More

    ಕಡಲೆ ಖರೀದಿಗೆ ನೋಂದಣಿ ಪ್ರಾರಂಭ

    ಬಾಗಲಕೋಟೆ: ಸರ್ಕಾರದ ಆದೇಶದನ್ವಯ ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಕಡಲೆ ಉತ್ಪನ್ನಕ್ಕೆ ಪ್ರತಿ ಕ್ವಿಂಟಾಲ್‌ಗೆ 4,875 ರೂ.ನಂತೆ ಖರೀದಿಸಲಾಗುತ್ತಿದ್ದು, ನೋಂದಣಿ ಪ್ರಕ್ರಿಯೆ ಖರೀದಿ ಕೇಂದ್ರಗಳಲ್ಲಿ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ತಿಳಿಸಿದ್ದಾರೆ.

    ನೋಂದಣಿಗೆ ಮಾ.13 ಕೊನೆಯ ದಿನವಾಗಿದ್ದು, 23 ವರೆಗೆ ಕಡಲೆಯನ್ನು ಖರೀದಿ ಕೇಂದ್ರಗಳಲ್ಲಿ ಖರೀದಿಸಲಾಗುತ್ತದೆ. ಪ್ರತಿ ಕ್ವಿಂಟಾಲ್‌ಗೆ 4,875 ರೂ.ನಂತೆ ಪ್ರತಿ ಎಕರೆಗೆ 3 ಕ್ವಿಂಟಾಲ್‌ರಂತೆ ಪ್ರತಿ ರೈತರಿಂದ ಗರಿಷ್ಠ 10 ಕ್ವಿಂಟಾಲ್ ಖರೀದಿಸಲಾಗುತ್ತಿದೆ. ಜಿಲ್ಲೆಯಲ್ಲಿ 20 ಖರೀದಿ ಕೇಂದ್ರಗಳಲ್ಲಿ ಕೃಷಿ ಇಲಾಖೆಯಿಂದ ನೀಡಿರುವ ಎಫ್​.ಐ.ಡಿ. ನಂಬರ್ ಮತ್ತು ಆಧಾರ್ ಕಾರ್ಡ್‌ನ್ನು ನೀಡಿ ನೋಂದಾಯಿಸಿಕೊಳ್ಳಬೇಕು. ಒಂದು ವೇಳೆ ಬೆಳೆ ದರ್ಶಕದಲ್ಲಿ ಮತ್ತು ಫ್ರುಟ್ ತಂತ್ರಾಂಶದಲ್ಲಿ ಬೆಳೆ ಬೆಳೆದಿರುವುದು ಕಂಡು ಬರದೆ ಇದ್ದಲ್ಲಿ ಹತ್ತಿರದ ಕೃಷಿ ಇಲಾಖೆಗೆ ಹೋಗಿ ಆಕ್ಷೇಪಣೆ ಸಲ್ಲಿಸಿ ಸರಿಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.

    ರೈತರು ಖರೀದಿ ಕೇಂದ್ರಗಳಲ್ಲಿ ಆಧಾರ್ ಕಾರ್ಡ್, ಪಹಣಿ ಪತ್ರ, ಆಧಾರ್ ಲಿಂಕ್ ಆಗಿರುವ ರಾಷ್ಟ್ರೀಕೃತ ಬ್ಯಾಂಕ್ ಪಾಸ್‌ಬುಕ್ ಪ್ರತಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಯವರನ್ನು ಮತ್ತು ಖರೀದಿ ಕೇಂದ್ರಗಳ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಕೆ.ರಾಜೇಂದ್ರ ತಿಳಿಸಿದ್ದಾರೆ.

    ಖರೀದಿ ಕೇಂದ್ರಗಳ ವಿವರ
    ಟಿಎಪಿಎಂಎಸ್ ಬಾಗಲಕೋಟೆ, ಪಿಕೆಪಿಎಸ್ ಹಳ್ಳೂರ ಮತ್ತು ಭಗವತಿ, ಹುನಗುಂದ ತಾಲೂಕಿನ ಪಿಕೆಪಿಎಸ್ ಕರಡಿ, ನಂದವಾಡಗಿ, ಕೂಡಲಸಂಗಮ, ಹಿರೇಆದಾಪುರ, ಕಂದಗಲ್ಲ, ಹುನಗುಂದ, ನಾಗೂರ, ಬೂದಿಹಾಳ, ಚಿಕ್ಕಸಿಂಗನಗುತ್ತಿ, ಸೂಳೆಬಾವಿ ಎ್ಪಿಒ(ಟ್ಯಾಬ್-1) ಹಾಗೂ ಮೂಗನೂರ (ಟ್ಯಾಬ್-2) ಎ್ಪಿಒಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ಬಾದಾಮಿ ತಾಲೂಕಿನ ಹುಲ್ಲಿಕೇರಿ ಪಿಕೆಪಿಎಸ್, ಕೋಟೆಕಲ್ಲ ಪಿಕೆಪಿಎಸ್, ಬೀಳಗಿ ತಾಲೂಕಿನ ಟಿಎಪಿಸಿಎಂಎಸ್ ಬೀಳಗಿ, ಮುಧೋಳ ತಾಲೂಕಿನ ಎಪಿಸಿಎಂಎಸ್ ಮುಧೋಳ, ಮಾರುಕಟ್ಟೆ ಪ್ರಾಂಗಣ, ಜಮಖಂಡಿ ತಾಲೂಕಿನ ಜಮಖಂಡಿ ಎಪಿಸಿಎಂಎಸ್, ಸಾವಳಗಿಯ ಪಿಕೆಪಿಎಸ್, ತೊದಲಬಾಗಿಯ ಎ್ಪಿಒಗಳಲ್ಲಿ ನೋಂದಣಿ ಮಾಡಿಕೊಳ್ಳಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts