More

    ಕಾಯಕದಲ್ಲಿ ಕೈಲಾಸ ಕಾಣಬೇಕು: ಭೈರನಹಟ್ಟಿ ಶಾಂತಲಿಂಗ ಶ್ರೀಗಳು

    ವಿಜಯವಾಣಿ ಸುದ್ದಿಜಾಲ ಗದಗ
    ತರಕಾರಿ, ಹಣ್ಣು, ಧವಸದಾನ್ಯಗಳನ್ನು ತಯಾರಿಸುವ ವಿಜ್ಞಾನಿಗಳು ಯಾರೂ ಇಲ್ಲ. ಅದು ರೈತನಿಂದ ಮಾತ್ರ ಸಾಧ್ಯ. ಕಾಯಕದಲ್ಲಿ ಕೈಲಾಸ ಕಾಣಬೇಕು. ಕಾಯಕ ಮಾಡದೇ ಪ್ರಸಾದ ಸ್ವೀಕರಿಸಬಾರದು ಎಂಬ ಶರಣರ ವಾಣಿಯನ್ನು ಪಾಲಿಸಬೇಕು ಎಂದು ಬೈರನಹಟ್ಟಿ ಶಾಂತಲಿಂಗ ಶ್ರೀಗಳು ಹೇಳಿದರು.
    ತೊಂಟದಾರ್ಯ ಮಠದಲ್ಲಿ ಇತ್ತೀಚೆಗೆ ಜರುಗಿದ ಶಿವಾನುಭವ ಕಾರ್ಯಕ್ರಮದಲ್ಲಿ ಸಮ್ಮುಖ ವಹಿಸಿ ಮಾತನಾಡಿದ ಅವರು, ಆಹಾರ ಮನುಷ್ಯನಿಗೆ ಬಹಳ ಅವಶ್ಯ. ಪ್ರತಿದಿವಸ ಹಸಿವಿನಿಂದ ಬಳಲುವ ಜನರು ಇದ್ದಾರೆ. ಮತ್ತೊಂದೆಡೆ ಊಟವನ್ನು ಕರಗಿಸಲು ಪ್ರಯತ್ನಿಸುವ ಶ್ರೀಮಂತರೂ ಇದ್ದಾರೆ. ಪ್ರಸ್ತುತ ದಿನಗಳಲ್ಲಿ ತಟ್ಟೆಯಲ್ಲಿ ಆಹಾರ ಬೀಡುವುದು ಒಂದು ರೂಢಿ ಆಗಿದೆ. ಆಹಾರವನ್ನು ಕೆಡಿಸಬಾರದು. 12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ಊಟಕ್ಕೆ ಪ್ರಸಾದ ಎಂದಿದ್ದಾರೆ. ಪ್ರಸಾದದ ಬಗ್ಗೆ ಶರಣರಿಗೆ ಬಹಳಷ್ಟು ಪ್ರಜ್ಞೆ ಇತ್ತು ಎಂದು ಶ್ರೀಗಳು ಹೇಳಿದರು.
    ಆಹಾರದಲ್ಲಿ ಭಕ್ತಿ ಇದೆ. ಆಹಾರದ ಬಗ್ಗೆ ಶ್ರದ್ಧೆ, ಗೌರವವನ್ನು ತಂದುಕೊಟ್ಟವರು ಶರಣರು. ಆಹಾರದಲ್ಲಿ ಔಷಧಿಯ ಗುಣಗಳಿದ್ದು, ಮನುಷ್ಯನಿಗೆ ಆಹಾರ ಔಷಧಿಯಾಗಬೇಕು. ಔಷಧಿಯೇ ಆಹಾರವಾಗಬಾರದು ಎಂದು ಹೇಳಿದರು.
    ಹಿರಿಯ ಸಹಾಯಕ ತೋಟಗಾರಿಕೆ ಇಲಾಖೆ ನಿರ್ದೇಶಕ ಸುರೇಶ ಕುಂಬಾರ ಮಾತನಾಡಿ, ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರದ ಉತ್ಪಾದನೆ ಆಗಬೇಕು. ಇಲ್ಲವಾದರೆ ಆಹಾರಾಮ ಉಂಟಾಗುತ್ತದೆ. ಕರ್ನಾಟಕ ರಾಜ್ಯ ಕೃಷಿಯಲ್ಲಿ ಸಮೃದ್ಧಭರಿತವಾಗಿದೆ. ವೈವಿದ್ಯಮಯವಾದ ಬೆಳೆಗಳನ್ನು ಬೆಳೆಯುತ್ತಿದ್ದೇವೆ ಎಂದರು.
    ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ, ಶೇಖಣ್ಣ ಕಳಸಾಪೂರ, ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ, ವಿರುಪಾಪ್ಪ ಅರಳಿ, ಅಶೋಕ ಹಾದಿ, ಸುರೇಶ್​ ನಿಲೂಗಲ್​, ವಿವೇಕಾನಂದ ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts