ನೈಜ ಇತಿಹಾಸ ಅರಿತು ಆರೋಪಿಸಿ

blank

ಬಾಗಲಕೋಟೆ: ಬಿವಿವಿ ಸಂಘಕ್ಕೆ ಪಡೆದಿರುವ ಭೂಮಿ, ಮುಂದೆ ಪಡೆಯುತ್ತಿರುವ ಜಮೀನು ಕಾನೂನು ಚೌಕಟ್ಟಿನಲ್ಲಿ ಎಲ್ಲ ವ್ಯವಹಾರ ಇದೆ. ಇದರಲ್ಲಿ ವೈಯಕ್ತಿಕ ಹಿತಾಸಕ್ತಿ ಇಲ್ಲ. ನೈಜ ಇತಿಹಾಸ ಅರಿಯದೆ. ಸಂಪೂರ್ಣ ಮಾಹಿತಿ ಇಲ್ಲದೆ ಆರೋಪಿಸುವುದು ತರವಲ್ಲ ಎಂದು ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರವೇ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ಮಾಡಿರುವ ಪ್ರತಿಯೊಂದು ಆರೋಪಕ್ಕೆ ಪ್ರತ್ಯುತ್ತರ ನೀಡಿದರು. ತಮ್ಮ ಪ್ರತಿ ಮಾತಿನಲ್ಲಿಯೂ ಇತಿಹಾಸದ ಘಟನಾವಳಿಗಳನ್ನು ವಿವರಿಸುತ್ತ ಕರವೇ ಸಂಘಟನೆಗೆ ತಿರುಗೇಟು ನೀಡಿದರು.
ಬಿವಿವಿ ಸಂಘದ ಆಡಳಿತ ಮಂಡಳಿಗೆ 35 ವರ್ಷ ಹಿಂದೆ ಸೇರ್ಪಡೆಯಾದೆ. 30 ವರ್ಷಗಳಿಂದ ಚೇರ್ಮನ್ ಆಗಿ ಸೇವೆ ಸಲ್ಲಿಸುತ್ತಿದ್ದೇನೆ. ನಾನು ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಬಾಗಲಕೋಟೆ ನಗರದಲ್ಲಿ ಮುಳುಗಡೆಯಾಗಿರುವ ಅಂಜುಮನ್ ಸಂಸ್ಥೆಯ ಸಮೀಪದ ಅಡವಿ ಸ್ವಾಮಿಮಠ, ಸರ್ಕಾರಿ ಶಾಲೆ ನಂಬರ್-9 ಹತ್ತಿರದ ಹುಂಡೇಕಾರ ಮಠ, ಐತಿಹಾಸಿಕ ಮೊಟಗಿ ಬಸವೇಶ್ವರ ದೇವಸ್ಥಾನಗಳು ಸೇರಿದಂತೆ ನಗರದ ವಿವಿಧ ಮಠ, ದೇವಸ್ಥಾನಗಳು ಬಿವಿವಿ ಸಂಘಕ್ಕೆ ಸೇರ್ಪಡೆಗೊಳಿಸಲಾಗಿದೆ. ಈ ಬಗ್ಗೆ ಅಧಿಕೃತ ದಾಖಲೆಗಳಿವೆ. ಇದುವರೆಗೂ ಮುಳುಗಡೆಯಾಗಿರುವ ಈ ಆಸ್ತಿಗಳ ಜಾಗ ಬಿಟಿಡಿಎದಿಂದ ನವನಗರದಲ್ಲಿ ಪಡೆದುಕೊಂಡಿಲ್ಲ ಎಂದು ತಿಳಿಸಿದರು.

ಬಿವಿವಿ ಸಂಘದ ಇಂಜಿನಿಯರಿಂಗ್ ಕಾಲೇಜಿಗೆ 253 ಎಕರೆ, ಮೆಡಿಕಲ್ ಕಾಲೇಜಿಗೆ 249 ಎಕರೆ ಸರ್ಕಾರದಿಂದ ಜಾಗ ಪಡೆಯಲಾಗಿದೆ. ಈ ಮೊದಲ ಲೀಜ್ ಮೂಲಕ ಭೂಮಿ ಪಡೆಯಲಾಗಿತ್ತು. ನಂತರ ರಾಜ್ಯದಲ್ಲಿ ಜೆ.ಎಚ್.ಪಟೇಲ್ ಅವರ ಸರ್ಕಾರವಿದ್ದಾಗ 1998 ರಲ್ಲಿ ಸರ್ಕಾರದ ಶುಲ್ಕ ಪಾವತಿ ಮಾಡಿ ಭೂಮಿ ಖರೀದಿಸಲಾಗಿದೆ. ಉತಾರಗಳು ಕೂಡ ಸಂಘದ ಹೆಸರಿನಲ್ಲಿವೆ. ಇನ್ನು ಇದರಲ್ಲಿ ವಿದ್ಯಾಗಿರಿ -ನವನಗರ ಸಂಪರ್ಕ ಕಲ್ಪಿಸಲು, ನವನಗರದ ಜನತೆಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಉದ್ದೇಶದಿಂದ ನೀರಿನ ಟ್ಯಾಂಕ್ ನಿರ್ಮಿಸಲು 13 ಎಕರೆ ಜಮೀನು ಸಾರ್ವಜನಿಕರಿಗೆ ಅನುಕೂಲವಾಗಲು ಸರ್ಕಾರಕ್ಕೆ ನೀಡಲಾಗಿದೆ. ಕಳೆದಕೊಂಡ ಭೂಮಿಯಿಂದ ಇಲ್ಲಿವರೆಗೆ ನವನಗರದಲ್ಲಿ ಜಾಗ ಪಡೆದುಕೊಂಡಿಲ್ಲ. ಎಲ್ಲವು ಕಾನೂನು ಮೂಲಕ ವ್ಯವಹಾರ ನಡೆಸಲಾಗಿದೆ ಎಂದು ಹೇಳಿದರು.

ಆದಿಕೇಶವಲು ಅವರಿಂದ ಜಮೀನು ಕೇಳಿಲ್ಲ
ಗ್ರೀನ್ ಫುಡ್ ಪಾರ್ಕ್‌ನಲ್ಲಿ ಜಮೀನು ಬಿವಿವಿ ಸಂಘಕ್ಕೆ ಕೇಳಲಾಗಿದೆ. ಆದಿಕೇಶವಲು ಅವರಿಂದ ಜಮೀನು ಕೇಳಿಲ್ಲ. ಕೆಐಡಿಬಿ ಮೂಲಕ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದಿಕೇಶವಲು ಅವರಿಂದ 21 ಎಕರೆ ಜಾಗ ಹುಬ್ಬಳ್ಳಿ ಮೂಲದ ವ್ಯಕ್ತಿ ಜಮೀನು ಪಡೆದಿದ್ದಾರೆ. ಅದನ್ನು ಮಾರಾಟ ಮಾಡಲು ಆ ವ್ಯಕ್ತಿ ಮುಂದೆ ಬಂದಿದ್ದು, ಬಿವಿವಿ ಸಂಘ ಖರೀದಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಸರಿಯಾದ ದಾಖಲೆ, ಕಾನೂನು ಚೌಕಟ್ಟು ಇದ್ದಾಗ ಭೂಮಿ ಖರೀದಿಸಲಾಗುವುದು. ಗ್ರೀನ್ ಫುಡ್ ಪಾರ್ಕ್‌ನಲ್ಲಿ ಸರ್ಕಾರದಿಂದ ಸಂಘಕ್ಕೆ ಜಮೀನು ಕೇಳುವುದರಲ್ಲಿ ತಪ್ಪು ಏನಿದೆ? ಎಂದು ಶಾಸಕ ವೀರಣ್ಣ ಚರಂತಿಮಠ ಪ್ರಶ್ನಿಸಿದರು.

ಕರವೇ ಸಂಘಟನೆಗೆ ಸವಾಲು!
ಬಿವಿವಿ ಸಂಘ, ಶಾಸಕ ಚರಂತಿಮಠ ಗುರಿಯಾಗಿಸಿ ಆರೋಪ, ಹೋರಾಟ ಮಾಡುವುದರಲ್ಲಿ ಹುರಳಿಲ್ಲ. ಗದ್ದನಕೇರಿ ರಸ್ತೆಯಲ್ಲಿರುವ ಸ್ಪಿನಿಂಗ್ ಮಿಲ್ 54 ಎಕರೆ ಭೂಮಿ ಬಿಡ್ ಮೂಲಕ ಬಿವಿವಿ ಸಂಘದ ಪಡೆದಿದೆ. ಮಿಲ್ ಬಂದ್‌ಗೆ ಕಾರಣಗಳೇನು? ಹಗರಣದ ರೂವಾರಿಗಳು ಯಾರು? ತಿಳಿದುಕೊಳ್ಳಲಿ. ಬಾಗಲಕೋಟೆ ನಗರದ ಹೊರ ವಲಯದ ಎಪಿಎಂಸಿಗೆ ಸೇರಿದ 30 ಎಕರೆ ಜಮೀನು ಎನ್‌ಎ ಆಗಿತ್ತು. ಪ್ರತಿ ಎಕರೆಗೆ ಕೇವಲ 50 ಸಾವಿರದಂತೆ ಭೂಮಿ ಖರೀದಿಸಿದ್ದಾರೆ. ಲಕ್ಷಾಂತರ ಬೆಲೆ ಬಾಳುವ ಭೂಮಿ ಕಡಿಮೆ ಮೊತ್ತಕ್ಕೆ ವ್ಯವಹಾರ ಮುಗಿದಿರುವ ಹಿಂದೆ ಯಾರ ಕೈವಾಡವಿದೆ. ಎಪಿಎಂಸಿ ಆವರಣದಲ್ಲಿ ಸರ್ಕಾರದಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ರೈತ ಭವನ ಇದು ಯಾವ ಖಾಸಗಿ ವ್ಯಕ್ತಿ ಪಾಲಾಗಿದೆ? ಯಾರ ಅವಧಿಯಲ್ಲಿ ಇವೆಲ್ಲ ಹಗರಣ ನಡೆದವು? ಇಂತಹ ನಿಜವಾದ ಗೋಲ್‌ಮಾಲ್ ವಿರುದ್ಧ ಹೋರಾಟ ಮಾಡಿ ಎಂದು ಕರವೇ ಸಂಘಟನೆಗೆ ಶಾಸಕ ವೀರಣ್ಣ ಚರಂತಿಮಠ ಸವಾಲು ಹಾಕಿದರು.

ಸರ್ಕಾರಿ ಕಾಮಗಾರಿಗಳ ಗುಣಮಟ್ಟ ಪರೀಕ್ಷೆ ವಿಷಯದಲ್ಲಿ ಥರ್ಡ್ ಪಾರ್ಟಿ ಇನ್ಸ್‌ಫೆಕ್ಸನ್ ಬಿವಿವಿ ಸಂಘದ ಕಾಲೇಜುಗಳಿಗೆ ನೀಡಿ ಅಂತ ಹೇಳಿಲ್ಲ. ಇಲ್ಲಿರುವ ಸೌಲಭ್ಯ ನೋಡಿಕೊಂಡು ಸರ್ಕಾರದ ವಿವಿಧ ಇಲಾಖೆಗಳು ನಾನಾ ಕಾಮಗಾರಿಗಳ ಗುಣಮಟ್ಟ ಪರೀಕ್ಷೆಗೆ ಶಿಫಾರಸು ಮಾಡುತ್ತಾರೆ. ಇದರಲ್ಲಿ ಯಾವ ವೈಯಕ್ತಿಕ ಹಿತಾಸಕ್ತಿ ಅಡಗಿಲ್ಲ. ಕರವೇ ಸಂಘಟನೆ ಆರೋಪದಲ್ಲಿ ಸತ್ಯಾಂಶವಿಲ್ಲ. ನನ್ನ ಮೇಲೆ ಇಡಿ, ಸಿಬಿಐ ಯಾವುದೇ ತನಿಖೆ ಸಂಸ್ಥೆಗೆ ದೂರು ನೀಡಬಹುದು.
ವೀರಣ್ಣ ಚರಂತಿಮಠ ಶಾಸಕ, ಬಿವಿವಿ ಸಂಘದ ಕಾರ್ಯಾಧ್ಯಕ್ಷ

Share This Article

ಈ ಸಮಸ್ಯೆಗಳಿರುವ ಜನರು, ಅಪ್ಪಿತಪ್ಪಿಯೂ ಸಹ ಬಿಸಿನೀರನ್ನು ಕುಡಿಯಬಾರದು! hot water

hot water: ಸಾಮಾನ್ಯವಾಗಿ ಜನರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರನ್ನು ಕುಡಿಯಲು ಇಷ್ಟಪಡುತ್ತಾರೆ.  ವಯಸ್ಕರು…

ದಂಪತಿ ನಡುವೆ ಜಗಳ, ಹಣದ ಸಮಸ್ಯೆಗಳನ್ನು ತಪ್ಪಿಸಲು, ಮನೆಯ ಈ ಮೂಲೆಯಲ್ಲಿ ನವಿಲು ಗರಿಯನ್ನು ಇರಿಸಿ ಸಾಕು… Vastu Tips

Vastu Tips : ಪೌರಾಣಿಕ ಗ್ರಂಥಗಳ ಪ್ರಕಾರ, ಹಿಂದೂ ಧರ್ಮದಲ್ಲಿ ನವಿಲು ಗರಿಗಳಿಗೆ ವಿಶೇಷ ಸ್ಥಾನವಿದೆ. …

ಮಧ್ಯಾಹ್ನದ ಊಟದಲ್ಲಿ ಈ 2 ಪದಾರ್ಥಗಳನ್ನು ತಿಂದರೆ ನಿಮ್ಮನ್ನು ಮಧ್ಯಾಹ್ನ ಕಾಡುವ ನಿದ್ರೆ ಮಾಯ!

sleep: ಮಧ್ಯಾಹ್ನ ಊಟ ಮಾಡಿದ ನಂತರ ನಿದ್ರೆ ಬರುವುದು  ಸಹಜ.  ಈ ರೀತಿಯ ನಿದ್ರೆ ಬರುವುದರಿಂದ,…