More

    ಚೆಂಡು ವಿರೂಪ ಬೌಲರ್‌ಗಳಿಗೂ ಗೊತ್ತಿತ್ತು ಎಂದ ಬ್ಯಾಂಕ್ರಾಫ್ಟ್​; ಪ್ರಕರಣ ಮರುತನಿಖೆ?

    ಮೆಲ್ಬೋರ್ನ್: ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಅಲ್ಲೋಲಕಲ್ಲೋಲವನ್ನೇ ಎಬ್ಬಿಸಿದ್ದ 2018ರ ಚೆಂಡು ವಿರೂಪ ಪ್ರಕರಣ (ಸ್ಯಾಂಡ್‌ಪೇಪರ್ ಗೇಟ್) ಮರುತನಿಖೆಗೆ ಒಳಪಡುವ ಸಾಧ್ಯತೆ ಕಾಣಿಸಿದೆ. ಪ್ರಕರಣದಲ್ಲಿ ಸಿಕ್ಕಿಬಿದ್ದು ಶಿಕ್ಷೆಯನ್ನೂ ಅನುಭವಿಸಿರುವ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಕ್ಯಾಮರಾನ್ ಬ್ಯಾಂಕ್ರಾಫ್ಟ್​ ಇತ್ತೀಚೆಗೆ ನೀಡಿರುವ ಹೇಳಿಕೆಯೊಂದು ಇದಕ್ಕೆ ಕಾರಣವಾಗಿದೆ.

    2018ರಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಕೇಪ್‌ಟೌನ್ ಟೆಸ್ಟ್ ವೇಳೆ ಬ್ಯಾಂಕ್ರಾಫ್ಟ್​ ಚೆಂಡನ್ನು ಸ್ಯಾಂಡ್‌ಪೇಪರ್‌ನಿಂದ ತಿಕ್ಕಿ ವಿರೂಪಗೊಳಿಸಲು ಯತ್ನಿಸಿದ್ದರು. ಇದು ನೇರಪ್ರಸಾರದ ವಿಡಿಯೋದಲ್ಲಿ ಸೆರೆಯಾದ ಬೆನ್ನಲ್ಲೇ ತಂಡದ ಆಗಿನ ನಾಯಕ ಸ್ಟೀವನ್ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್, ತಮ್ಮ ಸೂಚನೆಯಂತೆ ಬ್ಯಾಂಕ್ರಾಫ್ಟ್​ ಹಾಗೆ ಮಾಡಿದ್ದರು ಎಂದು ತಪ್ಪೊಪ್ಪಿಕೊಂಡಿದ್ದರು. ಇದರಿಂದಾಗಿ ಈ ಮೂವರಿಗೂ ನಿಷೇಧ ಶಿಕ್ಷೆಯಾಗಿತ್ತು. ಅಲ್ಲಿಗೆ ಪ್ರಕರಣ ಮುಗಿದುಹೋಗಿತ್ತು. ಆದರೆ ಆಗಿನ ಚೆಂಡು ವಿರೂಪದ ಬಗ್ಗೆ ತಂಡದ ಬೌಲರ್‌ಗಳಿಗೂ ಗೊತ್ತಿತ್ತು. ನನ್ನ ಆಗಿನ ತಪ್ಪಿಗೆ ನಾನೇ ಜವಾಬ್ದಾರಿ ಹೊರುವೆ. ನಾನಾಗ ಹಾಗೆ ಮಾಡಿದ್ದರಿಂದ ಬೌಲರ್‌ಗಳಿಗೆ ಹೆಚ್ಚಿನ ಲಾಭವಾಗಿತ್ತು. ಆ ಬಗ್ಗೆ ಅವರ ಅರಿವು ಸ್ವಯಂ ಸ್ಪಷ್ಟವಾಗುವಂಥದ್ದು ಎಂದು ಬ್ಯಾಂಕ್ರಾಫ್ಟ್​ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು.

    ಬ್ಯಾಂಕ್ರಾಫ್ಟ್​ ಅವರ ಹೇಳಿಕೆ ಬೆನ್ನಲ್ಲೇ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಪ್ರಕರಣವನ್ನು ಮರುತನಿಖೆಗೆ ಒಳಪಡಿಸಲು ಸಿದ್ಧ ಎಂದಿದೆ. ಪ್ರಕರಣದ ಬಗ್ಗೆ ಯಾರಿಗಾದರೂ ಹೊಸ ಮಾಹಿತಿಗಳಿದ್ದರೆ ನಮಗೆ ಸಲ್ಲಿಸಬಹುದು. ಆಗ ಪ್ರಕರಣವನ್ನು ಮತ್ತೆ ತನಿಖೆಗೆ ಒಳಪಡಿಸಲಿದ್ದೇವೆ. ಯಾರೂ ಹೊಸ ಮಾಹಿತಿ ನೀಡದಿದ್ದರೆ ಮರುತನಿಖೆ ಪ್ರಯೋಜನವಾಗದು ಎಂದೂ ಸಿಎ ಹೇಳಿದೆ.

    ಕೇಪ್‌ಟೌನ್ ಟೆಸ್ಟ್‌ನಲ್ಲಿ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಸಲ್‌ವುಡ್, ಮಿಚೆಲ್ ಮಾರ್ಷ್ ಮತ್ತು ಸ್ಪಿನ್ನರ್ ನಾಥನ್ ಲ್ಯಾನ್ ಆಸೀಸ್ ಬೌಲಿಂಗ್ ಬಳಗದಲ್ಲಿದ್ದರು. ಮರುತನಿಖೆ ಶುರುವಾದರೆ ಇವರೆಲ್ಲರೂ ಸಂಕಷ್ಟಕ್ಕೆ ಸಿಲುಕಲಿದ್ದಾರೆ.

    ಮರಾಠಿ ನಟಿ ಜತೆಗೆ ಚೆನ್ನೈ ಸೂಪರ್‌ಕಿಂಗ್ಸ್ ಕ್ರಿಕೆಟಿಗನ ಡೇಟಿಂಗ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts