More

    ಸಮಾಜದ ಚೌಕಟ್ಟು ಮೀರಿ ಬೆಳೆದ ಕನಕದಾಸ

    ಹರಪನಹಳ್ಳಿ: ಕನಕದಾಸರು ಸಮಾಜದಲ್ಲಿನ ಮೇಲು-ಕೀಳು, ಜಾತಿ-ಮತ ಪಂಥ ಮೀರಿ ಬೆಳೆದವರೆಂದು ಹಲವಾಗಲು ಗ್ರಾಮ ಎಚ್.ಟಿ.ವನಜಾಕ್ಷಿ ಹೇಳಿದರು.


    ತಾಲೂಕಿನ ಅರೆಮಜ್ಜಿಗೇರಿ ಗ್ರಾಮದಲ್ಲಿ ನಡೆದ ಕನಕದಾಸರ 536ನೇ ಜಯಂತಿಯಲ್ಲಿ ಶನಿವಾರ ಮಾತನಾಡಿದರು.
    ದಾಸರು ಯಾವುದೇ ಮತಕ್ಕೆ ಕಟ್ಟಿ ಬೀಳದೆ ಸರ್ವ ಮತಗಳ ಒಳಿತನ್ನು ಪಡೆದು ಸ್ವಂತ ವ್ಯಕ್ತಿತ್ವವನ್ನು ಜನಹಿತಕ್ಕಾಗಿ ಬೆಳೆಸಿಕೊಂಡು ಬಾಳಿದರು. ಕನಕದಾಸರು ಸೇರಿ ಮಹನೀಯರ ಜಯಂತಿಗಳನ್ನು ಆಚರಿಸುವುದರ ಜತೆಗೆ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳಬೇಕು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಮೂಲಕ ಭವಿಷ್ಯ ರೂಪಿಸಬೇಕೆಂದರು.


    ಗ್ರಾಮದ ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ, ಮೆರವಣಿಗೆ ನಡೆಸಿದರು.
    ಮುಖಂಡ ಟಿ.ಬಸವರಾಜ, ಯುವ ಮುಖಂಡ ಇಟ್ಟಿಗುಡಿ ರಮೇಶ, ಕೆ.ಕಲ್ಲಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಬಿ.ದುರುಗಮ್ಮ, ಸದಸ್ಯರಾದ ಎ.ನಿಂಗಪ್ಪ, ಎಚ್.ಚೌಡಮ್ಮ, ನಾಗೇಂದ್ರಪ್ಪ, ರಾಜಪ್ಪ, ದ್ಯಾಮಪ್ಪ, ಬಸವರಾಜ, ಯಲ್ಲಪ್ಪ, ಮಲ್ಲಿಕಾರ್ಜುನ, ಬಸವರಾಜ, ಮುಖಂಡರಾದ ಬಿ.ಗುಡ್ಡಪ್ಪ, ಎ.ಜೋತೇಶ, ನಾಗೇಂದ್ರಪ್ಪ, ದೇವೇಂದ್ರಪ್ಪ, ದಿಳ್ಯೇಪ್ಪ, ನಿಂಗಪ್ಪ, ಹನುಮಂತಪ್ಪ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts