More

    ಸೆಮಿಫೈನಲ್ ಪ್ರವೇಶಿಸಿ ಪದಕ ಖಚಿತಪಡಿಸಿದ ಭಾರತ ಬ್ಯಾಡ್ಮಿಂಟನ್ ತಂಡ: ಸಿಂಧು ಪಡೆಗೆ ನಿರಾಸೆ

    ಹಾಂಗ್‌ರೆೌ: ಭಾರತದ ಪುರುಷ ಷಟ್ಲರ್‌ಗಳ ತಂಡ 37 ವರ್ಷಗಳ ಬಳಿಕ ಏಷ್ಯಾಡ್‌ನ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪೋಡಿಯಂ ಏರಲು ಸಜ್ಜಾಗಿದೆ. ಎಚ್‌ಎಸ್ ಪ್ರಣಯ್ ನೇತೃತ್ವದ ಪುರುಷರ ತಂಡ ಸೆಮಿೈನಲ್ ಪ್ರವೇಶಿಸುವ ಮೂಲಕ ಐತಿಹಾಸಿಕ ಪದಕ ಖಚಿತಪಡಿಸಿಕೊಂಡಿದೆ. ಪಿವಿ ಸಿಂಧು ನೇತೃತ್ವದ ಮಹಿಳಾ ತಂಡ ಕ್ವಾರ್ಟರ್‌ೈನಲ್‌ನಲ್ಲೇ ಮುಗ್ಗರಿಸಿ ಪದಕ ವಂಚಿತವಾಯಿತು.

    https://x.com/BAI_Media/status/1707705285111095751?s=20

    ಶುಕ್ರವಾರ ನಡೆದ ಪುರುಷರ ವಿಭಾಗದ ಕ್ವಾರ್ಟರ್‌ೈನಲ್‌ನಲ್ಲಿ ಭಾರತ ತಂಡ 3-0ರಿಂದ ನೇಪಾಳ ತಂಡವನ್ನು ಮಣಿಸಿತು. ಸ್ವರ್ಣ ಸುತ್ತಿಗೇರಲು ಭಾರತ ಇಂಡೋನೇಷ್ಯಾ ಅಥವಾ ಕೊರಿಯಾ ಸವಾಲು ಎದರಿಸಲಿದೆ. 1986ರಲ್ಲಿ ಪುರುಷರ ತಂಡ ಕೊನೆಯದಾಗಿ ಪದಕ (ಕಂಚು) ಜಯಿಸಿತ್ತು. ಸಿಂಗಲ್ಸ್ ಪಂದ್ಯದಲ್ಲಿ ಲಕ್ಷ್ಯಸೇನ್ ಕಿಡಂಬಿ ಶ್ರೀಕಾಂತ್ ಮತ್ತು ಕನ್ನಡಿಗ ಮಿಥುನ್ ಮಂಜುನಾಥ್ ನೇರಗೇಮ್‌ಗಳಿಂದ ಗೆಲುವು ದಾಖಲಿಸಿದರು.
    ಮಹಿಳಾ ತಂಡ ವಿಭಾಗದಲ್ಲಿ ಭಾರತ ಎಂಟರ ಘಟ್ಟದಲ್ಲಿ ಥಾಯ್ಲೆಂಡ್‌ಗೆ 0-3ರಿಂದ ಮಣಿದು ಸವಾಲು ಅಂತ್ಯಗೊಳಿಸಿತು. ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು 21-14, 15-21, 14-21ರಿಂದ ವಿಶ್ವ ನಂ.12 ಪೋರ್ನ್ಪಾವೀ ಚೋಚುವಾಂಗ್ ಎದುರು ಆಘಾತ ಎದುರಿಸಿದರು. ನಂತರ ಡಬಲ್ಸ್‌ನಲ್ಲಿ ತ್ರಿಸಾ ಜೋಲಿ-ಗಾಯತ್ರಿ ಗೋಪಿಚಂದ್, 2ನೇ ಸಿಂಗಲ್ಸ್‌ನಲ್ಲಿ ಆಶ್ಮಿತ ಚಲಿಹಾ ಸೋಲುಂಡರು.

    https://x.com/BAI_Media/status/1707716833292505460?s=20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts