More

    ನಾಟಕವಾಗ್ತಿದೆ ಸಂಜಯ್​ ಲೀಲಾ ಬನ್ಸಾಲಿಯ ಬಾಜಿರಾವ್ ಮಸ್ತಾನಿ

    ಸಂಜಯ್​ ಲೀಲಾ ಬನ್ಸಾಲಿಯ ಹಿಟ್​ ಚಿತ್ರಗಳ ಪೈಕಿ ಬಾಜಿರಾವ್ ಮಸ್ತಾನಿ ಸಹ ಒಂದು. 2015ರಲ್ಲಿ ಬಿಡುಗಡೆಯಾದ ಈ ಚಿತ್ರ ಬ್ಲಾಕ್​ಬಸ್ಟರ್​ ಎಂದನಿಸಿಕೊಂಡಿತ್ತು. ಈಗ ಇದೇ ಚಿತ್ರ ನಾಟಕ ರೂಪದಲ್ಲಿ ಜನರನ್ನು ಮನರಂಜಿಸುವುದಕ್ಕೆ ಇನ್ನೊಮ್ಮೆ ಸಿದ್ಧವಾಗುತ್ತಿದೆ.

    ಇದನ್ನೂ ಓದಿ: ಮಿಸ್ ವರ್ಲ್ಡ್ ಆದ್ರೆ ನಿಮ್ಮನೇಲಿ, ಇಲ್ಲಲ್ಲ …

    ಹೌದು, ಸಂಜಯ್ ಲೀಲಾ ಬನ್ಸಾಲಿ ಅವರ ಈ ಪೀರಿಯಡ್​ ಡ್ರಾಮಾ, ಇದೀಗ ನಾಟಕವಾಗುತ್ತಿದೆ. ಖ್ಯಾತ ಕಥಕ್​ ಕಲಾವಿದರಾದ ಪಂಡಿತ್​ ಬಿರ್ಜು ಮಹರಾಜ್​ ಅವರು ಈ ನಾಟಕದ ಕ್ರಿಯೇಟಿವ್​ ಡೈರೆಕ್ಟರ್​ ಆಗಿ ಕೆಲಸ ಮಾಡಿದರೆ, ಮೈತ್ರೇಯಿ ಪಹಾರಿ ಈ ನಾಟಕವನ್ನು ನಿರ್ದೇಶನ ಮಾಡುತ್ತಿದ್ದಾರೆ. ಬಾಜಿರಾಯನ ಪಾತ್ರದಲ್ಲಿ ರಜನೀಶ್​ ದುಗ್ಗಲ್​ ಕಾಣಿಸಿಕೊಂಡರೆ, ಖ್ಯಾತ ಕಥಕ್​ ಕಲಾವಿದರಾದ ಶೈಲಜಾ ನಲ್ವಾಡೆ ಮತ್ತು ಅನುಸೂಯ ಮಜುಂದಾರ್​ ಅವರು ಮಸ್ತಾನಿ ಮತ್ತು ಕಾಶೀಬಾಯಿ ಪಾತ್ರಗಳಲ್ಲಿ ಕಾಣಿಡಿಕೊಳ್ಳಲಿದ್ದಾರೆ.

    ಬಾಜಿರಾವ್​ ಮಸ್ತಾನಿ ಚಿತ್ರದ ಒಂದು ಹೈಲೈಟ್​ ಎಂದರೆ, ಅದರ ಅದ್ಧೂರಿತನ. ಈ ಚಿತ್ರವನ್ನು ಬಹಳ ಗ್ರಾಂಡ್​ ಆಗಿ ರೂಪಿಸಿದ್ದರು ಬನ್ಸಾಲಿ. ಇಂಥದ್ದೊಂದು ಚಿತ್ರವು, ರಂಗಭೂಮಿಗೆ ಬಂದರೆ ಅಷ್ಟೊಂದು ಅದ್ಧೂರಿಯಾಗಿರುವುದಕ್ಕೆ ಸಾಧ್ಯವಾ ಎಂಬ ಪ್ರಶ್ನೆ ಸಹಜವೇ. ಸಿನಿಮಾಗಿಂತಲೂ ಚೆನ್ನಾಗಿ ಮಾಡಬೇಕೆಂದು ತಂಡ ಪ್ರಯತ್ನ ನಡೆಸಿದ್ದು, ಈಗಾಗಲೇ ಆ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ.

    ಈ ನಾಟಕದ ಒಂದು ವಿಶೇಷತೆ ಎಂದರೆ, ಇದರಲ್ಲಿ 10 ಹಾಡುಗಳಿರುತ್ತವಂತೆ. ಇನ್ನು 50 ಡ್ಯಾನ್ಸರ್​ಗಳು ಈ ಹಾಡುಗಳಿಗೆ ನೃತ್ಯ ಮಾಡಲಿದ್ದು, ದೇಶಾದ್ಯಂತೆ 12 ಜನ್ರಪಿಯ ಕಲಾವಿದರು ಈ ನಾಟಕದಲ್ಲಿ ನಟಿಸಲಿದ್ದಾರೆ. ಎಲ್ಲಕ್ಕಿಂತ ಮುಖ್ಯವೆಂದರೆ, ಬಾಜಿರಾವ್ ಮಸ್ತಾನಿ ಚಿತ್ರದ ಏಳು ಹಾಡುಗಳನ್ನು ಈ ನಾಟಕಕ್ಕಾಗಿ ಬಳಸಿಕೊಳ್ಳಲಾಗಿದೆ. ಅದರಲ್ಲೂ ಮಲ್ಹಾರಿ ಎಂಬ ಜನಪ್ರಿಯ ಹಾಡು ಸಹ ಈ ನಾಟಕದಲ್ಲಿರಲಿದೆ.

    ಇದನ್ನೂ ಓದಿ: ನಮ್ಮಿಬ್ಬರ ಸಂಬಂಧ ಚೆನ್ನಾಗಿಯೇ ಇದೆ: ನಾಗಶೇಖರ್

    ಈಗಾಗಲೇ ಈ ನಾಟಕಕ್ಕೆ ತಾಲೀಮು ಶುರುವಾಗಿದ್ದು, ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ನಾಟಕದ ಪ್ರದರ್ಶನ ಶುರುವಾಗಬೇಕಿತ್ತು. ದೆಹಲಿಯಲ್ಲಿ ಮೊದಲ ಪ್ರದರ್ಶನ ಮಾಡಿ, ಆ ನಂತರ ಮುಂಬೈ, ದುಬೈ, ಲಂಡನ್​ ಮುಂತಾದ ಕಡೆಗಳಲ್ಲಿ ನಾಟಕ ಮಾಡಬೇಕು ಎಂದು ತಂಡ ಬಯಸಿತ್ತು. ಆದರೆ, ಲಾಕ್​ಡೌನ್​ನಿಂದಾಗಿ ಐಡಿಯಾ ತಲೆ ಕೆಳಗಾಗಿದೆ.

    ಈಗಾಗಲೇ ತಂಡ ಎಲ್ಲಾ ಸಿದ್ಧತೆ ನಡೆಸಿದ್ದು, ನಾಟಕ ಪ್ರದರ್ಶನಗಳೆಲ್ಲಾ ಶುರುವಾದ ಮೇಲೆ, ಈ ನಾಟಕ ಸಹ ಜನರ ಮುಂದೆ ಬರಲಿದೆ. ಸಿಲ್ವರ್​ಸ್ಕ್ರೀನ್​ ಮೇಲೆ ಅದ್ಧೂರಿಯಾಗಿ ಮೂಡಿ ಬಂದಿದ್ದ ಬಾಜಿರಾವ್ ಮಸ್ತಾನಿ, ರಂಗಭೂಮಿಯ ಮೇಲೆ ಹೇಗೆ ಮೂಡಿಬರಲಿದೆ ಎಂಬ ಕುತೂಹಲ ಎಲ್ಲರಿಗೂ ಇದೆ.

    ರಶ್ಮಿಕಾ, ಇದು ನೀವಂದುಕೊಂಡಷ್ಟು ಸುಲಭವಲ್ಲ; ಟಾಲಿವುಡ್​ನಲ್ಲಿ ಎದುರಾಯ್ತು ಹೀಗೊಂದು ಚಾಲೆಂಜ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts