More

    ಚೆಂಡು, ಕಾಕಡ ಬೆಳೆದ ರೈತರಿಗೆ ವರುಣಾಘಾತ

    ಕಂಪ್ಲಿ: ದೀಪಾವಳಿ ಹಬ್ಬಕ್ಕೆ ಚೆಂಡು, ಕಾಕಡ ಹೂ ಮಾರಿ ಲಾಭಗಳಿಸುವ ನಿರೀಕ್ಷೆಯಲ್ಲಿದ್ದ ರೈತರಿಗೆ ಎರಡು ದಿನ ಸುರಿದ ಮಳೆ ಆಘಾತ ಉಂಟು ಮಾಡಿದೆ. ವರುಣ ಹೊಡೆತಕ್ಕೆ ಚೆಂಡು ಹೂ ಮತ್ತು ಕಾಕಡ ಹೂ ಗಿಡಗಳು ನೆಲಕ್ಕೆ ಒರಗಿದ್ದು, ನಷ್ಟ ಅನುಭವಿಸುವಂತಾಗಿದೆ.

    ಬೆಳಗೋಡ್‌ಹಾಳ್ ಸಮೀಪದಲ್ಲಿ ನಾಲ್ಕೂವರೆ ಎಕರೆಯಲ್ಲಿ ಆರು ಜನ ರೈತರು ಫ್ರೆಂಚ್, ಆಫ್ರಿಕನ್, ಮೆಕ್ಸಿಕನ್ ಮೆರ‌್ರಿಗೋಲ್ಡ್ ತಳಿಯ ಚೆಂಡು ಹೂ ಬೆಳೆದಿದ್ದರು. 18 ರೂ. ಬೆಲೆಯ ಚೆಂಡು ಹೂ ಸಸಿ, ಅಂತರ ಬೆಳೆಯಾಗಿ 23 ರೂ.ಯ ಕಾಕಡ ಸಸಿಗಳನ್ನು ನಾಲ್ಕು ತಿಂಗಳ ಹಿಂದೆ ನಾಟಿ ಮಾಡಿದ್ದರು. ಎಕರೆಗೆ 1.50 ಲಕ್ಷ ರೂ. ಖರ್ಚು ಮಾಡಿ ಬೆಳೆ ನಿರ್ವಹಿಸಿದ್ದರಿಂದ ಹುಲುಸಾಗಿ ಬೆಳೆದ ಚೆಂಡು, ಕಾಕಡ ಹೂ ತೋಟದ ಸೊಗಸು ಹೆಚ್ಚಿಸಿ, ನೋಡುಗರ ಸೆಳೆಯುತ್ತಿತ್ತು.

    ಇಳುವರಿ ಆರಂಭಗೊಳ್ಳುವ ಹೊತ್ತಿಗೆ ಮಳೆ ಬಂದಿದ್ದರಿಂದ ಚೆಂಡು, ಕಾಕಡ ಗಿಡಗಳು ನೆಲಕ್ಕೆ ಬಾಗಿವೆ. ಹೂಗಳಿಗೆ ನೆಲದ ಮಣ್ಣು ಮೆತ್ತಿ ಅಂದಗೆಡಿಸಿವೆ. ಅಲ್ಲದೆ ಆರ್ದ್ರತೆಯ ವಾತಾವರಣದಿಂದ ಚೆಂಡು ಹೂಗಳ ಪಕಳೆಗಳು ಉದುರುತ್ತಿವೆ.

    ಮಳೆ ಬಾರದಿದ್ದರೆ ಎಕರೆಗೆ 1500 ಕೆಜಿಯಷ್ಟು ಚೆಂಡು ಹೂ ಇಳುವರಿ ಬರುತ್ತಿತ್ತು. ಇದೀಗ ಎಕರೆಗೆ 200ಕೆಜಿ ಇಳುವರಿ ದೊರಕುವುದು ಕಷ್ಟವಾಗಿದೆ. ಚೆಂಡು, ಕಾಕಡ ಬೆಳೆ ಬೆಳೆದು ಆರ್ಥಿಕವಾಗಿ ನಷ್ಟ ಹೊಂದಿದ್ದೇವೆ. ಕಂದಾಯ ಮತ್ತು ತೋಟಗಾರಿಕೆ ಇಲಾಖೆ ಜಂಟಿ ಸಮೀಕ್ಷೆ ಕೈಗೊಂಡು ಸೂಕ್ತ ಪರಿಹಾರ ನೀಡಬೇಕೆಂದು ರೈತರಾದ ಪರಸಪ್ಪ, ಕನಕಪ್ಪ, ಕಾಸಿಂ, ಕುರುಬರ ಸೋಮಪ್ಪ, ಬಸಮ್ಮ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts