More

    ರೈತರ ಹಿತ ಕಾಪಾಡಿ

    ಬಾಗಲಕೋಟೆ: ಕಳೆದ ಹಂಗಾಮಿನಲ್ಲಿ ಕಬ್ಬಿಗೆ ಎಫ್‌ಆರ್‌ಪಿಗಿಂತ ಕಡಿಮೆ ದರ ನೀಡಿದ ಕಾರ್ಖಾನೆ ವಿರುದ್ಧ ಹೋರಾಟ ಮಾಡಬೇಕು ವಿನಾ ಎಫ್‌ಆರ್‌ಪಿ ದರಕ್ಕಿಂತ ಹೆಚ್ಚಿನ ದರ ನೀಡಿದ ಕಾರ್ಖಾನೆ ವಿರುದ್ಧ ಪ್ರತಿಭಟನೆ ಮಾಡಬಾರದು ಎಂದು ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದ ಬೀಳಗಿ ಸಕ್ಕರೆ ಕಾರ್ಖಾನೆ ನೋಂದಾಯಿತ ಅಧಿಕೃತ ಕಬ್ಬು ಬೆಳೆಗಾರರ ಸಂಘ ಆಗ್ರಹಿಸಿದೆ.

    ಸಂಘದ ಅಧ್ಯಕ್ಷ ಮಹಾದೇವಪ್ಪ ಸೂಳಿಕೇರಿ, ಸದಸ್ಯರಾದ ನಂದಬಸಪ್ಪ ಚೌದರಿ, ಯಲ್ಲಪ್ಪ ಹೊನ್ನಿಹಾಳ, ಮಲ್ಲಪ್ಪ ಮೇಟಿ, ರಾಜು ಬಾರಕೇರ, ಸಂಗಪ್ಪ ಮೇಲನಾಡ ಈ ಕುರಿತು ಪ್ರಕಟಣೆ ನೀಡಿದ್ದು, ಕಳೆದ ಹಂಗಾಮಿನಲ್ಲಿ ಬೀಳಗಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯೂ ರೈತರ ಹಿತದೃಷ್ಟಿಯಿಂದ ಪ್ರತಿಟನ್ ಕಬ್ಬು ಬೆಳೆಗೆ ಕೇಂದ್ರ ಸರ್ಕಾರ ನಿಗದಿ ಪಡಿಸಿದ ಎಫ್‌ಆರ್‌ಪಿ ಬೆಲೆಗಿಂತ ಹೆಚ್ಚಿನ ದರ ನೀಡಿದೆ. ಜಿಲ್ಲೆಯ ನಾಯನೇಗಲಿ ಗ್ರಾಮದ ಇಐಡಿ ಪ್ಯಾರಿ ಕಾರ್ಖಾನೆ ಪ್ರತಿ ಟನ್‌ಗೆ ಕೇವಲ 2252 ರೂ. ಮಾತ್ರ ಕೊಟ್ಟಿದೆ. ಪ್ರಸ್ತುತ ವರ್ಷ ಹಂಗಾಮು ಆರಂಭ ಮಾಡಿದರೂ ಸಹ ಕಲ್ಲಾಪುರದ ಎಂ.ಆರ್.ಎನ್. ಸಕ್ಕರೆ ಕಾರ್ಖಾನೆಯೂ ಕಳೆದ ವರ್ಷದ 2500 ರೂ. ಪೂರ್ತಿಯಾಗಿ ನೀಡಿಲ್ಲ. ಸತ್ಯಾಗ್ರಹ, ಹೋರಾಟ ಮಾಡಲು ಬಯಸುವವರು ಆ ಭಾಗದ ಕಾರ್ಖಾನೆಗಳ ಎದುರು ಪ್ರತಿಭಟನೆ ನಡೆಸಿ ಬಾಕಿ ಕೊಡಿಸಬೇಕು. ತನ್ಮೂಲಕ ರೈತರಿಗೆ ಕಲ್ಯಾಣ ಉಂಟು ಮಾಡಬೇಕು. ಅದು ಬಿಟ್ಟು ವಿನಾಕಾರಣ ರಾಜಕೀಯ ಮಾಡಬಾರದು. ರೈತರ ಹಿತ ಕಾಪಾಡಲು ಶ್ರಮಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts