More

    ಇಂದು ದೇಶಾದ್ಯಂತ ಅನಿಮಲ್​​​ ಸಿನಿಮಾ ರಿಲೀಸ್​​​; ಮಹೇಶ್​​ ಬಾಬುಗೆ ಅನಿಮಲ್ ಸಿನಿಮಾದ ಆಫರ್​​ ಬಂದಿತ್ತು..!

    ‘ಅನಿಮಲ್​’ ಸಿನಿಮಾಗೆ ಇಂದು ತೆರೆಗೆ ಅಪ್ಪಳಿಸಿದೆ. ರಣಬೀರ್​ ಕಪೂರ್​ ಅವರು ಎರಡು ಡಿಫರೆಂಟ್​ ಶೇಡ್​ ಇರುವ ಪಾತ್ರವನ್ನು ನಿಭಾಯಿಸಿದ್ದಾರೆ. ಮೊದಲ ದಿನ ಮೊದಲ ಶೋ ನೋಡಿದ ಪ್ರೇಕ್ಷಕರು ಟ್ವಿಟರ್​​ನಲ್ಲಿ ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ.


    ಸಿನಿಮಾದಲ್ಲಿ ರಣಬೀರ್​ ಕಪೂರ್​ (Ranbir Kapoor) ಮತ್ತು ರಶ್ಮಿಕಾ ಮಂದಣ್ಣ ಅವರು ಜೋಡಿಯಾಗಿ ನಟಿಸಿದ್ದಾರೆ. ಬಾಬಿ ಡಿಯೋಲ್​, ಅನಿಲ್​ ಕಪೂರ್​ ಮುಂತಾದವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಅದ್ದೂರಿಯಾಗಿ ಮೂಡಿಬಂದಿರುವ ಈ ಸಿನಿಮಾವನ್ನು ಫಸ್ಟ್​ ಡೇ ಫಸ್ಟ್​ ಶೋ ನೋಡಿ ಫ್ಯಾನ್ಸ್​​ ಫುಲ್​​​ ಖುಷ್​​​ ಆಗಿದ್ದಾರೆ.


    ಸಮಾರಂಭದಲ್ಲಿ ಮಹೇಶ್ ಬಾಬು ಅವರು ರಣಬೀರ್ ಕಪೂರ್ ಅವರನ್ನು ಭಾರತದ ಅತ್ಯುತ್ತಮ ನಟ ಎಂದು ಕರೆದರು. ತಾನು ರಣಬೀರ್ ಕಪೂರ್ ಅವರ ದೊಡ್ಡ ಅಭಿಮಾನಿ ಎಂದು ಮಹೇಶ್‌ ಬಾಬು ಹೇಳಿದ್ದಾರೆ. ರಣಬೀರ್ ಕಪೂರ್ ಅವರ ‘ಅನಿಮಲ್’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕೂಡ ಕಾಣಿಸಿಕೊಳ್ಳಲಿದ್ದಾರೆ. ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರ ಡಿಸೆಂಬರ್ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.


    ಮಹೇಶ್ ಬಾಬುಗೆ ‘ಅನಿಮಲ್’ ಸಿನಿಮಾ ಆಫರ್‌ ಬಂದಿತ್ತು ಎನ್ನಲಾಗಿದೆ. ಈ ವದಂತಿಗಳ ಬಗ್ಗೆ ಸಿನಿಮಾ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಪ್ರತಿಕ್ರಿಯಿಸಿದ್ದಾರೆ. ಮಹೇಶ್ ಬಾಬುಗೆ ಸಿನಿಮಾ ಮಾಡಲು ಆಫರ್ ಮಾಡಿದ್ದೆ.

    ಆದರೆ ಅದು ಅನಿಮಲ್ ಅಲ್ಲ. ಆ ಸಿನಿಮಾ ಹೆಸರು ಡೆವಿಲ್. ಮಹೇಶ್ ಚಿತ್ರವನ್ನು ತಿರಸ್ಕರಿಸಿಲ್ಲ. ಆದರೆ ಕಾರಣಾಂತರಗಳಿಂದ ಅದನ್ನು ಪೂರ್ಣಗೊಳಿಸಲಾಗಲಿಲ್ಲ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts