More

    ಕರೊನಾದಿಂದ ಒಂದೇ ದಿನ ಒಂದೇ ಗ್ರಾಮದಲ್ಲಿ 11 ಮಂದಿ ಸಾವು: ಒಂದೇ ವಾರದಲ್ಲಿ 40 ಜನ ಮೃತ್ಯು

    ಬಾಗಲಕೋಟೆ: ಮಹಾಮಾರಿ ಕರೊನಾ ವೈರಸ್​ಗೆ ಒಂದೇ ಗ್ರಾಮದಲ್ಲಿ ಒಂದೇ ದಿನ 11 ಮಂದಿ ಸಾವಿಗೀಡಾಗಿರುವ ಘಟನೆ ಕಳೆದ ಶನಿವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದಲ್ಲಿ ಸೂತಕದ ವಾತಾವರಣ ಆವರಿಸಿದೆ. ಕೋವಿಡ್ ಹಾಗೂ ವಿವಿಧ ಕಾರಣದಿಂದ ಒಂದೇ ವಾರದಲ್ಲಿ ಒಟ್ಟು 40 ಮಂದಿ ಮೃತಪಟ್ಟಿದ್ದಾರೆ. ಕೆಲವರು ಉಸಿರಾಟ ತೊಂದರೆ ಹಾಗೂ ಇನ್ನು ಕೆಲವರು ವಯೋಸಹಜ ಕಾಯಿಲೆಯಿಂದ ಸಾವಿಗೀಡಾಗಿದ್ದಾರೆ.

    ಇದೀಗ ಸಾವಿನ ಹಿಂದೆ ದೇವರ ಶಾಪ ಇದೆಯೇ ಎಂಬ ದೃಷ್ಟಿಕೋನದಲ್ಲಿ ಗ್ರಾಮಸ್ಥರು ಚಿಂತಿಸುತ್ತಿದ್ದಾರೆ. ಗ್ರಾಮದ ಮಾರುತೇಶ್ವರ ಅವಕೃಪೆಯಿಂದ ಹೀಗಾಗಿದೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ.

    ದೇವಸ್ಥಾನದ ಓಕುಳಿ‌ ಹೊಂಡವನ್ನು ಸಂಪೂರ್ಣವಾಗಿ ಮುಚ್ಚಿದ ಹಿನ್ನೆಲೆಯಲ್ಲಿ ಹೀಗಾಗಿದೆ. ಗ್ರಾಮಕ್ಕೆ ಕೇಡುಗಾಲ ಎದುರಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಗ್ರಾಮಸ್ಥರು ಮತ್ತೆ ಹೊಂಡವನ್ನು ತೆರೆದಿದ್ದಾರೆ.

    ಹೊಂಡ ತೆರೆದ ನಂತರ ಸಾವು ಸಂಭವಿಸಿಲ್ಲವಂತೆ. ಧಾರ್ಮಿಕ ಕಾರ್ಯಕ್ರಮ‌ ನಡೆಸದಿರುವ ಹಿನ್ನೆಲೆ ಗ್ರಾಮಕ್ಕೆ ಕೆಡುಗಾಲ ಬಂದಿದೆ ಎಂದು ಕೆಲವು ಹಿರಿಯರ ಹಾಗೂ ಸಾರ್ವಜನಿಕರ ವಾದವಾಗಿದೆ. (ದಿಗ್ವಿಜಯ ನ್ಯೂಸ್​)

    ಕರೊನಾ ಆತಂಕ: ಸಗಣಿ, ಗೋಮೂತ್ರ ಬಳಸುವವರಿಗೆ ತಜ್ಞರು ನೀಡಿದ ಭಯಾನಕ ಎಚ್ಚರಿಕೆ ಹೀಗಿದೆ!

    VIDEO| ಕಾರಿನ ಮುಂದೆ ‘ಕೋವಿಡ್ ಡ್ಯೂಟಿ’ ಬೋರ್ಡ್​, ಒಳಗೆ ಇದ್ದದ್ದು ಮಾತ್ರ ಅರ್ಚಕರು!

    ಬಿಗ್​ಬಾಸ್​ ನಗದು ಬಹುಮಾನಕ್ಕಿಂತ ಹೆಚ್ಚಿಗೆ ಗೆದ್ದಿದ್ದಾರಂತೆ ದಿವ್ಯಾ: ಹೇಗೆಂದು ತಿಳಿದ್ರೆ ಅಚ್ಚರಿ ಪಡ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts