More

    ತಾ.ಪಂ ರದ್ಧತಿ ಬಗ್ಗೆ ಪರ-ವಿರೋಧ ಚರ್ಚೆ

    ಬಾಗಲಕೋಟೆ: ಕಳೆದ ಐದು ವರ್ಷದಲ್ಲಿ ಅಭಿವೃದ್ಧಿ, ಅನುದಾನ ಗೋಸ್ಕರ ಧ್ವನಿ ಎತ್ತಿದ್ದೇವೆ. ಆದರೇ ಪೂರ್ಣ ಪ್ರಮಾಣದಲ್ಲಿ ಕೆಲಸ ಆಗಿಲ್ಲ. ಜಿ.ಪಂ, ಗ್ರಾಮ ಪಂಚಾಯಿತಿಗೆ ಇರುವಷ್ಟು ಶಕ್ತಿ ತಾಲೂಕು ಪಂಚಾಯಿತಿಗೆ ಇಲ್ಲ. ಆಡಳಿತ ವಿಕೇಂದ್ರಿಕರಣ ಕೇವಲ ಮಾತಿಗೆ ಸಿಮೀತವಾಗಿದೆ. ತಾ.ಪಂ ವ್ಯವಸ್ಥೆ ರದ್ದುಗೊಳಿಸುವುದು ಒಳ್ಳೆಯದು. ..ಬೇಡ ಇದು ಸರಿಯಾದ ಕ್ರಮವಲ್ಲ. ಇನ್ನಷ್ಟು ಶಕ್ತಿ ತುಂಬವ ಕೆಲಸ ಮಾಡಬೇಕು..!

    ನವನಗರದಲ್ಲಿ ಬಾಗಲಕೋಟೆ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ತಾ.ಪಂ ರದ್ಧತಿ ಕುರಿತು ಬಿಸಿಬಿಸಿ ಚರ್ಚೆ ನಡೆಯಿತು. ತಾ.ಪಂ ಅಧ್ಯಕ್ಷ, ಉಪಾಧ್ಯಕ್ಷರು ಆದಿಯಾಗಿ ಪಕ್ಷ ಬೇಧ ಮರೆತು ಸರ್ವ ಸದಸ್ಯರು ತಾಲೂಕು ಪಂಚಾಯಿತಿ ಕಾರ್ಯಚಟುವಟಿಕೆ, ಅವಶ್ಯಕತೆ, ರದ್ಧತಿ ಕುರಿತು ಮುಕ್ತ ಮನಸ್ಸಿನಿಂದ ತಮ್ಮ ಅಭಿಪ್ರಾಯ ಹಂಚಿಕೊಂಡರು.

    ಕೇವಲ ಸಭೆಗೆ ಬಂದು ಮಾತನಾಡಿ ಹೋಗುವುದಕ್ಕೆ ತಾ.ಪಂ ಸಿಮೀತವಾಗಬಾರದು. ಸದಸ್ಯರಿಗೆ ಆಡಳಿತ ಶಕ್ತಿ ನೀಡಿಲ್ಲ. ಗ್ರಾ.ಪಂ ಮೂಲಕವೇ ಎಲ್ಲ ಕೆಲಸ ನಡೆಯುತ್ತಿರುವಾಗ ತಾ.ಪಂ ಅವಶ್ಯಕತೆ ಇಲ್ಲ. ಹೀಗಾಗಿ ರದ್ದುಗೊಳಿಸುವುದು ಸೂಕ್ತ ಎಂದು ಬಹುತೇಕ ಸದಸ್ಯರು ಅಭಿಪ್ರಾಯ ತಿಳಿಸಿದರು.

    ಈ ವೇಳೆ ತಾ.ಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ ಮಾತನಾಡಿ, ತಾಲೂಕು ಪಂಚಾಯಿತಿ ಮೂಲಕ ಕೆಲಸ ಮಾಡಲು ಸಾಕಷ್ಟು ಅವಕಾಶಗಳಿವೆ. ಕೇವಲ ಅನುದಾನ ಕಡಿಮೆ ಇದೇ ಎನ್ನುವ ಕಾರಣಕ್ಕೆ ರದ್ಧತಿ ಒಳ್ಳೆಯದಲ್ಲ. ತಾಲೂಕು ಮಟ್ಟದಲ್ಲಿ ಆಡಳಿತಕ್ಕೆ ಒಂದು ವೇದಿಕೆಯಾಗಿ ತಾ.ಪಂ ಬೇಕು. ಸದಸ್ಯರ ಅಭಿಪ್ರಾಯ ಒಂದು ರೀತಿಯಲ್ಲಿ ಸರಿ ಇರಬಹುದು. ಆದರೇ ಬದುಕುವುದಕ್ಕಾಗಿ ರಾಜಕೀಯ ಬರಬಾರದು. ಜನರ ಬದುಕು ಬದಲಾಯಿಸಿ ರಾಜಕೀಯ ಮಾಡಬೇಕು. ಕಳೆದ 5 ವರ್ಷ ಅವಧಿಯಲ್ಲಿ ನಮ್ಮ ಸದಸ್ಯರು ಸೇರಿ ಅನೇಕ ಒಳ್ಳಿಯ ಕೆಲಸ ಮಾಡಿದ್ದೇವೆ ಎಂದರು.

    ಒಟ್ಟಾರೆ ತಾ.ಪಂ ಕೊನೆ ಸಭೆಯಲ್ಲಿ ತಾ.ಪಂ ರದ್ಧತಿ ಕುರಿತು ಚರ್ಚೆ ಪಂಚಾಯತ್ ರಾಜ್ಯ ವ್ಯವಸ್ಥೆ, ಆಡಳಿತ ವಿಕೇಂದ್ರಿಕರಣ ಬಗ್ಗೆ ಬೆಳಕು ಚಲ್ಲುವಂತೆ ಮಾಡಿತು. ತಾ.ಪಂ ಉಪಾಧ್ಯಕ್ಷ ಸಂಗಣ್ಣ ಮುಧೋಳ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬಸವರಾಜ ಕೆಂಜೋಡಿ, ತಾ.ಪಂ ಇಒ ಎನ್.ವೈ.ಬಸರಿಗೀಡದ, ಸದಸ್ಯರಾದ ರಾಜಶೇಖರ ಅಂಗಡಿ, ಪರಶುರಾಮ ಛಬ್ಬಿ, ನಿಂಗಪ್ಪ ಮಾಗನೂರ ಇತರರು ಇದ್ದರು.

    ಸಾವಿರ ರೂ.ಸಹಾಯಧನ ಸಾಲುತ್ತಿಲ್ಲ
    ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಕಿಚನ್ ಕಾರ್ಡ್‌ನ್ ಯೋಜನೆ ರೂಪಿಸಿದೆ. ಆದರೇ ಕೇವಲ 1 ಸಾವಿರ ರೂ. ಸಹಾಯ ನೀಡಲಾಗುತ್ತಿದೆ. ಕೇವಲ ಸಾವಿರ ರೂ.ದಲ್ಲಿ ಕಿಚನ್ ಗಾರ್ಡ್‌ನ್ ಮಾಡಲು ಸಾಧ್ಯವೇ? ಕಿಚನ್ ಗಾರ್ಡ್‌ನ ಮಾಡದ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರನ್ನು ಅಮಾನತ್ತು ಮಾಡಲಾಗುವುದು ಎಚ್ಚರಿಕೆ ನೀಡುವುದು ಸರಿಯಲ್ಲ ಎಂದು ಸದಸ್ಯ ಸಲೀಂ ಶೇಖ ದೂರಿದರು.

    ಈ ವೇಳೆ ಸದಸ್ಯೆ ಲಕ್ಷ್ಮೀ ಪೂಜಾರ ಮಾತನಾಡಿ, ನನ್ನ ಕ್ಷೇತ್ರ ವ್ಯಾಪ್ತಿಯ ಉದಗಟ್ಟಿ ಗ್ರಾಮದಲ್ಲಿ ಒಂದೇ ಅಂಗನವಾಡಿ ಕೇಂದ್ರದಲ್ಲಿ ಇಬ್ಬರು ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದಾರೆ. 5 ವರ್ಷದಿಂದ ಹೇಳುತ್ತಾ ಬಂದರು ಯಾರು ಗಮನ ಹರಿಸಿಲ್ಲ ಎಂದರು. ಇನ್ನೂಳಿದ ಸದಸ್ಯರು ಧ್ವನಿ ಎತ್ತಿ, ಅಂಗನವಾಡಿ ಕೇಂದ್ರಗಳಲ್ಲಿ ಮೂಲಕ ಸೌಕರ್ಯವಿಲ್ಲ. ನೀರು, ಸರಿಯಾದ ಸ್ಥಳಾವಕಾಶವಿಲ್ಲ. . ಇದೇ ರೀತಿ ತಾಲೂಕಿನ ವಿವಿಧ ಗ್ರಾಮಗಳ ಅಂಗನವಾಡಿ ಕೇಂದ್ರಗಳಲ್ಲಿ ಸಮಸ್ಯೆ ಇದೆ ಆಕ್ರೋಶ ವ್ಯಕ್ತಪಡಿಸಿದರು.

    ಪ್ರತಿಕ್ರಿಯೆ ನೀಡಿದ ತಾಲೂಕಾ ಶಿಶು ಅಭಿವೃದ್ಧಿ ಅಧಿಕಾರಿ ಶಿಲ್ಪಾ ಹಿರೇಮಠ ಮಾತನಾಡಿ, ಯಾರಿಗೆ ಒತ್ತಡ ಹಾಕಿಲ್ಲ. ಸರ್ಕಾರದ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ನಮ್ಮ ಉದ್ದೇಶ. ಸ್ಥಳ ಲಭ್ಯವಿರುವ ಅಂಗನವಾಡಿಗಳಲ್ಲಿ ಮಾತ್ರ ಕಿಚನ್ ಗಾರ್ಡ್‌ನ್ ಮಾಡಲಾಗುದೆ. 1 ಸಾವಿರ ಸಹಾಯಧನದಲ್ಲಿ ಕಷ್ಟವಾಗುತ್ತದೆ. ಸ್ಥಳೀಯರ ಸಹಕಾರ ಪಡೆದುಕೊಂಡಲ್ಲಿ ಕಿಚನ್ ಗಾರ್ಡ್‌ನ್ ಸಕಾರಗೊಳ್ಳಲಿದೆ ಎಂದು ತಿಳಿಸಿದರು.

    ತಾ.ಪಂ ಸಿಇಒ ಎನ್.ವೈ.ಬಸರಿಗೀಡದ ಮಾತನಾಡಿ, ಉದಗಟ್ಟಿ ಗ್ರಾಮದ ಬಗ್ಗೆ ಗಮನ ಹರಿಸಲಾಗುವುದು. ಅಂಗನವಾಡಿಗಳಿಗೆ ಸರ್ಕಾರ ಸಾಕಷ್ಟು ಸೌಲಭ್ಯ ಒದಗಿಸುತ್ತಿದೆ. ಕಲಿಕಾ ಮಟ್ಟ ಸುಧಾರಣೆಗೆ ಒತ್ತು ನೀಡಲಾಗಿದೆ. ನಿವೇಶನವಿದ್ದರೆ ಕೇಂದ್ರ ಸರ್ಕಾರದ ನರೇಗಾ ಯೋಜನೆಯಡಿ 6.50 ಲಕ್ಷ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 3.50 ಲಕ್ಷ ಅನುದಾನ ಕಟ್ಟಡಲು ಕಟ್ಟಲು ದೊರೆಯಲಿದೆ ಎಂದು ಹೇಳಿದರು. ಇನ್ನು ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಕಂದಾಯ, ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

    ಬಾಲಾವಿಕಾಸ ಸಮಿತಿಗಳು ಇದ್ದು ಇಲ್ಲದಂತಾಗಿವೆ. ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅಂಗನವಾಡಿ ಕೇಂದ್ರಗಳಿಂದ ಸಮರ್ಪಕವಾದ ಆಹಾರ ಪೂರೈಕೆ ಆಗುತ್ತಿಲ್ಲ. ಈ ಬಗ್ಗೆ ಗಮನ ಹರಿಸಬೇಕು. ಇನ್ನು 5 ವರ್ಷ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಲಾಗಿದೆ. ಸದಸ್ಯರ ಸಹಕಾರದಿಂದ ತಾಲೂಕಿನಲ್ಲಿ ಮಹತ್ತರ ಯೋಜನೆ ಅನುಷ್ಠಾನಕ್ಕೆ ಬಂದಿವೆ.
    ಚನ್ನನಗೌಡ ಪರನಗೌಡರ ತಾ.ಪಂ ಅಧ್ಯಕ್ಷ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts