More

    ಕ್ರೀಡೆಗಳಿಂದ ಸೋಲು-ಗೆಲುವಿನ ಪಾಠ

    ಬಾಗಲಕೋಟೆ: ದೈಹಿಕ, ಮಾನಸಿಕ ಸದೃಢತೆಗೆ, ಆರೋಗ್ಯವಂತ ಜೀವನಕ್ಕಾಗಿ ಕ್ರೀಡೆಗಳು ಸಹಕಾರಿಯಾಗಿವೆ. ವುಶು ಕ್ರೀಡೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ರಾಜ್ಯ ವುಶು ಸಂಸ್ಥೆ ಅಧ್ಯಕ್ಷ, ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

    ನಗರದ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ಶನಿವಾರ ರಾಜ್ಯ ವುಶು ಸಂಸ್ಥೆ ಹಮ್ಮಿಕೊಂಡಿರುವ ವುಶು ಚಾಂಪಿಯನ್‌ಶಿಫ್-2020-21 ಉದ್ಘಾಟಿಸಿ ಅವರು ಮಾತನಾಡಿದರು.

    ವುಶು ಕ್ರೀಡೆ ಕೇವಲ ನಗರ ಪ್ರದೇಶಕ್ಕೆ ಸೀಮಿತಗೊಳಿಸಬಾರದು. ಗ್ರಾಮೀಣ ಭಾಗಕ್ಕೂ ವಿಸ್ತರಿಸುವ ಕಾರ್ಯ ಮಾಡಬೇಕು. ಈ ನಿಟ್ಟಿನಲ್ಲಿ ವುಶು ಕ್ರೀಡೆಯನ್ನು ಹೆಚ್ಚು ಜನಪ್ರಿಯಗೊಳಿಸಿ ಹಾಕಿ, ಕ್ರಿಕೆಟ್, ಕಬಡ್ಡಿ ಮಾದರಿಯಲ್ಲಿ ಎಲ್ಲೆಡೆ ಪಸರಿಸುವಂತಾಗಬೇಕು. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

    ಬಾಗಲಕೋಟೆ ನಗರದಲ್ಲಿ ವುಶು ಕ್ರೀಡೆಯ ಪ್ರಧಾನ ಕಚೇರಿ ಇದೆ. ಇಲ್ಲಿನ ಕ್ರೀಡಾಪಟುಗಳು ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಿ ಅನೇಕ ಚಿನ್ನ, ಬೆಳ್ಳಿ ಪದಕಗಳನ್ನು ಗೆಲ್ಲುವ ಮೂಲಕ ಕ್ರೀಡೆಯನ್ನು ಬೆಳೆಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ ಎಂದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಮಾತನಾಡಿ, ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತವೆ. ಈ ನಿಟ್ಟಿನಲ್ಲಿ ಕ್ರೀಡಾಪಟುಗಳು ಶ್ರಮವಹಿಸಬೇಕು ಎಂದು ತಿಳಿಸಿದರು.

    ವುಶು ಸಂಸ್ಥೆ ಜಿಲ್ಲಾ ಉಪಾಧ್ಯಕ್ಷ ಅಶೋಕ ಸಜ್ಜನ (ಬೇವೂರ), ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಅಪ್ಪಣ್ಣ ಅಂಟಿನ, ಮಹೇಶ ಅಂಗಡಿ, ವಿರೇಶ ಅಥಣಿ, ಅಶೋಕ ಡಿ.ಮೋಕಾಶಿ, ವಿವೇಕಾನಂದ ಗರಸಂಗಿ, ಕುಮಾರಸ್ವಾಮಿ ಹಿರೇಮಠ (ಚಿತ್ತರಗಿ), ಅವಿನಾಶ ಹಿರೇಮಠ ಇದ್ದರು. ಎಂ.ಎಸ್.ಪಾಟೋಳಿ ನಿರೂಪಿಸಿದರು. ರಾಜಶೇಖರ ಹಿರೇಮಠ ಸ್ವಾಗತಿಸಿದರು. ಸಂಗಮೇಶ ಲಾಯದಗುಂದಿ ವಂದಿಸಿದರು.

    ಯಾವುದೇ ಆಟವಾಗಿರಲಿ. ಅದರಲ್ಲಿ ಅಭಿರುಚಿ, ಉತ್ಸಾಹ ಇರಬೇಕು. ತೊಡಗಿದ ಮೇಲೆ ಮಧ್ಯೆ ಬಿಡದಿರುವಂಥ ದೃಢತೆ ಹೊಂದಿರಬೇಕು. ಕ್ರೀಡೆಗಳು ಸ್ಪರ್ಧಾ ಮನೋಭಾವ ಜತೆಗೆ ಸೋಲು, ಗೆಲುವಿನ ಪಾಠ ಕಲಿಸುತ್ತವೆ. ಕ್ರೀಡೆಗಳ ಬಗ್ಗೆ ಕೇವಲ ಆಸಕ್ತಿ ಬೆಳೆಸಿಕೊಂಡರೆ ಸಾಲದು ಸಕ್ರಿಯವಾಗಿ ಭಾಗವಹಿಸಬೇಕು.
    ಲೋಕೇಶ ಜಗಲಾಸರ್ ಎಸ್ಪಿ ಬಾಗಲಕೋಟೆ



    ಕ್ರೀಡೆಗಳಿಂದ ಸೋಲು-ಗೆಲುವಿನ ಪಾಠ

    ,

    ಕ್ರೀಡೆಗಳಿಂದ ಸೋಲು-ಗೆಲುವಿನ ಪಾಠ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts