More

    ಮೈಸೂರಿನಲ್ಲಿ ಬಾಲ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್

    ಪ್ರಶಸ್ತಿಗಾಗಿ 10 ತಂಡಗಳ ಸೆಣಸಾಟ
    ನಾಕೌಟ್ ಮಾದರಿಯಲ್ಲಿ ಪಂದ್ಯಾವಳಿ
    ದೇಶದಲ್ಲೇ ಮೊದಲ ಬಾರಿಗೆ ಲೀಗ್ ಆಯೋಜನೆ

    ಮೈಸೂರು: ಐಪಿಎಲ್ ಮಾದರಿಯಲ್ಲಿ ಬಾಲ್ ಬ್ಯಾಡ್ಮಿಂಟನ್ ಲೀಗ್ ಆಯೋಜಿಸಲು ವೇದಿಕೆ ಸಿದ್ಧವಾಗಿದ್ದು, ನಗರದಲ್ಲಿ ರಾಜ್ಯ ಮಟ್ಟದ ಕರ್ನಾಟಕ ಬಾಲ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್( ಕೆಬಿಬಿಪಿಎಲ್-2022) ಸೆ.10 ಮತ್ತು 11 ರಂದು ನಡೆಯಲಿದೆ.


    ಮಹಾರಾಜ ಬಾಲ್ ಬ್ಯಾಡ್ಮಿಂಟನ್ ಕ್ಲಬ್, ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಕರ್ನಾಟಕ, ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸಹಯೋಗದಲ್ಲಿ ಎರಡು ದಿನಗಳವರೆಗೆ ನಗರದ ಹಾರ್ಡ್ವಿಕ್ ಶಾಲಾ ಮೈದಾನದಲ್ಲಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್‌ನ ಅಧ್ಯಕ್ಷ ಬಿ.ಟಿ.ಲಕ್ಷೀಶ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


    ದೇಶದಲ್ಲಿ ಇದೇ ಮೊದಲ ಬಾರಿಗೆ ಬಾಲ್ ಬ್ಯಾಡ್ಮಿಂಟನ್ ಲೀಗ್ ನಡೆಸಲಾಗುತ್ತಿದೆ. ಇದರಲ್ಲಿ ರಾಜ್ಯದ ವಿವಿಧ ಭಾಗಗಳ ಪ್ರತಿಭಾವಂತ ಆಟಗಾರರು ಮತ್ತು ಉದಯೋನ್ಮುಖ ಪ್ರತಿಭೆಗಳನ್ನು ಒಳಗೊಂಡ 10 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಲೀಗ್ ಮತ್ತು ನಾಕೌಟ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದೆ ಎಂದು ವಿವರಿಸಿದರು.


    ಪ್ರತಿ ತಂಡ 8 ಆಟಗಾರರನ್ನು ಒಳಗೊಂಡಿದೆ. ಬೆಂಗಳೂರು, ಕೋಲಾರ, ಬಳ್ಳಾರಿ, ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಹೀಗೆ ರಾಜ್ಯದ ವಿವಿಧ ಜಿಲ್ಲೆಗಳ ಆಟಗಾರರು 1 ಸಾವಿರ ರೂ. ಮೂಲ ದರದಿಂದ 5 ಸಾವಿರ ರೂ.ವರೆಗೆ ಮಾರಾಟವಾಗಿದ್ದು, ಇದರಲ್ಲಿ ಬಿ.ಎನ್.ಕಿರಣ್‌ಕುಮಾರ್, ಎಂ.ಎಸ್.ಸತ್ಯ, ಮಹದೇವಸ್ವಾಮಿ, ಆರ್.ಸಂಜಯ್, ಮಹದೇವು, ತರುಣ್‌ಕುಮಾರ್, ಆರ್.ವಿಜಯಕುಮಾರ್, ಬಿ.ಕೆ.ಚೇತನ್, ಎಚ್.ಕೆ.ತೇಜಸ್ ಅತಿ ಹೆಚ್ಚಿನ ಬೆಲೆಗೆ ಬಿಡ್ ಆಗಿದ್ದಾರೆ ಎಂದರು.


    ಸೆ.10ರಂದು ಸಂಜೆ 5ಕ್ಕೆ ಸಂಸದ ವಿ.ಶ್ರೀನಿವಾಸಪ್ರಸಾದ್ ಟೂರ್ನಿಗೆ ಚಾಲನೆ ನೀಡಲಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಜಿಲ್ಲಾಧ್ಯಕ್ಷ ಜಿ.ಗೋವಿಂದರಾಜು ಭಾಗವಹಿಸಲಿದ್ದಾರೆ ಎಂದರು.
    ಅಸೋಸಿಯೇಷನ್‌ನ ಕಾರ್ಯದರ್ಶಿ ಸತ್ಯನಾರಾಯಣ, ಖಜಾಂಚಿ ನಟರಾಜು, ಸಂಘಟನಾ ಕಾರ್ಯದರ್ಶಿ ಮಹದೇವ್, ಕಾರ್ಯಕಾರಿಣಿ ಸಮಿತಿ ಸದಸ್ಯ ಮುರಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts