More

    ಕುಸ್ತಿ ಪಂದ್ಯಾವಳಿಗೂ ಉತ್ತೇಜನ ನೀಡಿ

    ಶಿಕಾರಿಪುರ: ಕ್ರಿಕೆಟ್, ಕಬಡ್ಡಿ ಸೇರಿದಂತೆ ಇತರ ಆಟಗಳಿಗೆ ಪ್ರೋತ್ಸಾಹ ನೀಡುವಂತೆ ಕುಸ್ತಿ ಪಂದ್ಯಾವಳಿಗಳಿಗೂ ಹೆಚ್ಚಿನ ಉತ್ತೇಜನ ನೀಡಬೇಕು. ಕುಸ್ತಿ ನಮ್ಮ ಮಣ್ಣಿನ ಸಂಸ್ಕೃತಿಯ ಪ್ರತಿರೂಪ ಎಂದು ರಾಷ್ಟç ಮಟ್ಟದ ಕುಸ್ತಿ ಕಮಿಟಿ ಅಧ್ಯಕ್ಷ ಸಂದೀಪ್ ಹೇಳಿದರು.
    ಫೆ.೧೭ರಂದು ಶಿಕಾರಿಪುರ ದಿ.ನರಸಪ್ಪ ಸ್ಮಾರಕ ಬಯಲು ರಂಗಮAದಿರದಲ್ಲಿ ಮಧ್ಯಾಹ್ನ 3 ಗಂಟೆಗೆ ದಿ. ಪುನೀತ್ ರಾಜ್‌ಕುಮಾರ್ ಅವರ ಸವಿನೆನಪಿಗಾಗಿ ಎರಡನೇ ಬಾರಿ ರಾಷ್ಟç ಮಟ್ಟದ ಜೋಡಿ ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಮೊದಲ ಬಹುಮಾನ 1.10 ಲಕ್ಷ ರೂ., ಎರಡನೇ ಬಹುಮಾನ 80 ಸಾವಿರ, ಮೂರನೇ ಬಹುಮಾನ 60 ಸಾವಿರ ರೂ., ನಾಲ್ಕನೇ ಬಹುಮಾನ 40 ಸಾವಿರ ರೂ. ಐದನೇ ಬಹುಮಾ30ಸಾವಿರ ರೂ., ಆರನೇ ಬಹುಮಾನ 20 ಸಾವಿರ ರೂ. ಮತ್ತು ೭ನೇ ಬಹುಮಾನ 10 ಸಾವಿರ ರೂ. ಇದ್ದು ವಿಶೇಷ ಪ್ರೋತ್ಸಾಹ ಬಹುಮಾನ ಮತ್ತು ಟ್ರೋಫಿ ನೀಡಲಾಗುತ್ತದೆ ಎಂದರು.
    ಕುಸ್ತಿ ಪಂದ್ಯಾವಳಿಯು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಡಾ. ರಾಜ್‌ಕುಮಾರ್ ಕುಟುಂಬದ ವಿಶೇಷ ಹಾರೈಕೆಯಡಿ ನಡೆಯುತ್ತಿದೆ. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಪಂದ್ಯಾವಳಿಯನ್ನು ಉದ್ಘಾಟಿಸುವರು. ಶಾಸಕ ಬಿ.ವೈ.ವಿಜಯೇಂದ್ರ ಕುಸ್ತಿಗೆ ಚಾಲನೆ ನೀಡುವರು. ಕುಸ್ತಿ ಸಮಿತಿ ಗೌರವಾಧ್ಯಕ್ಷ ಎಂ.ಶ್ರೀಕಾAತ್ ನೇತೃತ್ವ ವಹಿಸುವರು. ಕುಸ್ತಿ ಸಮಿತಿ ಅಧ್ಯಕ್ಷ ಎಂ.ಸAದೀಪ್ ಅಧ್ಯಕ್ಷತೆ ವಹಿಸುವರು. ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಎನ್.ವಿ.ಈರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಶಿವಕುಮಾರ್, ಹ್ಯಾರಿ ಬೆಂಗಳೂರು, ಗೋಣಿ ರಾಮು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
    ಪಂದ್ಯಾವಳಿಯಲ್ಲಿ ಬಾಂಬೆ, ದೆಹಲಿ, ಪೂನ, ಹರ್ಯಾಣ, ಪಂಜಾಬ್ ಸೇರಿ ಹಲವಾರು ರಾಜ್ಯಗಳಿಂದ ಕುಸ್ತಿಪಟುಗಳು ಆಗಮಿಸಲಿz್ದÁರೆ. ಇಂಡಿಯಾ ದ ಟಾಪ್ ಪ್ಲೇಯರ್ ಕಿರಣ್ ಭಗತ್ ಆಗಮಿಸಲಿz್ದÁರೆ ಎಂದು ಹೇಳಿದರು.
    ಭಂಡಾರಿ ಮಾಲತೇಶ್, ಎನ್.ವಿ.ಈರೇಶ್, ನವೀನ್ ಗಜೇಂದ್ರ ಸುಹಾಸ್ ಭಟ್ಟ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts