More

    ಮಾ.1 ರಿಂದ ಜಾನುವಾರ ಜಾತ್ರೆ

    ಬಾಗಲಕೋಟೆ: ಕೋಟೆನಗರಿಯ ಐತಿಹಾಸಿಕ ಮೋಟಗಿ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಕಲಾದಗಿ ರಸ್ತೆ ಪಕ್ಕದ ಕೇಸನೂರ ಮಾರುಕಟ್ಟೆ ಪ್ರಾರಂಗಣದಲ್ಲಿ ಮಾ.1 ರಿಂದ 5 ವರೆಗೆ ಬಾಗಲಕೋಟೆ ಕೃಷಿ ಉತ್ಪನ್ನ ಮಾರುಕಟ್ಟೆ ನೇತೃತ್ವದಲ್ಲಿ ಜಾನುವಾರ ಜಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ಕೃಷ್ಣಪ್ಪ ಲಮಾಣಿ ಹೇಳಿದರು.

    ಕೋವಿಡ್ ಹಿನ್ನಲೆಯಲ್ಲಿ ಜಾನುವಾರ ಜಾತ್ರೆ ನಡೆಸುವ ಕುರಿತು ಚರ್ಚೆ ಮಾಡಲಾಯಿತು. ಅಂತಿಮವಾಗಿ ಸರ್ಕಾರದಿಂದ ಒಪ್ಪಿಗೆ ಪಡೆದು ಜಾನುವಾರ ಜಾತ್ರೆ ಹಮ್ಮಿಕೊಳ್ಳಲಾಗಿದೆ. ವಿಜಯಪುರ, ಗದಗ, ಬಾಗಲಕೋಟೆ ಸೇರಿದಂತೆ ರಾಜ್ಯದ ನಾನಾ ಭಾಗದಿಂದ ರೈತರು ತಮ್ಮ ಜಾನುವಾರುಗಳೊಂದಿಗೆ ಆಗಮಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಎಲ್ಲ ರೀತಿಯ ಎಚ್ಚರಿಕೆ ಕ್ರಮ..
    ಕರೊನಾ ಹಿನ್ನಲೆಯಲ್ಲಿ ಜಾನುವಾರು ಜಾತ್ರೆ ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಸ್ಯಾನಿಟೈಜರ್ ಸಿಂಪಡೆಣೆ ಮಾಡಲಾಗುತ್ತದೆ. ಥರ್ಮಲ್ ಸ್ಕ್ರಿನಿಂಗ್, ಮಾಸ್ಕ ಕಡ್ಡಾಯಗೊಳಿಸಲಾಗಿದೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕುಡಿಯುವ ನೀರು, ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ವಿವಿಧ ಮಳಿಗೆಗಳನ್ನು ಹಾಕಲು ಅವಕಾಶ ನೀಡಲಾಗುವುದು. ಅಲ್ಲದೆ ಶ್ರೀಕೃಷ್ಣ ಪಾರಿಜಾತ, ಭಜನಾ ತಂಡದಿಂದ ಮನರಂಜನಾ ಕಾರ್ಯಕ್ರಮಗಳು ಜರುಗಲಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಶು ಸಂಗೋಪನೆ ಇಲಾಖೆ ಸಹಕಾರ ಕೋರಲಾಗಿದೆ. ಅಲ್ಲದೆ ವಿಶೇಷ ಸಭೆ ನಡೆಸಿ ಅಗತ್ಯವಾದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

    ಎಪಿಎಂಸಿ ನಿರ್ದೇಶಕರಾದ ಶೇಖರಪ್ಪ ಹೆರಕಲ್ಲ, ಮುರುಗೆಪ್ಪ ವೈಜಾಪುರ, ಮಲ್ಲು ಧ್ಯಾವನ್ನವರ, ಜಟ್ಟೆಪ್ಪ ಮಾದಾಪುರ, ಕಾರ್ಯದರ್ಶಿ ಟಿ.ಬಿ.ಉಣ್ಣಿಭಾವಿ, ಸಹಾಯಕ ಕಾರ್ಯದರ್ಶಿ ಆರ್.ಎಂ.ದಂಡಿನ್ನ ಸುದ್ದಿಗೋಷ್ಠಿಯಲ್ಲಿ ಇದ್ದರು.

    ಬಿಟಿಡಿಎ ವಿರುದ್ಧ ಅಸಮಾಧಾನ
    ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಾಗಲಕೋಟೆ ನಗರ ಮುಳಗಡೆಯಾದ ಬಳಿಕ ಜಾನುವಾರ ಜಾತ್ರೆ ವೈಭವ ಉಳಿದಿಲ್ಲ. ಗತ ವೈಭವಕ್ಕೆ ಎಪಿಎಂಸಿ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಜಾತ್ರೆ ನಡೆಯುವ ಪ್ರಾರಂಗಣಕ್ಕೆ ಸುತ್ತಲು ಕಂಪೌಂಡ, ಎರಡು ದ್ವಾರ ನಿರ್ಮಿಸಲು ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇನ್ನು ರಾಷ್ಟ್ರೀಯ ಪುನರ್ ನೀತಿ ಅನುದಾಸರ ಜಾನುವಾರ ಜಾತ್ರೆಗೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಹೊಸ ಕಾಯಕಲ್ಪ ನೀಡಬೇಕು. ಆದರೇ ಮನವಿ ಮಾಡಿದರು ಜಾತ್ರೆಗೆ ಬಿಟಿಡಿಎದಿಂದ ಸಹಕಾರ ದೊರೆಯುತ್ತಿಲ್ಲ. ಕೇವಲ ಎರಡು ಟ್ಯಾಂಕರ್ ನೀರು ನೀಡಿ ಅಂತ ವಿನಂತಿ ಮಾಡಿದರು ಕಿವಿಗೊಡುತ್ತಿಲ್ಲ ಎಂದು ಎಪಿಎಂಸಿ ನಿರ್ದೇಶಕರಾದ ಮುರುಗೆಪ್ಪ ವೈಜಾಪುರ, ಮಲ್ಲು ಧ್ಯಾವನ್ನವರ, ಜಟ್ಟೆಪ್ಪ ಮಾದಾಪುರ ಬಿಟಿಡಿಎ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

    ಆದಾಯ ಕ್ಷೀಣ
    ಎಪಿಎಂಸಿ ಹೊಸ ಕಾಯ್ದೆಯಿಂದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಆದಾಯದಲ್ಲಿ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ. ಕಸಗೂಡಿಸಲು ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಅವಕಾಶವಿಲ್ಲದಂತಾಗಿದೆ. ಸೆಸ್ಸೆ ಸಂಗ್ರಹ ಕ್ಷಿಣಿಸಿದೆ. ಹೀಗಾಗಿ ಪ್ರತಿ ವರ್ಷದಂತೆ ಈ ವರ್ಷ ಕೂಡಾ ಜಾನುವಾರ ಜಾತ್ರೆಗೆ 2 ಲಕ್ಷ ರೂ. ಅನುದಾನ ನೀಡುವಂತೆ ಕೇಂದ್ರ ಕಚೇರಿಗೆ ಮನವಿ ಮಾಡಲಾಗಿದೆ ಎಂದು ಎಪಿಎಂಸಿ ನಿರ್ದೇಶಕರು ತಿಳಿಸಿದರು.

    ಜಾನುವಾರು ಜಾತ್ರೆಯಲ್ಲಿ ಹಾಲಲ್ಲಿ ಹೋರಿ, ಎರಡು ಹಲ್ಲಿನ ಹೋರಿ, ಕಿಲಾರಿ ಆಕಳು ಸೇರಿದಂತೆ ಉತ್ತಮ ರಾಸುಗಳಿಗೆ ಬಹುಮಾನ ನೀಡಲಾಗುತ್ತದೆ. ಪ್ರಗತಿ ಪರ ರೈತರು, ಸಾರ್ವಜನಿಕರಿಂದ ಬಹುಮಾನಕ್ಕಾಗಿ ದೇಣಿಗೆ ಸಂಗ್ರಹಿಸಲಾಗಿದೆ. ಎಲ್ಲವು ಪಾರದರ್ಶಕವಾಗಿ ನಡೆಯಲಿದೆ.
    – ಕೃಷ್ಣಪ್ಪ ಲಮಾಣಿ ಎಪಿಎಂಸಿ ಅಧ್ಯಕ್ಷ



    ಮಾ.1 ರಿಂದ ಜಾನುವಾರ ಜಾತ್ರೆ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts