More

    ಬಂಡವಾಳ ಶಾಹಿಗಳ ಪರ ಕಾನೂನು

    ಬಾಗಲಕೋಟೆ: ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಪುಣ್ಯಸ್ಮರಣೆ, ಮಾಜಿ ಉಪ ಪ್ರಧಾನಿ ಸರ್ದಾರ ವಲ್ಲಭಭಾಯಿ ಪಟೇಲ್ ಜಯಂತಿ ಅಂಗವಾಗಿ ನಗರದ ಹೊಳೆ ಆಂಜನೇಯ ದೇವಸ್ಥಾನ ಆವರಣದಲ್ಲಿ ಜಿಲ್ಲಾ ಕಾಂಗ್ರೆಸ್ ಘಟಕದಿಂದ ಕಿಸಾನ್ ಅಧಿಕಾರ ದಿವಸ್ ಆಚರಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತರು ಹಾಗೂ ಜನ ವಿರೋಧಿ ನೀತಿ ಖಂಡಿಸಿ ಶನಿವಾರ ಧರಣಿ ನಡೆಸಲಾಯಿತು.

    ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ ಮಾತನಾಡಿ, ಕೇಂದ್ರ, ರಾಜ್ಯ ಸರ್ಕಾರ ರೈತರು, ವ್ಯಾಪಾರಸ್ಥರು, ಕಾರ್ಮಿಕರು ಹಾಗೂ ಬಡ ಜನರ ಕಡೆಗಣಿಸುತ್ತಿವೆ. ಅವರ ಅನುಕೂಲಕರವಾಗಿದ್ದ ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ಶ್ರೀಮಂತರನ್ನು ಓಲೈಸುತ್ತಿವೆ. ರಾಜ್ಯದ 126 ಎಪಿಎಂಸಿಗಳಿಂದ ವರ್ಷಕ್ಕೆ 600 ಕೋಟಿ ರೂ. ಆದಾಯ ಬರುತ್ತಿತ್ತು. ಇದೀಗ 125 ಕೋಟಿ ರೂ.ಗೆ ಆದಾಯ ಕಡಿತಗೊಂಡಿದೆ. ಎಪಿಎಂಸಿಗಳಲ್ಲಿ 25 ಸಾವಿರ ಜನರು ಹೊರ ಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದರು. ಅದೂ ಈಗ 1200ಕ್ಕೆ ಇಳಿದಿದೆ. ಕಾಯ್ದೆ ತಿದ್ದುಪಡಿಯಿಂದ ಎಪಿಎಂಸಿಗಳೂ ಬಾಗಿಲು ಬಂದ್ ಮಾಡಲಿವೆ ಎಂದರು.

    ಮಾಜಿ ಸಚಿವ ಎಚ್.ವೈ. ಮೇಟಿ, ಮಾಜಿ ಶಾಸಕ ಜೆ.ಟಿ. ಪಾಟೀಲ ಹಾಗೂ ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ, ನಗರಸಭೆ ಸದಸ್ಯ ಚನ್ನವೀರ ಅಂಗಡಿ, ಜಿಲ್ಲಾ ವಕ್ತಾರ ನಾಗರಾಜ ಹದ್ಲಿ, ಕಿಸಾನ್ ಘಟಕದ ಕಾರ್ಯಾಧ್ಯಕ್ಷ ಗಿರೀಶ ಅಂಕಲಗಿ, ಮುಖಂಡರಾದ ಚಂದ್ರಶೇಖರ ರಾಠೋಡ, ಸತೀಶ ಬಂಡಿವಡ್ಡರ, ಎನ್.ಬಿ. ಗಸ್ತಿ, ನಿಂಗನಗೌಡ ಪಾಟೀಲ, ಎನ್.ಜಿ. ಕೋಟಿ, ಎಸ್.ಎನ್. ರಾಂಪುರ ಇದ್ದರು.

    ಕಾಂಗ್ರೆಸ್ 70 ವರ್ಷಗಳಲ್ಲಿ ರೈತರಿಗೆ ಭೂಮಿ ಹಕ್ಕು ನೀಡಿದೆ. ಬಡತನ ನಿರ್ಮೂಲನೆಗೆ ಸಾಕಷ್ಟು ಯೋಜನೆ ಜಾರಿಗೆ ತಂದಿದೆ. ದೇಶದ ಅಭಿವೃದ್ಧಿಗೆ ಮಹತ್ತರ ಕ್ರಮ ತೆಗೆದುಕೊಂಡಿದೆ. ಕಾಂಗ್ರೆಸ್ ಉಳುವವನೆ ಒಡೆಯ ಎಂದು ಹೇಳಿತು. ಇಂದು ಬಿಜೆಪಿ ಕಾನೂನು ಬದಲಾಯಿಸಿ ಉಳ್ಳವರೇ ಭೂಮಿ ಒಡೆಯರು ಎನ್ನುತ್ತಿದೆ.
    ರಕ್ಷಿತಾ ಭರತಕುಮಾರ ಈಟಿ, ಜಿಲ್ಲಾ ಅಧ್ಯಕ್ಷೆ, ಮಹಿಳಾ ಕಾಂಗ್ರೆಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts