಣೆ!

    ಕರೊನಾ ಹಾವಳಿಯಿಂದಾಗಿ ಕಳೆದ ಮಾರ್ಚ್‌ನಲ್ಲಿ ವಿಶ್ವದ ಎಲ್ಲ ಪ್ರಮುಖ ಫುಟ್‌ಬಾಲ್ ಲೀಗ್‌ಗಳೂ ಸ್ಥಗಿತಗೊಂಡಿದ್ದವು. ಬಳಿಕ ಮೇನಲ್ಲಿ ಒಂದೊಂದಾಗಿ ಲೀಗ್‌ಗಳು ಆರಂಭಗೊಂಡಿದ್ದವು. ಫ್ರೆಂಚ್ ಲೀಗ್1 ಸಹಿತ ಕೆಲ ಫುಟ್‌ಬಾಲ್ ಟೂರ್ನಿಗಳು ಅಕಾಲಿಕವಾಗಿ ಅಂತ್ಯಗೊಂಡಿರುವ ಕಾರಣದಿಂದಾಗಿ ಈ ಬಾರಿ ವಿಶ್ವದ ಅತ್ಯುತ್ತಮ ಆಟಗಾರನನ್ನು ಗುರುತಿಸುವುದು ನ್ಯಾಯೋಚಿತವಾಗಿರಲು ಸಾಧ್ಯವಿಲ್ಲ. ಅಲ್ಲದೆ ಪ್ರೇಕ್ಷಕರಿಲ್ಲದೆ ಈಗ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಡುತ್ತಿರುವ ಆಟಗಾರರ ನಿರ್ವಹಣೆಯನ್ನು ನಿರ್ಧರಿಸುವುದು ಸರಿಯಲ್ಲ ಎಂದು ಫ್ರಾನ್ಸ್ ಫುಟ್‌ಬಾಲ್ ತಿಳಿಸಿದೆ.

    ಕಳೆದ ವರ್ಷದ ಬ್ಯಾಲನ್ ಡಿಓರ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಲಿಯೋನೆಲ್ ಮೆಸ್ಸಿ ದಾಖಲೆಯ 6ನೇ ಬಾರಿ ಗೆದ್ದ ಸಾಧನೆ ಮಾಡಿದ್ದರು. ಪೋರ್ಚುಗಲ್ ಸ್ಟಾರ್ ಕ್ರಿಶ್ಚಿಯಾನೊ ರೊನಾಲ್ಡೊ 5 ಬಾರಿ ಈ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದು, ಈ ಬಾರಿ ಮೆಸ್ಸಿ ಸಾಧನೆ ಸರಿಗಟ್ಟುವ ನಿರೀಕ್ಷೆಯಲ್ಲಿದ್ದರು. 2018ರಲ್ಲಿ ಆರಂಭಿಸಲಾಗಿದ್ದ ಮಹಿಳೆಯರ ಬ್ಯಾಲನ್ ಡಿಓರ್ ಪ್ರಶಸ್ತಿಯನ್ನೂ ಈ ಬಾರಿ ನೀಡಲಾಗುತ್ತಿಲ್ಲ. 2021ರಲ್ಲಿ ಮತ್ತೆ ಪ್ರಶಸ್ತಿ ಸಮಾರಂಭವನ್ನು ಆಯೋಜಿಸುವ ವಿಶ್ವಾಸವನ್ನು ಫ್ರಾನ್ಸ್ ಫುಟ್‌ಬಾಲ್ ವ್ಯಕ್ತಪಡಿಸಿದೆ.

    PHOTOS |ನತಾಶಾ ಪ್ರೆಗ್ನನ್ಸಿ ಫೋಟೋಶೂಟ್ ಮಾಡಿಸಿದ ಹಾರ್ದಿಕ್​ ಪಾಂಡ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts