More

    ನಂದಿಕೇಶ್ವರ ಆರೋಗ್ಯ ಕೇಂದ್ರಕ್ಕೆ ಬೀಗ

    ಬಾದಾಮಿ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತಾಲೂಕಿನ ನಂದಿಕೇಶ್ವರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶನಿವಾರ ಬೆಳಗ್ಗೆ ಗ್ರಾಮದ ಒಂದು ಕುಟುಂಬದವರು ಬೀಗ ಜಡಿದು, ಮುಖ್ಯಗೇಟ್‌ಗೆ ಮುಳ್ಳು ಕಂಟಿ ಹಾಕಿ ಬಂದ್ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದರು.

    ಶಾಸಕರ ಅನುದಾನದಲ್ಲಿ 180 ಲಕ್ಷ ರೂ. ವೆಚ್ಚದ 8 ಹಾಸಿಗೆಯ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಲು ಕಟ್ಟಡ ಕಾಮಗಾರಿ ಪ್ರಾರಂಭಿಸಲು ಮುಂದಾದಾಗ ಗ್ರಾಮದ ಒಂದು ಕುಟುಂಬದವರು ಆಸ್ಪತ್ರೆಗೆ ಬೀಗ ಹಾಕಿದರು. ನಂತರ ಪೊಲೀಸರು ಮಧ್ಯೆ ಪ್ರವೇಶಿಸಿ ಮುಳ್ಳು ಕಂಠಿ ತೆರವುಗೊಳಿಸಿ ಆಸ್ಪತ್ರೆಯ ಬೀಗ ತೆಗೆದು ಸಿಬ್ಬಂದಿ ಕರ್ತವ್ಯಕ್ಕೆ ಅವಕಾಶ ಮಾಡಿಕೊಟ್ಟರು.

    ವೈದ್ಯಾಧಿಕಾರಿ ಡಾ.ಆರ್.ಸಿ. ಭಂಡಾರಿ ಸುದ್ದಿಗಾರರ ಜತೆ ಮಾತನಾಡಿ, ಗ್ರಾಮದಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಒದಗಿಸಲು ಇಲ್ಲಿ ಆಸ್ಪತ್ರೆ ಬಹಳ ಅವಶ್ಯಕವಾಗಿದೆ. ಆಸ್ಪತ್ರೆಗೆ ಸಂಬಂಧಿತ ದಾಖಲೆಗಳು ಸರಿಯಾಗಿವೆ. 1984ರಲ್ಲಿ ಗ್ರಾಮದ ಹಿರಿಯರಿಂದ ಜಾಗದ ಕುರಿತು ದಾನ ಪತ್ರವಾಗಿದ್ದು 1.06 ಎಕರೆ ಜಾಗದಲ್ಲಿ ಆಸ್ಪತ್ರೆ ಕಟ್ಟಲು ಏನು ತೊಂದರೆ ಇಲ್ಲ. ಸಾರ್ವಜನಿಕರ ಆರೋಗ್ಯ ಸೇವೆಗಾಗಿ ನಿರ್ಮಿಸುವ ಕಟ್ಟಡ ಕಾಮಗಾರಿಗೆ ತೊಂದರೆ ಮಾಡುವುದರಿಂದ ಏನೂ ಪ್ರಯೋಜನವಿಲ್ಲ ಎಂದು ಹೇಳಿದರು.

    ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ವಿವಾದ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಸೋಮವಾರ ಗ್ರಾಮದ ಜನತೆಯ ಸಭೆ ಕರೆದು ಸಮಸ್ಯೆ ಇತ್ಯರ್ಥಪಡಿಸಲಾಗುವುದು.
    ಸುಹಾಸ ಇಂಗಳೆ, ಬಾದಾಮಿ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts