More

    ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಹಾಲಕೆರೆ ಮಠ

    ನರೇಗಲ್ಲ: ಹಾಲಕೆರೆಯ ಅನ್ನದಾನೇಶ್ವರ ಮಠವು ಸಮಾಜದ ಉದ್ಧಾರಕ್ಕಾಗಿ ನೀಡಿದ ಕೊಡುಗೆ ಅಪಾರವಾಗಿದೆ. ಭಕ್ತರ ಅಜ್ಞಾನ, ಅಂಧಕಾರ ದೂರ ಮಾಡುವುದರಲ್ಲಿ ಶ್ರೀಮಠದ ಪಾತ್ರ ಅನನ್ಯವಾಗಿದೆ ಎಂದು ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಹೇಳಿದರು.

    ಸಮೀಪದ ಹಾಲಕೆರೆಯಲ್ಲಿ ಹಿರಿಯ ಅನ್ನದಾನ ಸ್ವಾಮೀಜಿಗಳ 111ನೇ ಪುಣ್ಯಸ್ಮರಣೋ ತ್ಸವ ಮತ್ತು ಕಾಯಕಯೋಗಿ ಲಿಂ.ಡಾ.ಅಭಿನವ ಅನ್ನದಾನ ಸ್ವಾಮೀಜಿಗಳ ದ್ವಿತೀಯ ಪುಣ್ಯಸ್ಮರಣೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಅಕ್ಷರ ಜಾತ್ರಾ ಮಹೋತ್ಸವದಲ್ಲಿ ಭಾನುವಾರ ರಥೋತ್ಸವದ ನಂತರ ಜರುಗಿದ ಶಿವಾನುಭವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶ್ರೀ ಮಠದ ಪೂಜ್ಯರು ಶೈಕ್ಷಣಿಕ ರಂಗದಲ್ಲಿ ಕ್ರಾಂತಿಯನ್ನೇ ಮಾಡುತ್ತ ಬಂದಿದ್ದಾರೆ. ಮಕ್ಕಳನ್ನು ಪುಸ್ತಕದ ಹುಳುಗಳನ್ನಾಗಿ ಮಾಡದೆ, ಅವರಲ್ಲಿ ವೈಜ್ಞಾನಿಕ ಮನೋಭಾವ ಬಿತ್ತುವ ಕೆಲಸವಾಗಬೇಕಿದೆ. ಮಕ್ಕಳು ತಮ್ಮ ತಂದೆ- ತಾಯಿಗಳ ಸೇವೆಗೆ ಮುಂದಾಗಬೇಕೆ ಹೊರತು ಅವರನ್ನು ವೃದ್ಧಾಶ್ರಮಗಳಿಗೆ ಸೇರಿಸುವ ಕಾರ್ಯಕ್ಕೆ ಮುಂದಾಗಬಾರದು ಎಂದರು.

    ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಆಶೀರ್ವಚನ ನೀಡಿ, ಹಾಲಕೆರೆಯಲ್ಲಿ ಜಾತ್ರೆಯ ಉತ್ಸವ ನಡೆದಿಲ್ಲ ಬದಲಾಗಿ ಉತ್ಸಾಹದ ಜಾತ್ರೆ ನಡೆದಿದೆ. ಗುರು- ಶಿಷ್ಯರ ಮನಸು ಒಂದಾಗಿದ್ದರೆ ಸಮಾಜದಲ್ಲಿ ಎಂತಹ ಕಾರ್ಯವನ್ನಾದರೂ ನಿರ್ವಿಘ್ನವಾಗಿ ನಡೆಸಬಹುದು ಎಂಬುದಕ್ಕೆ ಹಾಲಕೆರೆ ಗ್ರಾಮವೇ ಸಾಕ್ಷಿ. ಈ ಅಕ್ಷರ ಜಾತ್ರೆ ವಿಶೇಷ ಮತ್ತು ಇತಿಹಾಸವನ್ನು ನಿರ್ವಿುಸಿದೆ. ದೇಹವೆಂಬುದೇ ಒಂದು ತೇರಿದ್ದಂತೆ. ತೇರಿಗೆ ಹೇಗೆ ನೀವು ಗೌರವ ಸಲ್ಲಿಸುತ್ತೀರೋ ಹಾಗೆಯೇ ದೇಹಕ್ಕೂ ಗೌರವ ಸಿಗುವಂತೆ ಬದುಕಬೇಕು. ಹಾಗೆಯೇ ಬದುಕಬೇಕಾದರೆ ಇಂತಹ ಶಿವಾನುಭವ, ಸತ್ಸಂಗಗಳಲ್ಲಿ ಸದಾಕಾಲ ಕಾಲ ಕಳೆಯುವಂತಾಗಬೇಕು ಎಂದರು.

    ಸಾನ್ನಿಧ್ಯ ವಹಿಸಿದ್ದ ಮುಪ್ಪಿನ ಬಸವಲಿಂಗ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ದರೂರ ಸಂಗನಬಸವೇಶ್ವರ ಮಠದ ಕೊಟ್ಟೂರು ಸ್ವಾಮೀಜಿ, ನಾಗಲಾ ಪುರದ ನಿರಂಜನ ದೇಶಿಕರು, ಸೋಮಸಮುದ್ರದ ಸಿದ್ಧಲಿಂಗ ದೇಶಿಕರು, ಬೂದಗುಂಪ ಸಿದ್ಧೇಶ್ವರ ದೇಶಿಕರು, ಅಡ್ನೂರ ವಿಶ್ವೇಶ್ವರ ದೇವರು, ಕುರಗೋಡದ ಪರ್ವತದೇವರು, ಗದಗ ಚಂದ್ರಶೇಖರ ದೇವರು, ಜಿಡ್ಗಾ ಶಾಖಾಮಠದ ಬಸವರಾಜ ಬಸವರಡ್ಡೇರ ದೇವರು, ವಿಜಯಪುರದ ನಿವೃತ್ತ ಇಂಜಿನಿಯರ್ ಆರ್.ಬಿ. ಪಾಟೀಲ, ಸಿದ್ದಣ್ಣ ಬಂಡಿ, ಡಾ. ಬಿ.ಎನ್. ಪಾಟೀಲ, ಎಸ್​ಎವಿವಿಪಿ ಸಮಿತಿ ಅಂಗ ಸಂಸ್ಥೆಯ ಸಿಬ್ಬಂದಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts