More

    ಮಹಾಜನ ಕಾಲೇಜಿಗೆ ರಂಗತೋರಣ ನಾಟಕೋತ್ಸವ ಪ್ರಶಸ್ತಿ

    ಬಳ್ಳಾರಿ: ರಂಗತೋರಣ ಸಂಸ್ಥೆ ಆಯೋಜಿಸಿದ್ದ 13ನೇ ರಾಜ್ಯ ಮಟ್ಟದ ವಿದ್ಯಾರ್ಥಿ ನಾಟಕೋತ್ಸವದಲ್ಲಿ ಮೈಸೂರಿನ ಮಹಾಜನ ಕಾಲೇಜಿನ ಅಂಧಯುಗ ನಾಟಕ ಪ್ರಥಮ ಬಹುಮಾನ ಪಡೆಯಿತು. ಉತ್ತಮ ನಿರ್ದೇಶನ ಹಾಗೂ ಉತ್ತಮ ಪ್ರಸಾದನ ಪ್ರಶಸ್ತಿಗಳು ಕೂಡ ಮಹಾಜನ ಕಾಲೇಜಿಗೆ ಲಭಿಸಿದವು.

    ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಭಾನುವಾರ ವಿದ್ಯಾರ್ಥಿ ನಾಟಕೋತ್ಸವದ ಸಮಾರೋಪ ಸಮಾರಂಭ ಆಯೋಜಿಸಲಾಗಿತ್ತು. ಬೆಂಗಳೂರಿನ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ಪ್ರಮೀಳಾರ್ಜುನೀಯಂ ದ್ವಿತೀಯ ಹಾಗೂ ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಭಗವದಜ್ಜುಕೀಯ ನಾಟಕ ಮೂರನೇ ಸ್ಥಾನ ಪಡೆದುಕೊಂಡವು. ಪ್ರಥಮ ಬಹುಮಾನ 25 ಸಾವಿರ ರೂ., ದ್ವಿತೀಯ ಬಹುಮಾನ 20 ಸಾವಿರ ರೂ. ಹಾಗೂ ತೃತೀಯ ಬಹುಮಾನ 15 ಸಾವಿರ ರೂ. ಹಾಗೂ ಫಲಕವನ್ನು ಒಳಗೊಂಡಿತ್ತು.

    ಮೈಸೂರಿನ ಮಹಾಜನ ಕಾಲೇಜಿನ ಪಿ.ಶ್ರೇಯಸ್ ಅಂಧಯುಗ ನಾಟಕಕ್ಕಾಗಿ ಉತ್ತಮ ನಿರ್ದೇಶನ ಹಾಗೂ ಉತ್ತಮ ಪ್ರಸಾದನ ಪ್ರಶಸ್ತಿಗೆ ಭಾಜನರಾದರು. ಮೈಸೂರಿನ ಗೋಪಾಲಸ್ವಾಮಿ ಕಾಲೇಜಿನ ತೀರ್ಥೇಶ, ಸಂಜೀವಿನಿ ನಾಟಕಕಕ್ಕಾಗಿ ಉತ್ತಮ ನಟ, ಬೆಂಗಳೂರಿನ ಪಿಇಎಸ್ ಕಾಲೇಜಿನ ಪಲ್ಲವಿ, ರಾವಿ ನದಿಯ ದಂಡೆಯಲ್ಲಿ ನಾಟಕದ ಪಾತ್ರಕ್ಕಾಗಿ ಉತ್ತಮ ನಟಿ ಪುರಸ್ಕಾರ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts