More

    ಕರಡಿಗುಡ್ಡ ಸಹೋದರರು ರೈತರಿಗೆ ಸ್ಫೂರ್ತಿ

    ಬೈಲಹೊಂಗಲ: ಸಮೀಪದ ಏಣಗಿ ಗ್ರಾಮದ ಪ್ರಗತಿಪರ ರೈತ ಸಹೋದರರಾದ ಬಸವರಾಜ ಕರಡಿಗುಡ್ಡ ಹಾಗೂ ಮಹಾಂತೇಶ ಕರಡಿಗುಡ್ಡ 1 ಎಕರೆ ಭೂಮಿಯಲ್ಲಿ 22 ಕ್ವಿಂಟಾಲ್ ಹತ್ತಿ ಬೆಳೆದು ಸೈ ಎನಿಸಿಕೊಂಡ ಹಿನ್ನೆಲೆಯಲ್ಲಿ ಮತ್ತಿಕೊಪ್ಪ ಗ್ರಾಮದ ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿಗಳು ಶನಿವಾರ ಸನ್ಮಾನಿಸಿದರು.

    ಉದ್ಯಮಿ ಜಯರಾಜ ಮೆಟಗುಡ್ಡ ಮಾತನಾಡಿ, ಕರಡಿಗುಡ್ಡ ಸಹೋದರರ ಸಾಧನೆ ಎಲ್ಲ ರೈತರಿಗೂ ಸ್ಫೂರ್ತಿ. ಕರ್ನಾಟಕದ ಕೃಷಿ ಭೂಮಿಯು ಇತರ ರಾಜ್ಯಗಳಿಗಿಂತಲೂ ಉತ್ತಮವಾಗಿದೆ. ಎತ್ತರದ ಒಬ್ಬೆ ನಿರ್ಮಿಸಿ ಬೀಜ ನೆಟ್ಟರೆ ಪೋಷಕಾಂಶ ಹೀರಿಕೊಂಡು ಉತ್ತಮ ಬೆಳೆಯಾಗಿ ಪರಿವರ್ತನೆಯಾಗುತ್ತದೆ ಎಂದರು.

    ಕೆವಿಕೆ ಅಧಿಕಾರಿ ವಿಶ್ವನಾಥ ಮಾತನಾಡಿ, ಕಾಲಕಾಲಕ್ಕೆ ಮಣ್ಣು ಪರೀಕ್ಷೆ ಮಾಡಿಸಬೇಕು. ಹತ್ತಿ ಬೀಜ ನೆಡುವಾಗ ಎತ್ತರದ ಒಬ್ಬೆ ಮಾಡಿ 2 ರಿಂದ 3 ಅಡಿ ಅಂತರದ ಸಾಲು ನಿರ್ಮಿಸಿ ಹತ್ತಿ ಬಿತ್ತುವುದರಿಂದ ಉತ್ತಮ ಇಳುವರಿ ಪಡೆಯಬಹುದು ಎಂದರು. ಕೆವಿಕೆ ಹಿರಿಯ ತಜ್ಞ ಹಿರೇಮಠ ಅವರು, ರೈತರೊಂದಿಗೆ ಆಪ್ತ ಸಮಾಲೋಚನೆ ನಡೆಸಿ ಸಲಹೆ-ಸೂಚನೆ ನೀಡಿದರು.

    ಹತ್ತಿ, ಅರಳೆ ಉದ್ಯಮಿ ವಿಜಯ ಮೆಟಗುಡ್ಡ, ಜಯರಾಜ ಮೆಟಗುಡ್ಡ ಅವರ ಬಸವ ಟೆಕ್ಸ್‌ಟೈಲ್ಸ್ ಹಾಗೂ ವರ್ಧಮಾನ ಟೆಕ್ಸ್‌ಟೈಲ್ಸ್ ಮಾರ್ಗದಶನದಲ್ಲಿ ಕರಡಿಗುಡ್ಡ ಸಹೋದರರು ಹತ್ತಿ ಬೆಳೆದಿದ್ದಾರೆ. ವರ್ಧಮಾನ ಟೆಕ್ಸ್‌ಟೈಲ್ನ ಹರಜಿತ್, ರೈತರಾದ ಬಸವರಾಜ ಅಂಗಡಿ, ಶಿವಪ್ಪ ಸಣ್ಣಾರ, ಸಂಗಪ್ಪ ಗೋವನಕೊಪ್ಪ, ಯಲ್ಲಪ್ಪ ಅಂಗಡಿ, ಹನುಮಂತ ಪೂಜೇರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts