More

    VIDEO| ಭಜರಂಗಿ 2 ಸಿನಿಮಾದ 360 ಡಿಗ್ರಿ ಸೆಟ್​ಗೆ ಬೆಂಕಿ: ಚಿತ್ರೀಕರಣ ಸ್ಥಗಿತ

    ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ ಕುಮಾರ್​ ಅಭಿನಯದ ಭಜರಂಗಿ-2 ಸಿನಿಮಾದ ಸೆಟ್​ನಲ್ಲಿ ಬೆಂಕಿ ಅವಘಡ ಸಂಭವಿಸಿದೆ.

    ಮೋಹನ್​ ಬಿ ಕೆರೆ ಸ್ಟುಡಿಯೋದಲ್ಲಿ ನಿರ್ಮಿಸಲಾಗಿದ್ದ 360 ಡಿಗ್ರಿ ಸೆಟ್​ಗೆ ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​ ನಿಂದ ಬೆಂಕಿ ತಗುಲಿದೆ ಎಂದು ಚಿತ್ರ ನಿರ್ದೇಶಕ ಹರ್ಷ ತಿಳಿಸಿದ್ದಾರೆ.

    ಸೆಟ್​ಗೆ ಬೆಂಕಿ ತಗುಲಿದ ಹಿನ್ನೆಲೆಯಲ್ಲಿ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ. ನಟ ಶಿವರಾಜ್​ ಕುಮಾರ್​ ಸೆಟ್​ನಲ್ಲಿ ಇದ್ದರು. ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ.

    ಸೆಟ್​ನ ಕೆಲ ಭಾಗ ಬೆಂಕಿಗೆ ಆಹುತಿಯಾಗಿದೆ. ಬೆಂಕಿಗೆ ಆಹುತಿಯಾದ ಸೆಟ್​ ಪುನಃ ನಿರ್ಮಾಣಗೊಂಡ ನಂತರ ಚಿತ್ರೀಕರಣ ಆರಂಭಗೊಳ್ಳಲಿದೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts