More

    ಜನಪರ ಆಡಳಿತಕ್ಕಿರಲಿ ಮನ್ನಣೆ, ದ್ವೇಷಕ್ಕಲ್ಲ : ಕೇರಳದ ಮಾಜಿ ಸಚಿವ ಬೇಬಿ ಎಚ್ಚರಿಕೆ

    ಬಾಗೇಪಲ್ಲಿ: ಸರ್ಕಾರಗಳನ್ನು ಉರುಳಿಸಿ ಹೊಸ ಸರ್ಕಾರವನ್ನು ಅಧಿಕಾರಕ್ಕೆ ತರುವ ಶಕ್ತಿ ನಾಗರಿಕರಿಗಿದೆ, ಆದ್ದರಿಂದ ರಾಜಕೀಯ ಪಕ್ಷಗಳು ಜನಪರ ಆಡಳಿತಕ್ಕೆ ಮನ್ನಣೆ ನೀಡಬೇಕಿದೆ ಎಂದು ಕೇರಳದ ಮಾಜಿ ಸಚಿವ ಬೇಬಿ ಹೇಳಿದರು.

    ಪಟ್ಟಣದ ಗೂಳೂರು ವೃತ್ತದಲ್ಲಿ ಸಿಪಿಐ (ಎಂ) ತಾಲೂಕು ಸಮಿತಿ ಸೋಮವಾರ ಆಯೋಜಿಸಿದ್ದ ಚಿಕ್ಕಬಳ್ಳಾಪುರ ಜಿಲ್ಲಾ 17ನೇ ಸಮ್ಮೇಳನ ಹಾಗೂ ಬಹಿರಂಗ ಸಭೆಯಲ್ಲಿ ಮಾತನಾಡಿ, ಕೇರಳ ಸರ್ಕಾರದ ಆಡಳಿತ ಸ್ಪೂರ್ತಿದಾಯಕ, ಒಮ್ಮೆ ಅಧಿಕಾರಕ್ಕೆ ಬಂದ ಪಕ್ಷಕ್ಕೆ ಕೇರಳದ ಜನತೆ 2ನೇ ಬಾರಿ ಅವಕಾಶ ನೀಡುವುದಿಲ್ಲ. ಆದರೆ ಕೋವಿಡ್ ನಿರ್ವಹಣೆ, ಪಡಿತರ ವಿತರಣೆ, ಸವಾನ ಹಕ್ಕು ಸೇರಿ ಇತರ ಜನಪರ ಯೋಜನೆಗಳ ಅನುಷ್ಠಾನದ ಪರಿಣಾಮ ಜನತೆ ಮತ್ತೊಮ್ಮೆ ಸಿಪಿಎಂಗೆ ಬೆಂಬಲ ನೀಡಿದ್ದಾರೆ ಎಂದರು.

    ಬಿಜೆಪಿ ಮತ್ತು ಕಾಂಗ್ರೆಸ್ ಜನರಲ್ಲಿ ಸವಾನತೆ ಬೆಳಸುವುದರ ಬದಲಿಗೆ ಕೋಮು ದ್ವೇಷ, ಅಸ್ಪೃಶ್ಯತೆ ಬೆಳೆಸಿ ಪ್ರಪಂಚದ ಹಲವು ದೇಶಗಳು ಭಾರತದ ಬಗ್ಗೆ ತಾತ್ಸಾರವಾಗಿ ಮಾತನಾಡಿಕೊಳ್ಳುವ ಪರಿಸ್ಥಿತಿಗೆ ತಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ರಾಜ್ಯ ಸಮಿತಿ ಸದಸ್ಯ ಉಮೇಶ್, ಕಾರ್ಮಿಕರಿಗೆ 21 ಸಾವಿರ ರೂ. ಕನಿಷ್ಠ ವೇತನ, ಕೂಲಿಕಾರರ, ದಲಿತರ, ಸ್ತ್ರೀಶಕ್ತಿ, ಬೆಳೆ ಹಾನಿಗೆ ಗುರಿಯಾಗಿರುವವರ ಸಾಲಮನ್ನಾ ಮಾಡುವ ಋಣಮುಕ್ತ ಕಾಯ್ದೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತರಬೇಕೆಂದು ಒತ್ತಾಯಿಸಿದರು.

    ಕೃಷಿ ಆಧಾರಿತ ಕೈಗಾರಿಕೆ ಸ್ಥಾಪನೆ, ಕೃಷ್ಣಾ ನದಿ ನೀರು ಜಿಲ್ಲೆಗೆ ಹರಿಸುವುದು, ಶುದ್ಧ ನೀರು ಪೂರೈಕೆ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಸಿಪಿಎಂ ಕಾರ್ಯಕರ್ತರು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಪ್ರತಿಭಟನಾ ರ‌್ಯಾಲಿ ನಡೆಸಿದರು. ಮುಖಂಡರಾದ ಡಾ.ಅನಿಲ್‌ಕುವಾರ್, ಪಿ.ಮಂಜುನಾಥರೆಡ್ಡಿ, ಸಾವಿತ್ರಮ್ಮ, ಉಷಾರಾಣಿ, ಸುಜಾತಮ್ಮ, ಶ್ರೀರಾಮನಾಯಕ್, ಹೇಮಚಂದ್ರ, ಬಿ.ಆಂಜನೇಯರೆಡ್ಡಿ, ಎಂ.ಪಿ.ಮುನಿವೆಂಕಟಪ್ಪ, ರುರಾಮರೆಡ್ಡಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts