More

    ಲಂಚ ಸಮೇತ ಬಗನಕಟ್ಟೆ ಗ್ರಾಪಂ ಪಿಡಿಒ ಲೋಕಾ ಬಲೆಗೆ

    ಶಿವಮೊಗ್ಗ: ಮಳೆಯಿಂದ ಮನೆ ಹಾನಿ ಬಗ್ಗೆ ಜಿಪಿಎಸ್‌ನಲ್ಲಿ ಮಾಹಿತಿ ಸಂಗ್ರಹಿಸಿ ವರದಿ ಮಾಡಲು 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟು, ಆರು ಸಾವಿರ ರೂ. ಪಡೆಯುವಾಗ ಶಿಕಾರಿಪುರ ತಾಲೂಕಿನ ಬಗನಕಟ್ಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

    2021ರಲ್ಲಿ ಸುರಿದ ಮಹಾ ಮಳೆಯಿಂದ ಶಿಕಾರಿಪುರ ತಾಲೂಕಿನ ಸಂಕ್ಲಾಪುರ ಗ್ರಾಮದ ಸಾಕಮ್ಮ ಎಂಬುವರ ಮನೆಯ ಛಾವಣಿ ಮತ್ತು ಗೋಡೆ ಕುಸಿದಿತ್ತು. ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮರು ನಿರ್ಮಾಣ ಪರಿಹಾರಕ್ಕೆ ಸಾಕಮ್ಮ ಅರ್ಜಿ ಸಲ್ಲಿಸಿದ್ದರು. ಆದರೆ ಈ ಕುರಿತು ವರದಿ ಮಾಡಿ ಸರ್ಕಾರಕ್ಕೆ ಕಳುಹಿಸಲು ಪಿಡಿಒ ಮಂಜುನಾಥ ಲಂಚಕ್ಕೆ ಬೇಡಿಕೆ ಇಟ್ಟು 13 ಸಾವಿರ ರೂ. ಪಡೆದಿದ್ದರು. ಬಾಕಿ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
    ಸಾಕಮ್ಮ ಅವರಿಗೆ ಮನೆಯ ಮರು ನಿರ್ಮಾಣಕ್ಕೆ ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ 5 ಲಕ್ಷ ರೂ. ಪರಿಹಾರ ಮಂಜೂರಾಗಿದ್ದು, ಮನೆಯ ಮರು ನಿರ್ಮಾಣ ಮುಕ್ತಾಯಗೊಂಡಿತ್ತು. ನೆರೆ ಸಂತ್ರಸ್ತರ ಪುರ್ನವಸತಿ ಯೋಜನೆಯಂತೆ ಕಂತಿನ ಹಣ 1 ಲಕ್ಷ ರೂ. ಬಿಡುಗಡೆ ಮಾಡಲು ಪಿಡಿಒ ಮಂಜುನಾಥ ಮತ್ತೊಮ್ಮೆ 6 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಬಗ್ಗೆ ಸಾಕಮ್ಮ ಶಿವಮೊಗ್ಗ ಲೋಕಾಯುಕ್ತ ಪೊಲೀಸರಿಗೆ ದೂರ ಕೊಟ್ಟಿದ್ದರು.
    ಗುರುವಾರ ಸಾಕಮ್ಮ ಅವರಿಂದ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮಂಜುನಾಥ ಅವರನ್ನು ಬಂಧಿಸಿ ಲಂಚದ ಹಣ 6 ಸಾವಿರ ರೂ. ವಶಪಡಿಸಿಕೊಂಡಿದ್ದು ಇನ್‌ಸ್ಪೆಕ್ಟರ್ ಪ್ರಕಾಶ್ ತನಿಖೆ ಮುಂದುವರಿಸಿದ್ದಾರೆ. ಶಿವಮೊಗ್ಗ ಲೋಕಾಯುಕ್ತ ಕಚೇರಿಯ ಎಸ್ಪಿ ಎನ್.ವಾಸುದೇವರಾಮ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಉಮೇಶ ನಾಯ್ಕ, ಇನ್‌ಸ್ಪೆಕ್ಟರ್ ಎಸ್.ಎಸ್.ಸುರೇಶ್ ಮತ್ತು ಸಿಬ್ಬಂದಿ ಎಸ್.ಕೆ.ಪ್ರಸನ್ನ, ಮಹಂತೇಶ, ಬಿ.ಟಿ.ಚನ್ನೇಶ, ಪ್ರಶಾಂತ್‌ಕುಮಾರ್, ರಘುನಾಯ್ಕ, ಸುರೇಂದ್ರ, ಅರುಣ್‌ಕುಮಾರ್, ದೇವರಾಜ್, ಪುಟ್ಟಮ್ಮ, ಪ್ರದೀಪ್‌ಕುಮಾರ್, ತರುಣ್ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts