More

    ಶಿರೋಳ ತೋಂಟದಾರ್ಯಮಠ ಪೀಠಾಧಿಪತಿಯಾಗಿ ಶಾಂತಲಿಂಗ ಶ್ರೀ

    ನರಗುಂದ/ಶಿರೋಳ: ಶಿರೋಳ ತೋಂಟದಾರ್ಯ ಶಾಖಾಮಠದ ಗುರುಬಸವ ಮಹಾಸ್ವಾಮೀಜಿಯವರು ಲಿಂಗೈಕ್ಯರಾಗಿದ್ದರಿಂದ ತೆರವುಗೊಂಡ ಶ್ರೀಮಠದ ನೂತನ ಪೀಠಾಧಿಪತಿ ಸ್ಥಾನಕ್ಕೆ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿಯವರನ್ನು ನಿಯುಕ್ತಿಗೊಳಿಸಲು ಶಿರೋಳ ಹಾಗೂ ಭೈರನಹಟ್ಟಿ ಗ್ರಾಮಗಳ ಸದ್ಭಕ್ತರು ಗುರುವಾರ ಕರೆಯಲಾದ ಸಭೆಯಲ್ಲಿ ತೀರ್ಮಾನ ಕೈಗೊಂಡರು.

    ಪುರಪ್ರವೇಶ ಇಂದು: ನೂತನ ಪೀಠಾಧಿಪತಿಗಳಾಗಿ ಅಧಿಕಾರ ಸ್ವೀಕರಿಸುವ ಶ್ರೀ ಶಾಂತಲಿಂಗ ಶ್ರೀಗಳು ಜ.19 ರಂದು ಬೆಳಗ್ಗೆ 11 ಗಂಟೆಗೆ ಶಿರೋಳ ಗ್ರಾಮದ ಪುರಪ್ರವೇಶ ಮಾಡುವರು. ವಿವಿಧ ವಾದ್ಯ ಮೇಳಗಳೊಂದಿಗೆ ಶಿರೋಳದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಶ್ರೀಗಳನ್ನು ಶ್ರೀಮಠಕ್ಕೆ ಅಹ್ವಾನಿಸಲಾಗುತ್ತದೆ. ಅಂದು ಮಧ್ಯಾಹ್ನ 12 ಗಂಟೆಗೆ ಗದಗ ತೊಂಟದಾರ್ಯಮಠದ ಜಗದ್ಗುರು ಡಾ.ಸಿದ್ಧರಾಮ ಶ್ರೀಗಳ ಉಪಸ್ಥಿತಿಯಲ್ಲಿ ಧರ್ಮಸಭೆ ಕಾರ್ಯಕ್ರಮ ನಡೆಸಲು ಸಭೆಯಲ್ಲಿ ನಿರ್ಣಯಿಸಲಾಯಿತು.

    ಲಿಂ. ಜಗದ್ಗುರು ತೋಂಟದ ಸಿದ್ಧಲಿಂಗ ಶ್ರೀಗಳ ನೆಚ್ಚಿನ ಶಿಷ್ಯರಾದ ಶಾಂತಲಿಂಗ ಶ್ರೀಗಳು ಶ್ವೇತ ವಸ್ತ್ರಧಾರಿಯಾಗಿ ಹಲವಾರು ವರ್ಷಗಳ ಕಾಲ ಸಮಾಜ ಸೇವೆ ಮಾಡಿದ್ದಾರೆ. 2009ರಲ್ಲಿ ಡಾ.ಸಿದ್ದಲಿಂಗ ಶ್ರೀಗಳು ಹಾಗೂ ಜ. ಡಾ.ಸಿದ್ಧರಾಮ ಶ್ರೀಗಳ ಮೂಲಕ ಕಾವಿ ಧರಿಸಿದರು. 2011 ರಲ್ಲಿ ಇಲಕಲ್ ಮಹಾಂತಪ್ಪ ಗಳಿಂದ ಸಮಾಜ ಸೇವಾ ದೀಕ್ಷೆ ಪಡೆದ ಪೂಜ್ಯರು ತಮ್ಮ ಕ್ರಿಯಾಶೀಲ ಹಾಗೂ ನವೀನ ಚಿಂತನೆಗಳು ಮೂಲಕ ಭಕ್ತರ ಶ್ರೇಯೋಭಿವೃದ್ಧಿಗೆ ಹಾಗೂ ಕನ್ನಡಾಂಬೆಯ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಭಕ್ತರ ಆಶಯದಂತೆ ಹಾಗೂ ತೋಂಟದ ಸಿದ್ಧರಾಮ ಶ್ರೀಗಳ ಅಪ್ಪಣೆಯಂತೆ ಶಿರೋಳ ಶಾಖಾಮಠದ ನೇತೃತ್ವವಹಿಸಿದ್ದಾರೆ.

    ಶಿರೋಳ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವ ಕಮಿಟಿ ಅಧ್ಯಕ್ಷ ಲಾಲಾಸಾಬ ಅರಗಂಜಿ, ತಾಪಂ ಮಾಜಿ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ನಾಗನಗೌಡ ತಿಮ್ಮನಗೌಡ್ರ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಕಂಠಿ, ಚನ್ನು ನಂದಿ, ಚಂಬಣ್ಣ ಹಸಬಿ, ಶಂಕ್ರಪ್ಪ ವಾಳದ, ಭೈರನಹಟ್ಟಿಯ ಬಸನಗೌಡ ಚಿಕ್ಕನಗೌಡ್ರ, ಚಂದ್ರು ದಂಡಿನ, ಬಿ.ಬಿ. ಐನಾಪೂರ, ಎಸ್.ಬಿ. ದಂಡಿನ, ಧರ್ಮರಾಜ ತೆಗ್ಗಿನಮನಿ, ರಂಗಪ್ಪ ತಿಗಡಿ, ಶೇಖರಯ್ಯ ನಾಗಲೋಟಿಮಠ, ಗುರುಬಸವ ಶೆಲ್ಲಿಕೇರಿ, ಬಿ.ಎಸ್. ಸಾಲಿಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts