More

    ಟೋಕಿಯೊ ಒಲಿಂಪಿಕ್ಸ್‌ಗೂ ಮುನ್ನವೇ ಭಾರತದ ಕುಸ್ತಿಪಟುಗೆ ಶಾಕ್…

    ನವದೆಹಲಿ: ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿರುವ ಭಾರತದ ಕುಸ್ತಿಪಟು ಭಜರಂಗ್ ಪೂನಿಯಾ, ಅಲಿ ಅಲಿಯೆವ್ ಟೂರ್ನಿಯ ಸೆಮಿಫೈನಲ್ ಕಾದಾಟದ ವೇಳೆ ಎದುರಾಳಿ ಸ್ಪರ್ಧಿ ಮಾಡಿದ ಎಡವಟ್ಟಿನಿಂದಾಗಿ ಮೊಣಕಾಲಿಗೆ ಗಂಭೀರ ಪೆಟ್ಟುಬಿದ್ದಿದೆ. ರಷ್ಯಾದ ಸ್ಪರ್ಧಿ 23 ವಯೋಮಿತಿ ಯುರೋಪಿಯನ್ ಬೆಳ್ಳಿ ಪದಕ ವಿಜೇತ ಅಬುಲ್‌ಮಜಾದಿ ಕುಡೀವ್ ಎದುರು ಈ ಅವಘಡ ಸಂಭವಿಸಿದೆ. ಸ್ಥಳದಲ್ಲಿದ್ದ ಫಿಸಿಯೋ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಭಜರಂಗ್ 0-4 ರಿಂದ ಹಿನ್ನಡೆ ಅನುಭವಿಸಿದ್ದರು. ಟೋಕಿಯೊ ಒಲಿಂಪಿಕ್ಸ್‌ಗೆ ಕೇವಲ 28 ದಿನಗಳಷ್ಟೇ ಬಾಕಿ ಇರುವಾಗಲೇ ಭಜರಂಗ್ ಗಾಯದ ಸಮಸ್ಯೆಗೆ ಸಿಲುಕಿದ್ದಾರೆ. 2ನೇ ಶ್ರೇಯಾಂಕ ಹೊಂದಿರುವ ಭಜರಂಗ್ 65ಕೆಜಿ ವಿಭಾಗದಲ್ಲಿ ಸ್ಪರ್ಧಿಸಬೇಕಿದೆ.

    ಇದನ್ನೂ ಓದಿ: ಅಕ್ಟೋಬರ್ 17 ರಿಂದ ಯುಎಇಯಲ್ಲಿ ಟಿ20 ವಿಶ್ವಕಪ್ ಟೂರ್ನಿ?,

    ನಾನೀಗ ಸಂಪೂರ್ಣ ಚೇತರಿಸಿಕೊಂಡಿದ್ದೇನೆ. ಕ್ರೀಡೆಯಲ್ಲಿ ಇದೆಲ್ಲಾ ಸಾಮಾನ್ಯ ಎಂದ ಭಜರಂಗ್, ಗಾಯದ ಪ್ರಮಾಣದ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು. ಮುಂದಿನ ಎರಡು ದಿನಗಳಲ್ಲಿ ಸುಧಾರಣೆ ಕಾಣುವೆ ಎಂದು ಭಜರಂಗ್ ಭರವಸೆ ವ್ಯಕ್ತಪಡಿಸಿದ್ದಾರೆ. ದೆಹಲಿ ಮೂಲದ ಫಿಸಿಯೋಥೆರಪಿಸ್ಟ್, ಆನಂದ್ ದುಬೆ ತಂಡದೊಂದಿಗೆ ತೆರಳಿದ್ದು, ಭಜರಂಗ್ ಗಾಯದ ಪ್ರಮಾಣವನ್ನು ಪರಿಶೀಲಿಸುತ್ತಿದ್ದಾರೆ. ಕಳೆದ ಒಂದು ತಿಂಗಳಿಂದ ರಷ್ಯಾದಲ್ಲಿ ಅಭ್ಯಾಸ ಮಾಡುತ್ತಿರುವ ಭಜರಂಗ್ ಮೇಲೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ನಿರೀಕ್ಷಿಸಲಾಗಿದೆ.

    ಚೊಚ್ಚಲ ಏಕದಿನ ವಿಶ್ವಕಪ್ ಟ್ರೋಫಿಗೆ 38ರ ಸಂಭ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts