More

    ಚಿತ್ರರಂಗದ ವಿರುದ್ಧ ಗರಂ ಆಗಿ, ಜಗನ್​ಗೆ ಸಹಮತ ಸೂಚಿಸಿದರೇ ಬಾಲಯ್ಯ?

    ಕಳೆದ ಕೆಲ ತಿಂಗಳುಗಳಿಂದ ತೆಲುಗು ಚಿತ್ರರಂಗ ಮತ್ತು ಆಂಧ್ರ ಪ್ರದೇಶದ ಸಿಎಂ ಜಗನ್ ನಡುವೆ ನಡೆಯುತ್ತಿರುವ ತಿಕ್ಕಾಟದ ಬಗ್ಗೆ ಬಹುತೇಕ ಇಡೀ ದೇಶಕ್ಕೆ ತಿಳಿದಿದೆ. ಜಗನ್ ಸರ್ಕಾರವು ಆಂಧ್ರದ ಚಿತ್ರಮಂದಿರಗಳ ಟಿಕೆಟ್ ದರ ಕಡಿಮೆ ಮಾಡಿದ ಆದೇಶ ಟಾಲಿವುಡ್ ಮೇಲೆ ತೀವ್ರ ಪರಿಣಾಮ ಬೀರಿತ್ತು. ಈ ಸಮಸ್ಯೆ ಬಗೆಹರಿಸಲು ಟಾಲಿವುಡ್​ನ ಹಲವರು ಬಹಳಷ್ಟು ಯತ್ನಿಸುತ್ತಿದ್ದಾರೆ. ಈ ಪ್ರಯತ್ನಗಳ ಅಂಗವಾಗಿ, ಮೆಗಾ ಸ್ಟಾರ್ ನಟ ಚಿರಂಜೀವಿ ಅವರು ಜಗನ್ ಮೋಹನ್ ರೆಡ್ಡಿಯವರನ್ನು ಈಗಾಗಲೇ ಮೂರು ಬಾರಿ ಭೇಟಿ ಮಾಡಿದ್ದಾರೆ. ಇನ್ನು, ಮೂರನೇ ಬಾರಿಯಲ್ಲಿ ನಟ ಚಿರಂಜೀವಿ ನೇತೃತ್ವದಲ್ಲಿ ಜಗನ್ ಸರ್ಕಾರ ಹಾಗೂ ತೆಲುಗು ಚಿತ್ರರಂಗದ ಗಣ್ಯರ ನಡುವೆಯೇ ಮಾತುಕತೆಗಳು ನಡೆದವು. ಇದರ ನಂತರ ಟಾಲಿವುಡ್​ಗೆ ಒಂದು ಸಿಹಿ ಸುದ್ದಿಯನ್ನು ನೀಡುವುದಾಗಿ ಚಿರಂಜೀವಿ ತಿಳಿಸಿದ್ದರು.
    ಹೌದು, ಡಾರ್ಲಿಂಗ್ ಪ್ರಭಾಸ್, ಪ್ರಿನ್ಸ್ ಮಹೇಶ್ ಬಾಬು, ಬಾಹುಬಲಿ ನಿರ್ದೇಶಕ ರಾಜಮೌಳಿ, ಹೀಗೆ ಹಲವರನ್ನು ತಮ್ಮ ಜತೆಗೆ ಕರೆದುಕೊಂಡು ಹೋಗಿ ಸಿಎಂ ಜಗನ್ ಜತೆಗೆ ಮಾತುಕತೆ ನಡೆಸಿದರು ಚಿರಂಜೀವಿ. ಈ ಮೂರನೇ ಸುತ್ತಿನ ಮಾತುಕತೆ ನಡೆಸುವಾಗ ತೆಲುಗಿನ ಗಣ್ಯ ನಟರಿಗೆ ಚಿರಂಜೀವಿ ಆಹ್ವಾನ ನೀಡಿದ್ದರು. ನಟ ಬಾಲಕೃಷ್ಣ ಅವರಿಗೂ ಆಹ್ವಾನ ನೀಡಲಾಯಿತು. ಆದರೆ ಬಾಲಕೃಷ್ಣ ಹೋಗಿರಲಿಲ್ಲ. ನಟ ಬಾಲಕೃಷ್ಣ ಯಾಕೆ ಹೋಗಿಲ್ಲ ಎಂಬುದರ ಬಗ್ಗೆ ಹಲವರಿಗೆ ಕುತೂಹಲವಿತ್ತು. ಇನ್ನು, ಈಗ ಆ ಕುತೂಹಲಕ್ಕೆ ಬಾಲಯ್ಯ ಅವರೇ ಬಹಿರಂಗವಾಗಿ ಮಾತಾಡಿ ಅವರ ದಿಟ್ಟ ಉತ್ತರವ್ನನು ಎಲ್ಲರಿಗೂ ತಿಳಿಸಿದ್ದಾರೆ. ”ಜಗನ್ ಜೊತೆ ನಡೆಯುವ ಸಭೆಗೆ ನನಗೆ ಆಹ್ವಾನ ನೀಡಲಾಗಿತ್ತು. ಆದರೆ ನಾನು ಹೋಗಲು ನಿರಾಕರಿಸಿದೆಎಂದು ಹೇಳಿದ್ದಾರೆ. ಅಂದಹಾಗೆ, ಆಂಧ್ರದ ಬಸವತಾರಕಂ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಒಂದು ಕಾರ್ಯಕ್ರಮದಲ್ಲಿ ಮಾದ್ಯಮಗಳ ಜತೆ ಮಾತನಾಡಿದ ಬಾಲಯ್ಯ ಅವರು, ”ಇನ್ನು, ಮುಂದೆಯೂ ನಾನು ಜಗನ್ ಅನ್ನು ಯಾವುದೇ ಕಾರಣಕ್ಕೂ ಭೇಟಿ ಆಗುವುದಿಲ್ಲ.
    ನಾನು ನನ್ನ ಸಂಭಾವನೆ ಏರಿಕೆ ಮಾಡಿಲ್ಲ. ಸಿನಿಮಾದ ಬಜೆಟ್‌ ಅನ್ನು ಏರಿಸಿಲ್ಲ. ನಿರ್ಮಾಪಕರಿಗೆ ನಾನು ಎಂದೂ ಸಮಸ್ಯೆ ಕೊಟ್ಟಿಲ್ಲ. ಚಿತ್ರಗಳ ಬಜೆಟ್ ನಿಯಂತ್ರಣದಲ್ಲಿದ್ದರೆ ಟಿಕೆಟ್ ದರ ಎಷ್ಟಿದ್ದರೂ ಏನೂ ಆಗುವುದಿಲ್ಲ. ಬಜೆಟ್ ಹೆಚ್ಚಾದರೆ ಮಾತ್ರ ಟಿಕೆಟ್ ದರದ ವಿಷಯ ಚರ್ಚೆಗೆ ಬರುತ್ತದೆಎಂದು ಉತ್ತರ ಕೊಟ್ಟಿದ್ದಾರೆ. ಸದ್ಯ, ಬಾಲಯ್ಯ ಅವರ ಈ ಉತ್ತರ ಎರಡು ತೆಲುಗು ರಾಜ್ಯಗಳಲ್ಲಿ ಸಂಚಲ ಸೃಷ್ಟಿಸಿವೆ. ಜತೆಗೆ, ಬಾಲಯ್ಯ ಅವರು ಕೊಟ್ಟ ಉತ್ತರಕ್ಕೆ, ಇತ್ತೀಚೆಗೆ ಬಿಡುಗಡೆಯಾದ ತಮ್ಮದೇ ಸಿನಿಮಾ ಅಖಂಡಒಂದೊಳ್ಳೆ ಉದಾಹರಣೆ ಎಂದು ಹೇಳಿದ್ದಾರೆ. ”ನಾನು ನಟಿಸಿದ್ದ ಅಖಂಡಸಿನಿಮಾವನ್ನು ಕಡಿಮೆ ಬಜೆಟ್‌ನಲ್ಲಿ ಮಾಡಲಾಗಿತ್ತು. ಟಿಕೆಟ್ ದರ ಕಡಿಮೆ ಇದ್ದಾಗಲೇ ನನ್ನ ಈ ಸಿನಿಮಾ ರಿಲೀಸ್​ ಆಗಿ ಸೂಪರ್ ಡೂಪರ್ ಹಿಟ್ ಆಗಿದೆ. ನಾವು ಸಿನಿಮಾ ಬಜೆಟ್‌ ಮೇಲೆ ನಿಯಂತ್ರಣ ಹೇರಬೇಕು. ಚಿತ್ರಗಳ ಬಜೆಟ್‌ ಆಕಾಶ ಮುಟ್ಟುತ್ತಿವೆ. ಅವನ್ನು ನಿಯಂತ್ರಣ ಮಾಡದೆ ಟಿಕೆಟ್ ದರ ಹೆಚ್ಚಿಸಲು ಹೋಗುವುದು ಸರಿಯಲ್ಲ”, ಎಂದು ಬಾಲಯ್ಯ ಹೇಳಿದ್ದಾರೆ.
    ಈ ಮೂಲಕ ಸಿಎಂ ಜಗನ್ ಅವರ ಟಿಕೆಟ್ ಬೆಲೆ ಕಡಿತ ನಿರ್ಧಾರಕ್ಕೆ ಬಾಲಯ್ಯ ಸಹಮತ ಸೂಚಿಸಿದಂತಾಯಿತು. ಮತ್ತೊಂದೆಡೆ, ಜಗನ್ ಅವರನ್ನು ಭೇಟಿ ಮಾಡದೆ ಇರಲು ಒಂದು ಕಾರಣ ಹುಡುಕಿದ್ದಾರೆ ಮತ್ತು ಟಾಲಿವುಡ್​ನಲ್ಲಿರುವ ಅವರ ವಿರೋಧಿಗಳ ವಿರುದ್ಧ ಬಾಲಯ್ಯ ಹೇಳಿಕೆ ನೀಡಿದಂತಾಯಿತು. ಬಾಲಯ್ಯ ಮತ್ತು ಜಗನ್ ಭೇಟಿ ಆಗದೇ ಇರುವುದಕ್ಕೆ ಅವರ ರಾಜಕೀಯ ವೈಷಮ್ಯವೂ ಕೂಡಾ ಒಂದು ಕಾರಣ. ನಂದಮೂರಿ ಬಾಲಕೃಷ್ಣ ಅವರ ತಂದೆ ಸೀನಿಯರ್ ಎನ್​ಟಿಆರ್ ಸ್ಥಾಪಿಸಿದ ಟಿಡಿಪಿ ಪಕ್ಷ ಪ್ರಸ್ತುತ ಆಂಧ್ರದಲ್ಲಿ ವಿಪಕ್ಷವಾಗಿದ್ದು, ಬಾಲಯ್ಯ ಅದೇ ಟಿಡಿಪಿ ಪಕ್ಷದ ಶಾಸಕರೂ ಸಹ ಎಂಬುದು ಎಲ್ಲರಿಗೂ ತಿಳಿದೆ ಇದೆ. ಜಗನ್ ಹಾಗೂ ಟಿಡಿಪಿ ಪಕ್ಷದ ನಡುವೆ ಹಲವು ವರ್ಷಗಳಿಂದ ತೀವ್ರ ರಾಜಕೀಯ ವೈಷಮ್ಯ ಇದ್ದು, ಅಕ್ಟೋಬರ್ ತಿಂಗಳಲ್ಲಿ ಜಗನ್ ಪಕ್ಷದ ಕಾರ್ಯಕರ್ತರು ಹಿಂದೂಪುರದಲ್ಲಿನ ಬಾಲಯ್ಯ ಕುಟುಂಬದ ಒಂದು ನಿವಾಸದ ಮೇಲೆ ಕಲ್ಲು ತೂರಾಟ ಮಾಡಿದ್ದರು. ಬಾಲಯ್ಯ ಕೂಡಾ ಈ ಹಿಂದೆ ಹಲವು ಬಾರಿ ಜಗನ್, ಅವರ ಕುಟುಂಬದವರನ್ನು ತುಂಬಾ ಕಟುವಾಗಿ ಮಾತಾಡಿದ್ದಾರೆ.
    ಹಾಗಾಗಿ, ಬಾಲಯ್ಯ ಮತ್ತು ಜಗನ್ ಅವರ ಮಿಲನ ಎಂದಿಗೂ ಸಾಧ್ಯವಾಗಲ್ಲ ಎಂಬುದು ಗೊತ್ತಿದೆ. ಮತ್ತೊಂದೆಡೆ, ಚಿರಂಜೀವಿ ಅವರ ಪ್ರಯತ್ನಗಳಿಗೆ ಅಡ್ಡಿಯಾಗುವ ತೆಲುಗು ಚಿತ್ರರಂಗದವರು ಹಲವರು ಇದ್ದಾರೆ. ನಟ ಮಂಚು ವಿಷ್ಣು ಅವರು ಕೂಡಾ ಜಗನ್ ಜತೆಗಿನ ಚಿರಂಜೀವಿ ಮತ್ತು ಇತರರ ಭೇಟಿಯ ವಿರುದ್ಧವೇ ಮಾತಾಡಿದ್ದರು. ”ಚಿತ್ರರಂಗ ಕೇವಲ ಕೆಲವರ ಆಸ್ತಿಯಲ್ಲ. ಒಂದು ನಿರ್ಧಾರಕ್ಕೆ ಎಲ್ಲರ ಸಹಮತ ಬೇಕಾಗಿದೆ”, ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟರು. ಇನ್ನು, ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಕೂಡಾ ಚಿರಂಜೀವಿ ಮತ್ತು ಇತರ ನಟರರ ಹಾಗೂ ಜಗನ್ ಭೇಟಿಯನ್ನು ಟೀಕಿಸಿದರು. ”ತೆಲುಗು ಚಿತ್ರರಂಗದ ಕೆಲವರು ಜಗನ್ ಬಳಿ ನಡೆಸುತ್ತಿರುವ ಮಾಸ್ ಭಿಕ್ಷಾಟನೆ, ಅತೀ ದೊಡ್ಡ ತಪ್ಪು”, ಎಂಬ ಹೇಳಿಕೆ ನೀಡಿದರು

    ‘ಶರ್ಟ್​​ ಅನ್ನು ಉಲ್ಟಾ ಧರಿಸಿದ್ದೀರಾ’?: ಹಿಗ್ಗಾಮುಗ್ಗಾ ಟ್ರೋಲ್ ಆದ ಊರ್ಫಿ ಜಾವೇದ್!

    ನಟಿ ರಮ್ಯಾ ಕೊಟ್ಟ ಗಿಫ್ಟ್ ಬಗ್ಗೆ ಹಂಚಿಕೊಂಡ ಅಮೂಲ್ಯ! ಏನದರ ಸ್ಪೆಷಾಲಿಟಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts