More

    ನಾಳೆ ಬಾಗಲಕೋಟೆ ತಾಲೂಕು ಸಾಹಿತ್ಯ ಸಮ್ಮೇಳನ

    ಬಾಗಲಕೋಟೆ: ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಮಾ. 7 ರಂದು ಬಾಗಲಕೋಟೆ ತಾಲೂಕು ಸಾಹಿತ್ಯ ಸಮ್ಮೇಳನವನ್ನು ನಗರದ ವಿದ್ಯಾಗಿರಿ ಬಡಾವಣೆಯಲ್ಲಿರುವ ಸಾಯಿ ಮಂದಿರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಜಿ.ಎನ್. ಪಾಟೀಲ ತಿಳಿಸಿದರು.

    ಎಸ್.ಎಸ್.ಹಳ್ಳೂರ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗುವುದು. ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಭವ್ಯ ಮೆರವಣಿಗೆ
    ಅಂದು ಬೆಳಗ್ಗೆ 7.15 ಗಂಟೆಗೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರುಗಿ ರಾಷ್ಟ್ರಧ್ವಜ, ಕಸಾಪ ಜಿಲ್ಲಾಧ್ಯಕ್ಷ ಶ್ರೀಶೈಲ ಕರಿಶಂಕರಿ ಪರಿಷತ್ ಧ್ವಜ, ತಾಲೂಕು ಅಧ್ಯಕ್ಷ ವಿನೋದ ಯಡಹಳ್ಳಿ ಕನ್ನಡ ಧ್ವಜಾರೋಹಣ ನೆರವೇರಿಸಲಿದ್ದಾರೆ. ನಂತರ ಭುವನೇಶ್ವರ ತಾಯಿ ಭಾವಚಿತ್ರ ಮೆರವಣಿಗೆ ಮಾಜಿ ಶಾಸಕ ಪಿ.ಎಚ್. ಪೂಜಾರ ಚಾಲನೆ ನೀಡಲಿದ್ದಾರೆ. ಮುಖ್ಯಅತಿಥಿಗಳಾಗಿ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಸ್.ಕೆ.ಯಡಹಳ್ಳಿ ಸೇರಿ ಇತರರು ಆಗಮಿಸಲಿದ್ದಾರೆ. ಮೆರವಣಿಗೆ ರೇಣಾಕಾಚಾರ್ಯ ವೃತ್ತದಿಂದ ಆರಂಭವಾಗಿ ಇಂಜಿನಿಯರಿಂಗ್ ಕಾಲೇಜು ವೃತ್ತದ ಮೂಲಕ ಸಾಯಿ ಮಂದಿರ ಆವರಣ ತಲುಪಲಿದೆ ಎಂದರು.

    10.30 ಗಂಟೆಗೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದ್ದು, ವಿಪಕ್ಷ ನಾಯಕ ಎಸ್.ಆರ್.ಪಾಟೀಲ ಉದ್ಘಾಟಿಸಲಿದ್ದಾರೆ. ಚರಂತಿಮಠದ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಮುರುಗೇಶ ನಿರಾಣಿ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ಸಂಸದ ಪಿ.ಸಿ. ಗದ್ದಿಗೌಡರ ವಿವಿಧ ಕೃತಿಗಳ ಬಿಡುಗಡೆ ಮಾಡಲಿದ್ದಾರೆ. ವಿಪ ಸದಸ್ಯ ಹನುಮಂತ ನಿರಾಣಿ, ಜಿಪಂ ಸದಸ್ಯರಾದ ಹೂವಪ್ಪ ರಾಠೋಡ, ರಂಗನಗೌಡ ದಂಡನ್ನವರ, ಕವಿತಾ ದಡ್ಡಿ, ತಾಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ ಸೇರಿ ಇತರರು ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಬಸವರಾಜ ಮಠ ಕನ್ನಡ ಧ್ವಜ ಹಸ್ತಾಂತರ ಮಾಡಲಿದ್ದಾರೆ. ನಂತರ ಸರ್ವಾಧ್ಯಕ್ಷ ಎಸ್.ಎಸ್.ಹಳ್ಳೂರ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

    ವಿವಿಧ ಗೋಷ್ಠಿಗಳು
    ಮಧ್ಯಾಹ್ನ 1 ಗಂಟೆಗೆ ಬದುಕಿನ ಹೊಸ ಸಾಧ್ಯತೆಗಳು ಕುರಿತು ಗೋಷ್ಠಿ-1 ನಡೆಯಲಿದ್ದು, ಪತ್ರಕರ್ತ ರಾಮ ಮನಗೂಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಆಶಯ ನುಡಿ ಹೇಳಲಿದ್ದಾರೆ. ಎ.ಎ.ದಂಡಿಯಾ, ಅಶೋಕ ಲಿಂಬಾವಳಿ, ಡಾ.ಎಸ್.ಡಿ.ಕೆಂಗಲಗುತ್ತಿ, ಶ್ರೀಶೈಲ ಬಿರಾದಾರ, ಉಮಾ ಅಕ್ಕಿ, ಶಿವಾನಂದ ಪೂಜಾರ ಇತರರು ವಿಷಯ ಮಂಡಿಸಲಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ಶ್ರೀಶೈಲ ಕರಿಶಂಕರಿ ತಿಳಿಸಿದರು.

    ಮಧ್ಯಾಹ್ನ 3.15 ಗಂಟೆಗೆ ಸರ್ವಾಧ್ಯಕ್ಷರ ಬದುಕು ಬರಹ ಕುರಿತು ಗೋಷ್ಠಿ -2 ಜರುಗಲಿದ್ದು, ಸಾಹಿತಿ ಮೈನುದ್ದೀನ್ ರೇವಡಿಗಾರ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಸಂಜಯ ನಡುವಿನಮನಿ ಉಪನ್ಯಾಸ ನೀಡಲಿದ್ದಾರೆ. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಜಿ.ಐ.ನಂದಿಕೋಲಮಠ, ಕಾನಿಪ ಜಿಲ್ಲಾಧ್ಯಕ್ಷ ಸುಭಾಷ ಹೊದ್ಲುರ ಸೇರಿ ಇತರರು ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ. ಮಧ್ಯಾಹ್ನ 4.30 ಗಂಟೆಗೆ ಕವಿ ಸಮಯ ಕುರಿತು ಗೋಷ್ಠಿ-3 ನಡೆಯಲಿದೆ. ಸಾಹಿತಿ ಲಕ್ಷ್ಮಣ ಬದಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಡಾ.ಕೆ.ಪ್ರಹ್ಲಾದ ಆಶಯ ನುಡಿ ಹೇಳಲಿದ್ದಾರೆ. ಬಿ.ಎಂ.ಸಿಂಧೂರ, ಬಸವರಾಜ ಅಕ್ಕಿಮರಡಿ, ಯಲ್ಲಪ್ಪ ಕ್ಯಾದಿಗೇರಿ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ. ನಂತರ ಸಂಜೆ 6 ಗಂಟೆಗೆ ಬಹಿರಂಗ ಅಧಿವೇಶನ ನಡೆಯಲಿದ್ದು, ಪ್ರಮುಖ ನಿರ್ಣಯಗಳನ್ನು ಪ್ರಕಟಿಸಲಾಗುವುದು ಎಂದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts